ದಿಶಾ ಮದನ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? 'ಕುಲವಧು' ಧಾರಾವಾಹಿಯಲ್ಲಿ ವಚನಾ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ದಿಶಾ ಮದನ್ ನಟಿಸಿದ್ದು ಒಂದೇ ಧಾರಾವಾಹಿಯಲ್ಲಾದರೂ ಇಂದಿಗೂ ಕಿರುತೆರೆ ವೀಕ್ಷಕರಿಗೆ ಪರಿಚಿತ ಮುಖ. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಬಂದ ಈಕೆ ಕುಲವಧುವಿನ ವಚನಾ ಆಗಿ ಮೋಡಿ ಮಾಡಿದರು.
ಇದನ್ನೂ ಓದಿ: ಕನ್ನಡ ಉಳಿಸೋಣ ಎಂದು ಹೇಳುವುದೇ ನಮ್ಮ ಮೊದಲ ಸೋಲು...ಸುದೀಪ್ ಹೀಗೆ ಹೇಳಿದ್ದೇಕೆ..?
ಸದ್ಯಕ್ಕೆ ಬಣ್ಣದ ಲೋಕದಿಂದ ದೂರವಿರುವ ದಿಶಾ ಮದನ್, ಈಗ ಒಂದೂವರೆ ವರ್ಷದ ಮಗ ವಿಯಾನ್ ಜೊತೆ ಕಾಲ ಕಳೆಯುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ದಿಶಾ ಮದನ್ ಇತ್ತೀಚೆಗಷ್ಟೇ ಹೊಸ ಪೋಟೋಶೂಟ್ ಮಾಡಿಸಿದ್ದಾರೆ. ಅಂದ ಹಾಗೆ ಆ ಫೊಟೋಶೂಟ್ನಲ್ಲಿ ವಿಯಾನ್ ಕೂಡಾ ಇರುವುದು ವಿಶೇಷ. ಅಮ್ಮನ ಜೊತೆಗೆ ವಿಯಾನ್ ಕೂಡಾ ಫೋಟೋಗಳಿಗೆ ಚೆಂದವಾಗಿ ಫೋಸ್ ಕೊಟ್ಟಿದ್ದು ಮುದ್ದು ಕಂದನನ್ನು ಕಂಡ ನೆಟಿಜನ್ಸ್ ವಾವ್ ಎಂದು ಉದ್ಘರಿಸಿದ್ದಾರೆ. ಮ್ಯೂಸಿಕ.ಲಿ ಎಂಬ ಆ್ಯಪ್ ನಲ್ಲಿ ಸಕ್ರಿಯರಾಗಿದ್ದ ದಿಶಾ ಮದನ್ ಹೊಂದಿದ್ದ ಫಾಲೋವರ್ಸ್ಗಳ ಸಂಖ್ಯೆ 2.6 ಮಿಲಿಯನ್.ಮ್ಯೂಸಿಕ.ಲಿ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದಿದ್ದ ದಿಶಾ ಮದನ್ 'ಹೇಟ್ ಯೂ ರೋಮಿಯೋ' ಎಂಬ ವೆಬ್ ಸಿರೀಸ್ನಲ್ಲಿ ಅರವಿಂದ್ ಅಯ್ಯರ್ಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಪನ್ನಗಾಭರಣ ನಿರ್ದೇಶನದ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ಕೂಡಾ ಪತ್ರಕರ್ತೆಯಾಗಿ ನಟಿಸಿದ್ದಾರೆ.