ಕೊರೊನಾ ಲಾಕ್ಡೌನ್ನಿಂದಾಗಿ ಅರ್ಧಕ್ಕೆ ನಿಂತು ಹೋಗಿದ್ದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 8’ ಮತ್ತೆ ಶುರುವಾಗಲಿದೆ. ಜೂನ್ 21ರಿಂದ ಕಾರ್ಯಕ್ರಮ ಮತ್ತೊಮ್ಮೆ ಶುರುವಾಗಲಿದೆ ಎಂದು ಹೇಳಲಾಗ್ತಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಂದ್ ಆಗಿದ್ದು, ನೋಡುಗರಲ್ಲಿ ಬೇಸರ ತರಿಸಿತ್ತು. ಈ ಬಾರಿಯ ಬಿಗ್ ಬಾಸ್ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಇರುವಾಗಲೇ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಂಡಿತ್ತು.
ಇದೀಗ, ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದ ಹಿನ್ನೆಲೆ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಆದ್ದರಿಂದ ಬಿಗ್ಬಾಸ್ ಪುನಃ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಈಗಾಗಲೇ ತೆರೆಮರೆಯಲ್ಲಿ ಕೆಲಸಗಳು ಪ್ರಾರಂಭವಾಗಿದ್ದು, ಜೂನ್ 21ರಿಂದ ಪುನರಾರಂಭವಾಗಲಿದೆ ಎಂದು ಹೇಳಲಾಗ್ತಿದೆ.
- " class="align-text-top noRightClick twitterSection" data="">
ನಟ ಕಿಚ್ಚ ಸುದೀಪ್ ಮತ್ತೆ ಬಂದು ಈ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಲಿದ್ದಾರಂತೆ. ಬಿಗ್ಬಾಸ್ ಕಾರ್ಯಕ್ರಮ ಮೊಟಕುಗೊಳ್ಳುವಷ್ಟರಲ್ಲಿ 72ದಿನ ಮುಗಿದಿತ್ತು. ಇದೀಗ 73ನೇ ದಿನದಿಂದ ಕಾರ್ಯಕ್ರಮ ಮುಂದುವರೆಯಲಿದೆ.
ಇದನ್ನೂ ಓದಿ; ಬಣ್ಣ ಬಣ್ಣದ ಫಂಗಸ್ ರೋಗಗಳ ಗುಂಪಿಗೆ 'ಹಸಿರು' ಸೇರ್ಪಡೆ
ಕಾರ್ಯಕ್ರಮ ಮೊಟಕುಗೊಳ್ಳುವ ಮುನ್ನ ಮನೆಯಲ್ಲಿ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಅರವಿಂದ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ವೈಷ್ಣವಿ ಗೌಡ, ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್, ರಘು ಗೌಡ, ಶಮಂತ್ ಗೌಡ ಮತ್ತು ಚಕ್ರವರ್ತಿ ಚಂದ್ರಚೂಡ್ ಇದ್ದರು.
ಈ ಎಲ್ಲ ಸ್ಪರ್ಧಿಗಳ ಜೊತೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ದಿವ್ಯಾ ಉರುಡುಗ ಸಹ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.