ಕನ್ನಡದ ರಿಯಾಲಿಟಿ ಶೋ ಬಿಗ್ಬಾಸ್ ಇದೀಗ ಫೈನಲ್ ಹಂತಕ್ಕೆ ಬಂದು ನಿಂತಿದ್ದು, ಈಗಾಗಲೇ ಮೊದಲ ಸ್ಪರ್ಧಿಯಾಗಿ ವಾಸುಕಿ ವೈಭವ್ ಫೈನಲ್ಗೆ ಲಗ್ಗೆ ಹಾಕಿದ್ದಾರೆ. ಇದರ ಜತೆ ಇದೀಗ ಮತ್ತಿಬ್ಬರು ಸೇಫ್ ಆಗಿದ್ದಾರೆ.
ವಾರದ ಜೊತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಶೈನ್ ಶೆಟ್ಟಿ ಹಾಗೂ ಕುರಿ ಪ್ರತಾಪ್ಗೆ ಸೇಫ್ ಮಾಡಿದ್ದು, ಫೈನಲ್ಗೆ ಲಗ್ಗೆ ಹಾಕಿದ್ದಾರೆ. ಹೀಗಾಗಿ ನಾಮಿನೇಟ್ ಆಗಿರುವ ಹರೀಶ್ ರಾಜ್, ದೀಪಿಕಾ ದಾಸ್, ಪ್ರಿಯಾಂಕಾ ಹಾಗೂ ಭೂಮಿ ಶೆಟ್ಟಿ ಎದೆಯಲ್ಲಿ ಇದೀಗ ಢವಢವ ಶುರುವಾಗಿದೆ.
ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಂದು ಮನೆಯಿಂದ ಓರ್ವ ಸ್ಪರ್ಧಿ ಹೊರಬರಲಿದ್ದು, ವಾರದ ಮಧ್ಯದಲ್ಲಿ ಮತ್ತೊಬ್ಬರು ಎಲಿಮಿನೇಟ್ ಆಗಲಿದ್ದಾರೆ. ಹೀಗಾಗಿ ಫೈನಲ್ನಲ್ಲಿ ಐವರು ಕಾಣಿಸಿಕೊಳ್ಳಲಿದ್ದಾರೆ.