ನಟಿ, ಬರಹಗಾರ್ತಿ ಹಾಗೂ ರಿಯಾಲಿಟಿ ಶೋ ಬಿಗ್ಬಾಸ್ನಲ್ಲಿ ಪಾಲ್ಗೊಂಡ ಚೈತ್ರಾ ಕೋಟೂರ್ 'ಪ್ರೀತಿ'ಯಲ್ಲಿ ಬಿದ್ದಿರುವ ವಿಷಯವನ್ನು ಫೇಸ್ಬುಕ್ ಮೂಲಕ ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="">
ಬಿಗ್‌ಬಾಸ್ ಮನೆ ಮೂಲಕ ಚಿರಪರಿಚಿತವಾಗಿದ್ದ ಇವರು, ಕಳೆದ ಕೆಲ ದಿನಗಳಿಂದ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೀಗ ನಾನು ಪ್ರೀತಿಯಲ್ಲಿ ಬಿದ್ದಿದ್ದೀನಿ. ಆದರೆ ಯಾರ ಜೊತೆಗೆ ಅಂತ ಕೇಳಬೇಡಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಚೈತ್ರಾ ಕೋಟೂರ್, ಮತ್ತೋರ್ವ ಸ್ಪರ್ಧಿ ಶೈನ್ ಶೆಟ್ಟಿಯನ್ನು ಲವ್ ಮಾಡ್ತಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತು. ಆದರೆ ಇದೀಗ ಅವರು ಈ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ಹರಿಪ್ರಿಯಾ ನಟಿಸಿದ್ದ 'ಸೂಜಿದಾರ' ಸಿನಿಮಾದಲ್ಲಿ ಚೈತ್ರಾ ಕೂಡ ಪ್ರಮುಖ ಪಾತ್ರ ಮಾಡಿದ್ದರು.