ದೇಶಾದ್ಯಂತ ಕೊರೊನಾ ಎರಡನೇ ಅಲೆ ಭಯಾನಕವಾಗಿದ್ದು, ಸಾವಿನ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಈ ಕೊರೊನಾ ಆರ್ಭಟ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹೆಚ್ಚಾಗಿದೆ. ಕೊರೊನಾದಿಂದ ಕಾಪಾಡಲು ಈಗಾಗಲೇ ರಾಜ್ಯ ಸರ್ಕಾರ ಕರ್ಫ್ಯೂ ಘೋಷಣೆ ಮಾಡಿದೆ. ಹೀಗಿದ್ದರೂ ಕೊರೊನಾ ಮಾತ್ರ ಕಂಟ್ರೋಲ್‌ಗೆ ಸಿಗುತ್ತಿಲ್ಲ.
ಇನ್ನು ಅನವಶ್ಯಕವಾಗಿ ಜನರು ಹೊರಗಡೆ ಓಡಾಡೋದನ್ನು ಮಾತ್ರ ಕಡಿಮೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ರಾಮಾ ರಾಮಾ ರೇ ಸಿನಿಮಾ ಖ್ಯಾತಿಯ ನಟ ಧರ್ಮಣ್ಣ ಕಡೂರು ಕಿವಿಮಾತು ಹೇಳಿದ್ದಾರೆ.
"ಮೊದಲೆಲ್ಲ ಯುದ್ಧ ಮಾಡಿ ದೇಶ ಉಳಿಸಬೇಕಿತ್ತು. ಈಗ ಮನೆಯಲ್ಲಿದ್ದು ನಿದ್ದೆ ಮಾಡಿ ದೇಶ ಉಳಿಸಬೇಕಾದ ಸ್ಥಿತಿ ಬಂದಿದೆ. ಕೊರೊನಾ ಅನ್ನೋದು ನಮ್ಮ ಅಕ್ಕಪಕ್ಕದವರನ್ನೇ ಕೊಂಡೊಯ್ಯುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ದಯವಿಟ್ಟು ಎಲ್ಲರೂ ಹುಷಾರಾಗಿರಿ. ಸಾಧ್ಯವಾದಷ್ಟು ಮನೆಯಲ್ಲೇ ಇರಿ" ಎಂದು ಮನವಿ ಮಾಡಿದ್ದಾರೆ.
"ಸರ್ಕಾರ ಈಗ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುತ್ತಿದೆ. ತಪ್ಪದೇ ತೆಗೆದುಕೊಳ್ಳಿ. ಅನವಶ್ಯಕವಾಗಿ ಯಾರೂ ಹೊರಗಡೆ ಬರಬೇಡಿ" ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ.