ETV Bharat / sitara

ವೈನಿಧಿ ನಟನೆಯ 'ಓ ಫಿಶ್​​ ' ಕಿರುಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ - Vainidhi starring O fish short film

ದೀಕ್ಷಿತ್ ಶೆಟ್ಟಿ ಹಾಗೂ ವೈನಿಧಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಓ ಫಿಶ್' ಕಿರುಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರವನ್ನು ವಿದ್ಯಾ ಬಿ. ರೆಡ್ಡಿ ನಿರ್ಮಿಸಿ ನಿರ್ದೇಶಿಸಿದ್ದಾರೆ. ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಈ ಕಿರುಚಿತ್ರ ಲಭ್ಯವಿದೆ.

O Fish  short film
ಓ ಫಿಶ್ ಕಿರುಚಿತ್ರ
author img

By

Published : Sep 14, 2020, 2:12 PM IST

ಕೇಟಲ್ಸ್ ಸ್ಟುಡಿಯೋ ಬ್ಯಾನರ್ ಅಡಿ ವಿದ್ಯಾ ಬಿ. ರೆಡ್ಡಿ ನಿರ್ದೇಶಿಸಿರುವ 'ಓ ಫಿಶ್' ಕಿರುಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಿರುಚಿತ್ರದಲ್ಲಿ ಜೈಜಗದೀಶ್​​​​​ ಹಾಗೂ ವಿಜಯಲಕ್ಷ್ಮಿ ಸಿಂಗ್ ಪುತ್ರಿ ವೈನಿಧಿ ಹಾಗೂ 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಿರುಚಿತ್ರ ಕನ್ನಡ, ತೆಲುಗು ಎರಡೂ ಭಾಷೆಗಳಲ್ಲಿ ನೋಡಲು ಲಭ್ಯವಿದೆ.

  • " class="align-text-top noRightClick twitterSection" data="">

ಒಂದೇ ಅಪಾರ್ಟ್​ಮೆಂಟ್​​ನಲ್ಲಿ ವಾಸಿಸುವ ಇಬ್ಬರ ಪಾರ್ಸೆಲ್ ಅದಲು ಬದಲಾಗಿರುತ್ತದೆ. ನಾಯಕಿ ಫಿಶ್​ಗಾಗಿ, ನಾಯಕ ಮೊಟ್ಟೆಗಾಗಿ ಆರ್ಡರ್ ಮಾಡಿರುತ್ತಾನೆ. ಡೆಲಿವರಿ ಬಾಯ್ ಕನ್ಫ್ಯೂಸ್ ಮಾಡಿಕೊಂಡು ಇಬ್ಬರ ಪಾರ್ಸೆಲ್ ಬದಲು ಮಾಡಿರುತ್ತಾನೆ. ಇಬ್ಬರೂ ಪಾರ್ಸೆಲ್ ತೆಗೆದು ನೋಡಿದಾಗ ಬೇಸರ ಆಗುತ್ತದೆ. ನಾಯಕಿ ಡೆಲಿವರಿ ಬಾಯ್​​ಗೆ ಕರೆ ಮಾಡಿದಾಗ ದಯವಿಟ್ಟು ನೀವೇ ನಿಮ್ಮ ನಿಮ್ಮ ಪಾರ್ಸೆಲ್​​​ಗಳನ್ನು ಪಡೆಯಿರಿ ಎಂದು ಡೆಲಿವರಿ ಬಾಯ್ ಮನವಿ ಮಾಡಿ ನಾಯಕನ ಫೋನ್ ನಂಬರ್​ ನೀಡುತ್ತಾನೆ. ಇತ್ತ ನಾಯಕ ಆಗಲೇ ಫಿಶ್ ಕರಿ ಮಾಡಿರುತ್ತಾನೆ. ನಾಯಕಿ, ನಾಯಕನನ್ನು ಹುಡುಕಿಕೊಂಡು ಬಂದಾಗ ಆತ ಫಾರಿನ್​​​ನಿಂದ ಬಂದಿದ್ದಾನೆ ಎಂಬ ಕಾರಣಕ್ಕೆ ಕ್ವಾರಂಟೈನ್​​​​ನಲ್ಲಿರುತ್ತಾನೆ....ಇಬ್ಬರೂ ತಮ್ಮ ತಮ್ಮ ಪಾರ್ಸೆಲ್ ಪಡೆಯುತ್ತಾರಾ...? ಮುಂದೆ ಏನಾಗುತ್ತದೆ ಎಂಬುದೇ 'ಓ ಫಿಶ್' ಕಿರುಚಿತ್ರದ ಕಥೆ.

O Fish  short film
ನಂದಿನಿ ಬಿ ರೆಡ್ಡಿ

10 ನಿಮಿಷದ ಈ ಕಿರುಚಿತ್ರದಲ್ಲಿ ರವಿಕಿರಣ್, ರಾಜೇಂದ್ರ, ಸಿಂಧೂರ್, ಎಂ. ಚಂದ್ರಕಾಂತ್, ರೋಷನ್ ರಾಯ್​ ನಟಿಸಿದ್ದಾರೆ. ವಿದ್ಯಾ ಬಿ ರೆಡ್ಡಿ ಈ ಕಿರುಚಿತ್ರಕ್ಕೆ ಕಥೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ಕೂಡಾ ಮಾಡಿದ್ದಾರೆ. ವಿದ್ಯಾ ಜೊತೆಗೆ ನಂದಿನಿ ಬಸುಪಲ್ಲಿ ಕೂಡಾ ಈ ಕಿರುಚಿತ್ರಕ್ಕೆ ಬಂಡವಾಳ ಷೇರ್ ಮಾಡಿದ್ದಾರೆ. ಶ್ರೀನಿಧಿ ವೆಂಕಟ್ ಸಂಗೀತ, ಓಂ ಪ್ರಕಾಶ್ ಛಾಯಾಗ್ರಹಣ, ಅಂಶುಮಾನ್ ಗೋಕುಲ್ ಸಂಕಲನ ಮಾಡಿದ್ದಾರೆ.

O Fish  short film
ದೀಕ್ಷಿತ್ ಶೆಟ್ಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.