ETV Bharat / sitara

ಕಿರುತೆರೆಯಲ್ಲಿ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಗಿರೀಶ್ ಬೆಟ್ಟಪ್ಪ - ಗಿರೀಶ್ ಬೆಟ್ಟಪ್ಪ

'ಗಟ್ಟಿಮೇಳ'ದಲ್ಲಿ ಸಾರ್ಥಕ್ ಆಗಿ ಅಭಿನಯಿಸುತ್ತಿರುವ ಗಿರೀಶ್ ಬೆಟ್ಟಪ್ಪ ನಟನಾ ಲೋಕದಲ್ಲಿ ಯಶಸ್ವಿಯಾಗಿ ನಾಲ್ಕು ವರ್ಷಗಳನ್ನು ಪೂರೈಸಿದ್ದು, ಈ ಕುರಿತಾಯಾದ ಮಾಹಿತಿಯನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಗಿರೀಶ್ ಬೆಟ್ಟಪ್ಪ
ಗಿರೀಶ್ ಬೆಟ್ಟಪ್ಪ
author img

By

Published : Mar 26, 2021, 12:11 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ'ದಲ್ಲಿ ಸಾರ್ಥಕ್ ಆಗಿ ಅಭಿನಯಿಸುತ್ತಿರುವ ಗಿರೀಶ್ ಬೆಟ್ಟಪ್ಪ ನಟನಾ ಕ್ಷೇತ್ರದಲ್ಲಿ ಯಶಸ್ವಿಯಾಗಿ ನಾಲ್ಕು ವರ್ಷಗಳನ್ನು ಪೂರೈಸಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಗಿರೀಶ್ ಅವರೇ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸತ್ಯಂ ಶಿವಂ ಸುಂದರಂ' ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದ ಗಿರೀಶ್, ಸದ್ಯಕ್ಕೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸತ್ಯಂ ಶಿವಂ ಸುಂದರಂ ಧಾರಾವಾಹಿಯಲ್ಲಿ ಸತ್ಯರಾಜ್ ಅರಸ್ ಆಗಿ ನಟಿಸುವ ಮೂಲಕ ಬಣ್ಣದ ಪಯಣ ಶುರು ಮಾಡಿರುವ ಅವರು, ಸದ್ಯಕ್ಕೆ ಸಾರ್ಥಕ್ ಪಾತ್ರದ ಮೂಲಕ ಮನೆಮಾತಾಗಿದ್ದಾರೆ.

ಗಿರೀಶ್ ಬೆಟ್ಟಪ್ಪ
ಗಿರೀಶ್ ಬೆಟ್ಟಪ್ಪ

ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡಿರುವ ಗಿರೀಶ್, ತಮ್ಮ ಮೊದಲ ದಿನದ ಚಿತ್ರೀಕರಣದ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ '4 ವರ್ಷಗಳ ಹಿಂದಿನ ಫೋಟೋ, ಬಣ್ಣದ ಲೋಕದಲ್ಲಿ ನನ್ನ ಮೊದಲ ದಿನ, ಕಿರು ಪರದೆಯಲ್ಲಿ ನಾನು ಮೊದಲ ಬಾರಿ ಕಂಡಿದ್ದು ಹೀಗೆ.. ಮುಂದಿನದ್ದೆಲ್ಲಾ ಇತಿಹಾಸ' ಎಂದು ಬರೆದುಕೊಂಡಿದ್ದಾರೆ.

ಗಿರೀಶ್ ಬೆಟ್ಟಪ್ಪ
ಗಿರೀಶ್ ಬೆಟ್ಟಪ್ಪ

ಇನ್ನು 'ಗಟ್ಟಿಮೇಳ' ಧಾರವಾಹಿಯಲ್ಲಿ ನಿಶಾ ರವಿಕೃಷ್ಣನ್, ರಕ್ಷ್, ಅನ್ವಿತಾ ಸಾಗರ್, ಅಶ್ವಿನಿ, ಅಭಿಷೇಕ್ ದಾಸ್, ಪ್ರಿಯಾ ಆಚಾರ್, ಸುಧಾ ನರಸಿಂಹರಾಜು ಮುಂತಾದ ದೊಡ್ಡ ತಾರಾಗಣವಿದ್ದು, ಆರಂಭದ ದಿನದಿಂದಲೂ ಜನರ ಮನಸ್ಸು ಗೆದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.