ಬೆಂಗಳೂರು: ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿದ ಕೆಲವರಿಗೆ ನಟ ಅರುಗೌಡ ಹಾಗೂ ಪ್ಯಾಟೆ ಮಂದಿ ಖ್ಯಾತಿಯ ನಟಿ ಐಶ್ವರ್ಯ ಕ್ಲಾಸ್ ತೆಗೆದು ಕೊಂಡಿದ್ದು, ಥಿಯೇಟರ್ನಲ್ಲಿದ್ದ ಇತರೆ ವೀಕ್ಷಕರೂ ಕೂಡ ಅವರಿಗೆ ಸಾಥ್ ನೀಡಿದ್ದಾರೆ.
ಒರಾಯನ್ ಮಾಲ್ನಲ್ಲಿ ಧನುಷ್ಅಭಿನಯದ ಅಸುರನ್ ಸಿನಿಮಾ ನೋಡುತ್ತಿದ್ದ ವೇಳೆ ರಾಷ್ಟ್ರಗೀತೆ ಆರಂಭವಾದರೂ ಎದ್ದು ನಿಲ್ಲದೆ ಕೆಲವರು ಅಗೌರವ ತೋರಿಸಿದ್ದರು.
ರಾಷ್ಟ್ರಗೀತೆ ಆರಂಭವಾಗಿದೆ ಎದ್ದು ನಿಲ್ಲಿ ಎಂದು ಹೇಳಿದರೂ ಅವರು ಸರಿಯಾಗಿ ಸ್ಪಂದಿಸದೆ ಉಡಾಫೆಯಿಂದ ಉತ್ತರಿಸಿದ್ದಾರೆ ಎಂದು ಹೇಳಲಾಗಿದೆ. ಸಿನಿಮಾ ಮಧ್ಯಂತರ ವೇಳೆಯಲ್ಲಿ ಇತರ ಸಿನಿಮಾ ವೀಕ್ಷಕರು ಐಶ್ವರ್ಯ ಹಾಗೂ ಅರುಗೌಡಗೆ ಸಾಥ್ ನೀಡಿದ್ದಾರೆ.
ರಾಷ್ಟ್ರಗೀತೆಗೆ ಅವಮಾನ ಮಾಡಿದ ಆ ಐದು ಮಂದಿ ಸದ್ಯಕ್ಕೆ ಯಾರೆಂದು ತಿಳಿದುಬಂದಿಲ್ಲ. ಅವರು ಹಿಂದಿ ಮಾತನಾಡುತ್ತಿದ್ದರು. ಬಹುಶಃ ಉತ್ತರ ಭಾರತೀಯರು ಇರಬಹುದು ಎಂದು ಐಶ್ವರ್ಯ ಅವರು ಈಟಿವಿ ಭಾರತ್ಗೆ ತಿಳಿಸಿದ್ದಾರೆ.