ETV Bharat / sitara

ಮತ್ತೊಮ್ಮೆ ಕ್ಯಾಪ್ಟನ್​ ಆದ ದಿವ್ಯಾ ಉರುಡುಗ: ಫಿನಾಲೆಗೆ ನೇರ ಎಂಟ್ರಿ - Divya Uruduga directly enter to the bigg boss Finale

ಈ ವಾರ ಕೊಟ್ಟಿದ್ದ ನೀನಾ ನಾನಾ ಟಾಸ್ಕ್​ನಲ್ಲಿ ಅಧಿಕ ಅಂಕಗಳಿಸುವ ಮೂಲಕ ವೈಷ್ಣವಿ ಗೌಡ, ಅರವಿಂದ್​, ದಿವ್ಯಾ ಉರುಡುಗ, ಶಮಂತ್​ ಹಾಗೂ ಮಂಜು ಪಾವಗಡ ಅವರು ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಭಾಗಿಯಾಗಿದ್ದರು. ಆದರೆ ಈ ಟಾಸ್ಕ್​ನಲ್ಲಿ ಗೆಲ್ಲುವ ಮೂಲಕ ದಿವ್ಯಾ ಉರುಡುಗ ಮತ್ತೊಮ್ಮೆ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ.

ದಿವ್ಯಾ ಉರುಡುಗ
Divya Uruduga
author img

By

Published : Jul 24, 2021, 10:04 AM IST

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಸ್ಟ್ರಾಂಗ್​ ಕಂಟೆಸ್ಟೆಂಟ್​ ಆಗಿ ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್ ಸೀಸನ್​ 8 ರಲ್ಲಿ ಮೊದಲ ಮಹಿಳಾ ಕ್ಯಾಪ್ಟನ್​ ಆಗುವ ಮೂಲಕ ಹೊಸ ದಾಖಲೆ ಬರೆದಿದ್ದರು. ಇದೀಗ ಸೀಸನ್ ​8ರಲ್ಲಿ ಫಿನಾಲೆಗೆ ಹೋದ ಮೊದಲ ಸ್ಪರ್ಧಿ ಅನ್ನೋದೇ ವಿಶೇಷ.

ಬಿಗ್​ಬಾಸ್ ಅಂತಿಮ ಘಟಕ್ಕೆ ಬರುತ್ತಿದ್ದು, ಆಗಸ್ಟ್‌ ಎರಡನೇ ವಾರ ಬಿಗ್ ಬಾಸ್ ಸೀಸನ್8 ರ ವಿನ್ನರ್ ಯಾರಾಗಲಿದ್ದಾರೆ ಎಂಬುದು ಗೊತ್ತಾಗಲಿದೆ. ಈ ವಾರ ಕ್ಯಾಪ್ಟನ್​ ಟಾಸ್ಕ್​ನಲ್ಲಿ ಭಾಗಿಯಾಲು ಅರ್ಹತೆ ಪಡೆಯುವುದಕ್ಕೆ ನೀನಾ ನಾನಾ ಟಾಸ್ಕ್ ​ನೀಡಲಾಗಿತ್ತು. ಇದರಲ್ಲಿ ಉತ್ತಮವಾಗಿ ಆಟವಾಡಿ ಎರಡನೇ ಬಾರಿಗೆ ಕ್ಯಾಪ್ಟನ್ ಆಗುವ ಮೂಲಕ ಫಿನಾಲೆಗೆ ಎಂಟ್ರಿಕೊಟ್ಟಿದ್ದಾರೆ.

ಈ ವಾರ ದಿವ್ಯಾ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ಅವರ ಕೈಗೆ ಪೆಟ್ಟಾಗಿತ್ತು. ಅಷ್ಟೇ ಅಲ್ಲದೇ ಆಪ್ತ ಎನಿಸಿಕೊಂಡಿದ್ದ ಅರವಿಂದ್​ ಕೆ.ಪಿ ಅವರು ದಿವ್ಯಾ ಉರುಡುಗ ವಿರುದ್ಧ ತಿರುಗಿ ಬಿದ್ದಿದ್ದರು. ಇಬ್ಬರ ನಡುವೆ ಮನಸ್ತಾಪ ಕೂಡ ಉಂಟಾಗಿತ್ತು. ಆದರೆ, ಅವರು ಛಲ ಬಿಡದೆ ಈ ವಾರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮನೆಯಲ್ಲಿ ಅತ್ಯುತ್ತಮ ಪಟ್ಟಕ್ಕಾಗಿ ಚರ್ಚೆ ನಡೆದಾಗ ಕೈ ಗಾಯ ಮಾಡಿಕೊಂಡಿದ್ದರೂ ತಮ್ಮ ಅತ್ಯುತ್ತಮ ಆಟ ನೀಡಿ ಎಲ್ಲರಿಂದಲೂ ‌ಪ್ರಶಂಸೆ ಗಳಿಸಿದ್ದಾರೆ. ಹೀಗಾಗಿ, ಕ್ಯಾಪ್ಟನ್ ಜೊತೆಗೆ ಅತ್ಯುತ್ತಮ ಪಟ್ಟ ಕೂಡ ಮುಡಿಗೇರಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಬಿಗ್​ಬಾಸ್ ಮನೆಯಲ್ಲಿ ನೂರು ದಿನ ಕಳೆದ ನಂತರ ಕೊನೆಯ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್​ಗಳಾದ ಅರವಿಂದ್, ಮಂಜು, ವೈಷ್ಣವಿ ಮತ್ತು ಶಮಂತ್ ವಿರುದ್ಧ ಗೆಲ್ಲುವ ಮೂಲಕ ತಾವೂ ಟಾಪ್‌ ಕಂಟೆಸ್ಟೆಂಟ್ ಎಂಬುದನ್ನು ದಿವ್ಯಾ ಸಾಬೀತುಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.