ETV Bharat / sitara

ನಮ್ಮದು ಜಗತ್ತಿನ ಅತಿ ದೊಡ್ಡ ಲವ್ ಬ್ರೇಕಪ್​; ಪಾಪ್ ಸ್ಟಾರ್ ಬ್ರಿಟ್ನಿ - ಡೇಟಿಂಗ್

ಬ್ರಿಟ್ನಿ ಸ್ಪೀಯರ್ಸ್​ ಹಾಗೂ ಜಸ್ಟಿನ್ ಮಧ್ಯದ 3 ವರ್ಷಗಳ ಪ್ರೀತಿಯ ಸಂಬಂಧ 2002 ರಲ್ಲಿ ಮುರಿದು ಬಿದ್ದಿತ್ತು. ತಮ್ಮಿಬ್ಬರ ಮಧ್ಯದ ಸಂಬಂಧ ಮುರಿದು ಬಿದ್ದಿದ್ದು ಜಗತ್ತಿನ ಅತಿ ದೊಡ್ಡ ಲವ್ ಬ್ರೇಕಪ್​ ಎಂದು ಪಾಪ್ ಸ್ಟಾರ್ ಬ್ರಿಟ್ನಿ ಸ್ಪೀಯರ್ಸ್​ ಹೇಳಿಕೊಂಡಿದ್ದಾರೆ.

Britney Spears
Britney Spears
author img

By

Published : Apr 17, 2020, 7:37 PM IST

ಲಾಸ್ ಏಂಜೆಲೀಸ್​: ತಮ್ಮ ಹಾಗೂ ಜಸ್ಟಿನ್​ ಟಿಂಬರಲೇಕ್ ಮಧ್ಯದ ಸಂಬಂಧ ಮುರಿದು ಬಿದ್ದ ಘಟನೆ ಜಗತ್ತಿನ ಅತಿ ದೊಡ್ಡ ಲವ್ ಬ್ರೇಕಪ್​ಗಳಲ್ಲೊಂದು ಎಂದು ಪಾಪ್ ಸ್ಟಾರ್ ಬ್ರಿಟ್ನಿ ಸ್ಪೀಯರ್ಸ್ ಹೇಳಿದ್ದಾರೆ.

ಇನ್​ಸ್ಟಾಗ್ರಾಂ ನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿರುವ ಬ್ರಿಟ್ನಿ, "ಇದು ನನ್ನ ಸ್ನ್ಯಾಪ್​ಚಾಟ್​ ಅಥವಾ ಟಿಕ್​ಟೋಕ್" ಎಂದು ಬರೆದುಕೊಂಡಿದ್ದಾರೆ. ಜಸ್ಟಿನ್ ಟಿಂಬರಲೇಕ್​ ಅವರ "ಫಿಲ್ದಿ" ಹಾಡಿಗೆ ಬ್ರಿಟ್ನಿ ಹೆಜ್ಜೆ ಹಾಕಿರುವ ವಿಡಿಯೋ ಇದಾಗಿದೆ. ಹಾಡಿನ ತಾಳಕ್ಕೆ ಹೆಜ್ಜೆ ಹಾಕುತ್ತ ಡಾನ್ಸ್​ ಮಾಡಿದ್ದು ಕಾಣುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಮನೆಯಲ್ಲೇ ಈ ವಿಡಿಯೋ ಶೂಟ್ ಮಾಡಲಾಗಿದೆ.

ವಿಡಿಯೋ ಕ್ಯಾಪ್ಷನ್​ ಮುಂದುವರಿಸಿರುವ ಅವರು, "ಇದು ನನ್ನ ಸ್ನ್ಯಾಪ್​ಚಾಟ್​ ಅಥವಾ ಟಿಕ್​ಟೋಕ್ ಅಥವಾ ಈಗಿನ ಸಮಯದಲ್ಲಿ ಮಾಡಬಹುದಾದ ಯಾವುದೋ ಕೂಲ್​ ಕೆಲಸ ಎಂದುಕೊಳ್ಳಿ. ನಿಮಗೆ ಗೊತ್ತಾ? ನಾನು ಡಾನ್ಸ್​ ಮಾಡುತ್ತಿಲ್ಲ... ನಿಜವಾಗಿಯೂ ನನಗೆ ಬೋರ್ ಆಗಿದೆ." ಎಂದು ಬರೆದಿದ್ದಾರೆ.

ಬ್ರಿಟ್ನಿ ಸ್ಪೀಯರ್ಸ್​ ಹಾಗೂ ಜಸ್ಟಿನ್ ಮಧ್ಯದ 3 ವರ್ಷಗಳ ಪ್ರೀತಿಯ ಸಂಬಂಧ 2002 ರಲ್ಲಿ ಮುರಿದು ಬಿದ್ದಿತ್ತು. ತಮ್ಮ ಹಳೆಯ ಸಂಬಂಧದ ಬಗ್ಗೆಯೂ ಬ್ರಿಟ್ನಿ ಇಲ್ಲಿ ಹೇಳಿಕೊಂಡಿದ್ದಾರೆ.

"20 ವರ್ಷಗಳ ಹಿಂದೆ ನಮ್ಮ ಸಂಬಂಧ ಮುಗಿದು ಹೋಯಿತು. ಆದರೆ ಆತನೊಬ್ಬ ಜೀನಿಯಸ್, ಅದ್ಭುತ ಹಾಡು ಜೆಟಿ. ಓಹ್​ ಯಾವುದು ಒಳ್ಳೆಯದು ಎಂಬುದು ನಿನಗೆ ತಿಳಿಯಬೇಕಿತ್ತು" ಎಂದು ಬ್ರಿಟ್ನಿ ಹೇಳಿದ್ದಾರೆ.

ಟಿಂಬರಲೇಕ್​ 2012 ರಲ್ಲಿ ನಟಿ ಜೆಸ್ಸಿಕಾ ಬೀಯಲ್ ಅವರೊಂದಿಗೆ ಮದುವೆಯಾಗಿದ್ದು, 5 ವರ್ಷದ ಮಗನಿದ್ದಾನೆ. ಬ್ರಿಟ್ನಿ ಸ್ಪೀಯರ್ಸ್​​ಗೆ ಮಾಜಿ ಗಂಡನಿಂದ ಹುಟ್ಟಿದ ಇಬ್ಬರು ಗಂಡು ಮಕ್ಕಳಿದ್ದಾರೆ. ಸದ್ಯ ಬ್ರಿಟ್ನಿ ಸ್ಯಾಮ್​ ಅಸ್ಘಾರಿಯೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.