ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ರೌಡಿಸಂ ನಿಂದ ಹಿಡಿದು ಲವ್ ಸ್ಟೋರಿ, ನೈಜ ಘಟನೆಗಳನ್ನ ಸಿನಿಮಾ ಮಾಡಿ ಸೈ ಎನ್ನಿಸಿಕೊಂಡಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಇದೀಗ ಭಾರತದಲ್ಲಿ ಮೊದಲ ಬಾರಿಗೆ ಲೆಸ್ಬಿಯನ್ ಕಥೆಯ ಜೊತೆಗೆ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನಿಟ್ಟುಕೊಂಡು ದಕ್ಷಿಣ ಭಾರತದಲ್ಲಿ ಗಮನ ಸೆಳೆಯುತ್ತಿದ್ದಾರೆ. ಸದ್ಯಕ್ಕೆ ಟ್ರೈಲರ್ ಹಾಗೂ ಪೋಸ್ಟರ್ನಿಂದಲೇ ಹವಾ ಎಬ್ಬಿಸಿರೋ 'ಖತ್ರಾ ಡೇಂಜರಸ್' ಇದೇ ಏಪ್ರಿಲ್ 8 ರಂದು ತೆರೆಕಾಣಲಿದೆ.
'ಖತ್ರಾ ಡೇಂಜರಸ್' ಪ್ರಚಾರದ ಹಿನ್ನೆಲೆ ರಾಮ್ ಗೋಪಾಲ್ ವರ್ಮಾ, ನಟಿಯಾರದ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಜೊತೆ ಬೆಂಗಳೂರಿಗೆ ಬಂದಿದ್ದರು. ಟ್ರೈಲರ್ನಲ್ಲಿ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಸಿಕ್ಕಾಪಟ್ಟೆ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾ ಕುರಿತು ಮಾತನಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಸಿನಿಮಾವು ಸಲಿಂಗಕಾಮಿಗಳ ಕತೆಯನ್ನ ಕಟ್ಟಿಕೊಟ್ಟಿದೆ. ಕತೆ, ಮೇಕಿಂಗ್ ಎಲ್ಲಾ ಚೆನ್ನಾಗಿದೆ ಅಂತಾ ಹೇಳಿದರು. ಅಪ್ಸರ ರಾಣಿ ಮಾತನಾಡಿ, ನಾನು ಆರ್ಜಿವಿ ಜೊತೆ ಸಿನಿಮಾ ಮಾಡಿ, ಸಾಕಷ್ಟು ವಿಷಯಗಳನ್ನ ಕಲಿತುಕೊಂಡೆ, ಈ ತರಹದ ಪಾತ್ರ ಮಾಡೋದು ತುಂಬಾ ಚಾಂಲೆಜಿಂಗ್ ಆಗಿತ್ತು ಅಂತಾ ಹೇಳಿದರು.
ಬಳಿಕ ಮಾತನಾಡಿದ ಪಂಜಾಬಿ ಬೆಡಗಿ ನೈನಾ ಗಂಗೂಲಿ, ನಾನು ಈಗಾಗಲೇ ಎರಡು ಸಿನಿಮಾ ಮಾಡಿರಬಹುದು. ಆದರೆ, ನಿರ್ದೇಶಕರು ಏನು ಹೇಳ್ತಾರೋ ಅದನ್ನ ಮಾಡುತ್ತೇನೆ. ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವುದು ತಪ್ಪೆನಲ್ಲ ಎಂದರು.
'ಖತ್ರಾ ಡೇಂಜರಸ್'ನಲ್ಲಿ ಬಾಲಿವುಡ್ ಹಾಸ್ಯ ನಟ ರಾಜ್ ಪಾಲ್ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಓಟಿಟಿಯಲ್ಲಿ ಮಾತ್ರ ಕನ್ನಡ ವರ್ಷನ್ ಬಿಡುಗಡೆ ಆಗಲಿದೆ. ಈಗಾಗಲೇ ಟ್ರೈಲರ್ ನಿಂದಲೇ ಸಖತ್ ಕ್ರೇಜ್ ಹುಟ್ಟಿಸಿರೋ 'ಕತ್ರಾ ಡೇಂಜರಸ್' ಸಿನಿಮಾ, ಬಿಡುಗಡೆ ಆದ ಮೇಲೆ ಪಡ್ಡೆ ಹುಡುಗರ ನಿದ್ದೆಗೆಡಿಸೋದು ಗ್ಯಾರಂಟಿ.
ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಬಾಲಿವುಡ್ನ ಬಿಗ್ ಬಿ?