ವಿವಿಧ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ಸೆಳೆದಿರುವ ವಾಹಿನಿಗಳ ಪೈಕಿ ಜೀ ಕನ್ನಡ ಕೂಡಾ ಒಂದು. ವಿಭಿನ್ನ ಕಥೆಗಳ ಮೂಲಕ ಗಮನ ಸೆಳೆಯುವ ಧಾರಾವಾಹಿಗಳು ಒಂದೆಡೆಯಾದರೆ, ವಾರಾಂತ್ಯದಲ್ಲಿ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುವ ಧಾರಾವಾಹಿಗಳು ಇನ್ನೊಂದೆಡೆ.
ಈ ಧಾರಾವಾಹಿಗಳ ಸಾಲಿಗೆ ಇದೀಗ 'ಜೀನ್ಸ್'ರಿಯಾಲಿಟಿ ಶೋ ಕೂಡಾ ಸೇರಿದೆ. ಒಂದೆರಡು ತಿಂಗಳ ಹಿಂದೆಯೇ'ಜೀನ್ಸ್' ಕಾರ್ಯಕ್ರಮದ ಅದ್ಭುತ ಪ್ರೊಮೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿತ್ತು. ಅದು ಯಾವಾಗ ಪ್ರಸಾರವಾಗಲಿದೆ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಇದೀಗ ಈ ಶೋ ಆಡಿಶನ್ ಕೂಡಾ ಶೀಘ್ರದಲ್ಲಿ ನಡೆಯಲಿದೆ. ಆದರೆ, ಈ ಕಾರ್ಯಕ್ರಮ ಕೇವಲ ಅವಳಿ ಜವಳಿಗಳಿಗೆ ಮೀಸಲಾಗಿದೆ.
- " class="align-text-top noRightClick twitterSection" data="">
ನೀವು ಅವಳಿ ಜವಳಿಗಳೇ? ಅವನು ಯಾರು, ಇವನು ಯಾರು? ಅವಳಾ ಇವಳಾ ಎಂಬ ಕನ್ಫೂಶನ್ ನಿಮ್ಮನ್ನು ನೋಡಿದವರಿಗೆ ಅಗುತ್ತದೆಯೇ? ಅದು ಇರಲಿ ಬಿಡಿ, ಈಗ ನೀವು ಗಮನ ಹರಿಸಬೇಕಾದದ್ದು ಒಂದು ವೇಳೆ ನೀವು ಅವಳಿ ಜವಳಿಗಳಾಗಿದ್ದಲ್ಲಿ ನೀವೂ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ನಿಮ್ಮ ನಂಬರನ್ನು 9538868274 ಈ ಮೊಬೈಲ್ ನಂಬರ್‌ಗೆ ವಾಟ್ಸ್ಆ್ಯಪ್ ಮಾಡಿದರೆ ಸಾಕು. ಫೋಟೋದೊಂದಿಗೆ ಸ್ವವಿವರ ಕಡ್ಡಾಯವಾಗಿ ಕೂಡಾ ಇರಬೇಕು.