ಬಿಗ್ಬಾಸ್ ಮನೆಯಲ್ಲಿ ಜಗಳ ಹಾಗೂ ಕೂಗಾಟ ಆರಂಭವಾಗಿದೆ. ಚಕ್ರವರ್ತಿ ಚಂದ್ರಚೂಡ ಅವರು ಮನೆಯಲ್ಲಿ ಬೇಸರ ಮಾಡಿಕೊಂಡಿದ್ದು, ಕಪ್ಪು ಬಾವುಟ ಹಾರಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಈ ವಾರ ಕಳಪೆ ಪ್ರದರ್ಶನಕ್ಕಾಗಿ ಜೈಲಿಗೆ ಹೋಗಿರುವ ಚಕ್ರವರ್ತಿ, ಕಳಪೆ ನೀಡಿರುವುದಕ್ಕೆ ಸಮಜಾಯಿಷಿ ನೀಡುವಂತೆ ಸದಸ್ಯರನ್ನು ಒತ್ತಾಯಿಸಿದ್ದರು. ಆದರೆ, ಸದಸ್ಯರು ಯಾವುದಕ್ಕೂ ಸೊಪ್ಪು ಹಾಕದ ಹಿನ್ನೆಲೆ ಮನೆಯ ಜೈಲಿನಲ್ಲಿಯೇ ಪ್ರತಿಭಟನೆ ಶುರು ಮಾಡಿಕೊಂಡಿದ್ದಾರೆ.
ಟಾಸ್ಕ್ ಆಡುವ ಭರದಲ್ಲಿ ದಿವ್ಯ ಉರುಡುಗ ಕೈಗೆ ಪೆಟ್ಟಾಗಿತ್ತು. ಇದಕ್ಕೆ ಚಕ್ರವರ್ತಿ ಕಾರಣ ಎಂದು ದಿವ್ಯ ಉರುಡುಗ, ಚಂದ್ರಚೂಡ ಅವರಿಗೆ ಕಳಪೆ ಪ್ರದರ್ಶನ ನೀಡಿದಾರೆ ಎಂದಿದ್ದರು. ಅಲ್ಲದೆ ಶಮಂತ್, ಶುಭ ಪೂಂಜಾ, ಪ್ರಶಾಂತ್ ಸಂಬರ್ಗಿ ಹಾಗೂ ಪ್ರಿಯಾಂಕಾ ತಿಮ್ಮೇಶ್ ಅವರುಗಳು ಚಕ್ರವರ್ತಿಯವರಿಗೆ ಕಳಪೆ ನೀಡಿದರು. ಇದರಿಂದ ಕೋಪಗೊಂಡ ಚಕ್ರವರ್ತಿ ಜೈಲಿಗೆ ಹೋದ ನಂತರ ಮತ್ತೆ ಮತ್ತೊಬ್ಬರ ವಿಷಯಕ್ಕೆ ಮೂಗು ತೂರಿಸಿಕೊಂಡು ಜಗಳ ತೆಗೆಯುತ್ತಿದ್ದಾರೆ.
ಜೈಲಿನಲ್ಲಿಯೇ ಕಪ್ಪು ಕವರ್ ಕಟ್ಟಿಕೊಂಡು, ಪೋಸ್ಟರ್ ಬರೆದು ಗೋಡೆಗಳ ಮೇಲೆ 'ಅವಕಾಶವಾದಿ', ಸಾಂಬಾರ್ ಕಾಗೆ, ಫೇಕ್ ಪಿಂಕಿ, ಸುಬ್ಬಿ-ಡಬ್ಬಿ ಎಂಬ ಬರಹಗಳನ್ನು ಬರೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ಪ್ರತಿಭಟನೆಯ ಹಾಡು ಬರೆದು ಕರ್ನಾಟಕಕ್ಕೆ ತೋರಿಸುತ್ತೇನೆ, ಸತ್ಯ ಗೊತ್ತಾಗಬೇಕು ಎಂದಿದ್ದಾರೆ.
ನಿನ್ನೆ ಶಮಂತ್ ಅವರೊಂದಿಗೆ ಜಗಳ ಮಾಡಿಕೊಂಡ ಚಕ್ರವರ್ತಿ, ತರಕಾರಿ ಕೂಡ ಹೆಚ್ಚಿ ಕೊಡಲಿಲ್ಲ. ರಾಗಿ ಗಂಜಿ ಕುಡಿಯದೆ ಅದರಲ್ಲಿ ಸ್ಲೋಗನ್ಗಳನ್ನು ಬರೆದು ಪ್ರತಿಭಟಿಸುತ್ತಿದ್ದಾರೆ.