ETV Bharat / sitara

ಬಿಗ್​ಬಾಸ್​ -8: ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ!

ವೈಷ್ಣವಿ ಗೌಡ ಬಿಗ್​ಬಾಸ್​ ಮನೆಯಲ್ಲಿ ಕೋಪಗೊಂಡು ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಲು ಮುಂದಾಗುತ್ತಾರೆ. ತಕ್ಷಣವೇ ಅಲ್ಲಿಗೆ ಅದನ್ನು ಬಿಡುತ್ತಾರೆ.

vaishnavi
ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ
author img

By

Published : Jul 21, 2021, 8:56 AM IST

ರೇಷ್ಮೇ ಸೀರೆ ಎಂದೇ ಖ್ಯಾತಿ ಪಡೆದಿರುವ ವೈಷ್ಣವಿ ಗೌಡ ಇದೇ ಮೊದಲ ಬಾರಿಗೆ ಕೋಪಗೊಂಡಿದ್ದರು. ಸದಾ ನಗುನಗುತ್ತಲೇ ಎಲ್ಲರನ್ನೂ ಸಂಭಾಳಿಸುವ ವೈಷ್ಣವಿ, ತಾಳ್ಮೆ ಕಳೆದುಕೊಂಡು ಪ್ರಶಾಂತ್​ ಸಂಬರಗಿ ಮೇಲೆ ಕೈ ಎತ್ತಲು ಮುಂದಾಗುತ್ತಾರೆ. ತಕ್ಷಣವೇ ಅಲ್ಲಿಗೆ ಅದನ್ನು ಬಿಡುತ್ತಾರೆ.

ಬಿಗ್​ಬಾಸ್ 'ಏನಾಗಲಿ ಮುಂದೆ ಓಡು ನೀ' ಎಂಬ ಚೀಲ ಹೊರುವ ಟಾಸ್ಕ್ ನೀಡಿದ್ದರು. ಒಬ್ಬರ ಹಿಂದೆ ಒಬ್ಬರು ಓಡುತ್ತಾ ಮುಂದಿನವರ ಚೀಲವನ್ನು ಹರಿದು ಅದರೊಳಗಿನ ಥರ್ಮೋಕೋಲ್ ಖಾಲಿ ಮಾಡಬೇಕಿತ್ತು. ಹೀಗೆ ಓಡುವಾಗ ಪ್ರಶಾಂತ್​ ಸಂಬರಗಿ ಅವರು ವೈಷ್ಣವಿ ಅವರ ಚೀಲದಲ್ಲಿರುವ ವಸ್ತುವನ್ನು ಖಾಲಿ ಮಾಡಲು ಪ್ರಯತ್ನಿಸುತ್ತಾರೆ. ಈ ವೇಳೆ, ವೈಷ್ಣವಿ ಅವರು ಪ್ರಶಾಂತ್ ಅವರ ಮೇಲೆ ಎಳೆಯಬೇಡಿ ಎಂದು ಕೂಗುತ್ತಾರೆ.

ಅದಕ್ಕೆ ಕೋಪಗೊಂಡ ವೈಷ್ಣವಿ ಕೈ ಎತ್ತುತ್ತಾರೆ. ತಕ್ಷಣವೇ ಕೋಪ ಬಿಟ್ಟು ಆಟದಿಂದ ಹೊರ ನಡೆದು ಬರುತ್ತಾರೆ. ಶುಭಾ ಪೂಂಜಾ ಅವರ ಬಳಿ ಪ್ರಶಾಂತ್ ಆಡಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಜಂಟಲ್​ಮೆನ್​ ಎಂದು ಹೇಳಿಕೊಂಡು ಹೀಗೆಲ್ಲ ಆಡುತ್ತಾರೆ ಎಂದು ತಮ್ಮ ಅಸಮಾಧಾನ ಹೊರಹಾಕಿದರು.

Prashanth Sambaragi
ಪ್ರಶಾಂತ್​ ಸಂಬರಗಿ

ಆದರೆ, ಪ್ರಶಾಂತ್, ಚಕ್ರವರ್ತಿ ಅವರ ಬಳಿ ತಮಗೆ ಅವಮಾನವಾಯಿತು. ಒಂದು ಹುಡುಗಿ ಗಂಡಸಿನ ಮೇಲೆ ಕೈ ಎತ್ತುವುದು ಅಂದರೆ ಅದು ನನಗಾದ ಅವಮಾನ. ತಮಾಷೆ ಮಾಡುತ್ತಿದ್ದಾರೆ ಎಂದುಕೊಂಡೆ. ನಾನು ಏನೂ ಮಾತನಾಡದೇ ಬಿಟ್ಟು ಬಿಟ್ಟೆ. ವೈಷ್ಣವಿ ಬಗ್ಗೆ ನನಗೆ ಗೌರವವಿದೆ. ಆದರೆ ಬೇಸರವಾಯಿತು ಎನ್ನುತ್ತಾರೆ.

ನಂತರ ಮನೆಯ ಎಲ್ಲ ಸದಸ್ಯರು ವಿಶ್ರಾಂತಿ ಪಡೆಯುವಾಗ ಪ್ರಶಾಂತ್ ಬಳಿ ವೈಷ್ಣವಿ ತೆರಳಿ 'ನಾನು ಕೈ ಎತ್ತಬಾರದಿತ್ತು. ಕ್ಷಮಿಸಿ. ಇದನ್ನು ಮುಂದೆ ನಾನು ಕ್ಯಾರಿ ಮಾಡುವುದಿಲ್ಲ. ಇಲ್ಲಿಗೆ ಬಿಟ್ಟು ಬಿಡುತ್ತೇನೆ' ಎಂದು ಹೇಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.