ಮುಂಬೈ: ದಿಯಾ ಔರ್ ಬಾತಿ ಹಮ್' ಹಿಂದಿ ಧಾರಾವಾಹಿ ಖ್ಯಾತಿಯ ನಟಿ ದೀಪಿಕಾ ಸಿಂಗ್ ಅವರ ತಾಯಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಆದರೆ, ಪರೀಕ್ಷೆ ನಡೆಸಿದ ಆಸ್ಪತ್ರೆ ಇದರ ವರದಿಗಳನ್ನು ನೀಡಿಲ್ಲ. ಬದಲಾಗಿ ಆಸ್ಪತ್ರೆ ಸಿಬ್ಬಂದಿ ವರದಿಯ ಫೋಟೋ ತೆಗೆದುಕೊಳ್ಳುವಂತೆ ಹೇಳಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂ ಮೂಲಕ ಕಳವಳ ವ್ಯಕ್ತಪಡಿಸಿರುವ ನಟಿ, ತಮ್ಮ ಕುಟುಂಬಕ್ಕೆ ಆದಷ್ಟು ಬೇಗ ವೈದ್ಯಕೀಯ ನೆರವು ನೀಡುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಒತ್ತಾಯಿಸಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ನನ್ನ ತಾಯಿಗೆ ಕೋವಿಡ್-19 ಪಾಸಿಟಿವ್ ಬಂದಿದೆ. ತಾಯಿ ಮತ್ತು ತಂದೆ ದೆಹಲಿಯಲ್ಲಿದ್ದಾರೆ. ಲೇಡಿ ಹಾರ್ಡಿಂಗ್ ಆಸ್ಪತ್ರೆಯಲ್ಲಿ ಪರೀಕ್ಷೆಯನ್ನು ಮಾಡಲಾಗಿತ್ತು. ಅವರು ವರದಿಗಳನ್ನು ನೀಡದೇ, ಅದರ ಫೋಟೋ ತೆಗೆಯಲು ಮಾತ್ರ ನನ್ನ ತಂದೆಗೆ ಅವಕಾಶ ನೀಡಿದರು. ಸಂಬಂಧಪಟ್ಟವರು ಇದನ್ನು ಓದಿ ಸಹಾಯ ಮಾಡುತ್ತಾರೆಂದು ನಾನು ಭಾವಿಸಿದ್ಧೇನೆ ಎಂದು ಬರೆದಿದ್ದಾರೆ.
ಆಸ್ಪತ್ರೆಯಿಂದ ವರದಿ ನೀಡದ ಕಾರಣ ತಂದೆ ಬಹಳ ಕಷ್ಟ ಎದುರಿಸುತ್ತಿದ್ದಾರೆ. 59 ವರ್ಷದ ನನ್ನ ತಾಯಿ ಇನ್ನೂ ಮನೆಯಲ್ಲಿದ್ದಾರೆ. ವರದಿಗಳಿಲ್ಲದೇ ಯಾವುದೇ ಆಸ್ಪತ್ರೆಗೆ ದಾಖಲಿಸಲಾಗುವುದಿಲ್ಲ. ತಾಯಿಗೆ ಸರಿಯಾದ ಔಷಧ ಹಾಗೂ ಚಿಕಿತ್ಸೆ ಸಿಗದಿದ್ದಲ್ಲಿ, 45 ಸದಸ್ಯರನ್ನು ಒಳಗೊಂಡ ಕುಟುಂಬ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ ಎಂದು ವಿಡಿಯೋದಲ್ಲಿ ದೀಪಿಕಾ ಸಿಂಗ್ ಹೇಳಿದ್ದಾರೆ.
ಪ್ರಸ್ತುತ ಪತಿ ಮತ್ತು ಮಗನೊಂದಿಗೆ ಮುಂಬೈನಲ್ಲಿ ತಂಗಿರುವ ದೀಪಿಕಾ, ತನ್ನ ಕುಟುಂಬಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾರೆ. ಫೋನ್ ಮೂಲಕ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.