ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ನಲ್ಲಿ ಅನುಬಂಧ ಅವಾರ್ಡ್ಸ್ ವಿಶೇಷ ಸಂಚಿಕೆಗಳು ನಡೆಯುತ್ತಿವೆ. ಈಗಾಗಲೇ ಮಂಗಳಗೌರಿ ಮದುವೆ, ನನ್ನರಸಿ ರಾಧೆ, ಗಿಣಿರಾಮ ಹೀಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ತಂಡ ಮಜಾ ಟಾಕೀಸ್ಗೆ ಬಂದು ಮಜಾ ಮಾಡುವುದು ಮಾತ್ರವಲ್ಲದೇ ವೀಕ್ಷಕರಿಗೂ ಮನರಂಜನೆ ನೀಡಿದ್ದಾರೆ.
- " class="align-text-top noRightClick twitterSection" data="
">
ಈ ವಾರ ಜನಪ್ರಿಯ ಧಾರಾವಾಹಿ 'ಕನ್ನಡತಿ' ತಂಡ ಮಜಾ ಟಾಕೀಸ್ ಮೂಲಕ ನಿಮಗೆಲ್ಲಾ ಮಜಾ ನೀಡಲು ಸಜ್ಜಾಗಾಗಿದ್ದಾರೆ. ಕನ್ನಡತಿಯ ಕಲಾವಿದರಾದ ರಂಜನಿ ರಾಘವನ್, ಕಿರಣ್ ರಾಜ್, ಚಿತ್ಕಲಾ ಬಿರಾದಾರ್, ರಕ್ಷಿತ್, ರಮೊಲಾ, ಸಾರಾ ಅಣ್ಣಯ್ಯ ಹೀಗೆ ಕನ್ನಡತಿಯಲ್ಲಿ ನಟಿಸುತ್ತಿರುವ ನಟ-ನಟಿಯರು ಮಜಾ ಟಾಕೀಸ್ನಲ್ಲಿ ಈ ವಾರಾಂತ್ಯದಲ್ಲಿಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ತೆರೆಯ ಹಿಂದೆ ನಡೆದಿರುವಂತಹ ಕೆಲವು ಸನ್ನಿವೇಶಗಳನ್ನು ಹಂಚಿಕೊಳ್ಳಲಿದ್ದಾರೆ. ಸಹಕಲಾವಿದರ ನಡುವೆ ಇರುವ ಬಾಂಧವ್ಯವನ್ನು ಕೂಡಾ ವೀಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ.

ಈ ಎಲ್ಲಾ ಮನರಂಜನೆ ಜೊತೆ ಮಜಾ ಟಾಕೀಸ್ನಲ್ಲಿ ವೀಕ್ಷಕರಿಗೆ ಹೆಚ್ಚು ಮಜಾ ನೀಡಲು ಪ್ರೊಫೆಸರ್ ಸುಯ್ ಟಪಕ್ ಎಂಟ್ರಿ ಆಗಿದೆ. ವಿಠಲ್ ರಾವ್ ಆಗಿ ಮೋಡಿ ಮಾಡಿದ್ದ ರವಿಶಂಕರ್ ಅವರ ಹೊಸ ಅವತಾರವನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಒಟ್ಟಿನಲ್ಲಿ ಕಾಮಿಡಿಯ ಮೂಲಕ ನಕ್ಕುನಗಿಸುವ ಮಜಾಟಾಕೀಸ್ಗೆ ಸೆಲಬ್ರಿಟಿಗಳನ್ನು ಕರೆಸಿ ಮಾತನಾಡಿಸಲಾಗುತ್ತಿದ್ದು ಈ ವಾರ ವೀಕ್ಷಕರಿಗಂತೂ ಮಜಾವೋ ಮಜಾ ಎನ್ನಬಹುದು.