ಟಿಕ್ ಟಾಕ್ ಸ್ಟಾರ್ ಧನುಶ್ರೀ, ನಿರ್ಮಾಪಕಿ ನಿರ್ಮಲಾ, ಕಿರುತೆರೆ ನಟಿ ಗೀತಾ ನಂತರ ಮತ್ತೊಬ್ಬ ಹಿರಿಯ ಸದಸ್ಯೆ ಹಾಗೂ ನಟಿ ಚಂದ್ರಕಲಾ ಮೋಹನ್ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ನಾಮಿನೇಟ್ ಪ್ರಕ್ರಿಯೆಯಲ್ಲಿ ಪ್ರಶಾಂತ್ ಸಂಬರಗಿ, ಶಮಂತ್, ವಿಶ್ವನಾಥ್ ಹಾಗೂ ಶಂಕರ್ ಅಶ್ವಥ್ ಅವರೊಂದಿಗಿದ್ದ ಚಂದ್ರಕಲಾ, ಈ ಬಾರಿ ಅತಿ ಕಡಿಮೆ ಮತಗಳನ್ನು ಪಡೆದು ಬಿಗ್ ಬಾಸ್ ಮನೆಯ ಪ್ರಯಾಣ ಅಂತ್ಯಗೊಳಿಸಿದ್ದಾರೆ.
ಹಿರಿಯ ಸದಸ್ಯೆ ಎಂಬ ಕಾರಣಕ್ಕೆ ಅಡುಗೆ ವಿಭಾಗದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದ ಚಂದ್ರಕಲಾ ಮೋಹನ್ ತಮ್ಮಲ್ಲಿರುವ ವಿಶೇಷತೆಯನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಅವರೂ ಸೇರಿದಂತೆ ಹಲವರ ಅಭಿಪ್ರಾಯವಾಗಿದೆ.
ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಚೈತ್ರಾ ಕೋಟೂರ್
ಈ ಬಗ್ಗೆ ಸುದೀಪ್ ಅವರ ಬಳಿ ಮಾತನಾಡಿದ ಚಂದ್ರಕಲಾ ಅವರು, ಕಿಚನ್‌ನಲ್ಲಿ ಮೂರು ವಾರ ಇದ್ದೆ. ಇದರಿಂದ ಬೇರೆ ಕಡೆ ಹೋಗೋಕೆ ಆಗ್ತಿಲ್ಲ ಎಂದು ಅನಿಸಿತು. ಕಿಚನ್‌ನಿಂದ ಹೊರಬಂದ ಮೇಲೆ ನಾನೇನಾದರೂ ಮಾಡಬೇಕು ಅಂದುಕೊಂಡೆ. ನನಗೆ ಬದಲಾಗೋಕೆ ಇಷ್ಟ ಇಲ್ಲ. ನಾನು ಹೇಗೆ ಇದ್ದೀನೋ ಹಾಗೇ ಇದ್ದೇನೆ. ನನಗೆ ಕೆಲವೊಂದು ಮಾತುಗಳು ಇಷ್ಟವಾಗಲ್ಲ. ಮನೆಯಲ್ಲಿ ಹಿರಿತನ ಮುಖ್ಯ ಆಗಲ್ಲ. ನಮ್ಮ ಬುದ್ಧಿಶಕ್ತಿ ಮತ್ತು ಯೋಚನೆ ಮಾಡೋ ರೀತಿ ಮುಖ್ಯ. ವಯಸ್ಸು ಮುಖ್ಯವಾಗುವುದೇ ಇಲ್ಲ. ಮನೆಯಲ್ಲಿ ಮುಂದಕ್ಕೆ ಹೋಗುವಾಗ ಹಿಂದಕ್ಕೆ ಎಳೆಯುವವರು ಇದ್ದಾರೆ. ಆದರೆ, ಈಗ ಎಲ್ಲರೂ ಸ್ನೇಹಿತರಾಗಿದ್ದಾರೆ ಎಂದು ತಮ್ಮ ಅನುಭವ ಹಂಚಿಕೊಂಡರು.