ಬಿಗ್ ಬಾಸ್ ಸೀಸನ್ ಎಂಟರಲ್ಲಿ ಇದೇ ಮೊದಲ ಬಾರಿಗೆ ಕ್ಯಾಪ್ಟನ್ ಅರವಿಂದ್ ಹೊರತುಪಡಿಸಿ ಉಳಿದೆಲ್ಲ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ಮೂಲಕ ಮನೆಯಲ್ಲಿ ದಿನಕಳೆದಂತೆ ಸ್ಪರ್ಧೆ ಮತ್ತಷ್ಟು ಜೋರಾಗಿದೆ.
ಮನೆಯಲ್ಲಿ ನಿಮಗೆ ಪ್ರತಿಸ್ಪರ್ಧಿ ಹಾಗೂ ಪ್ರತಿಸ್ಪರ್ಧಿ ಅಲ್ಲದ ಅಭ್ಯರ್ಥಿಗಳನ್ನ ಗುರುತಿಸಿ ಎಂದು ಬಿಗ್ ಬಾಸ್ ಟಾಸ್ಕ್ ನೀಡಿದ್ದರು. ಅದರ ಅನ್ವಯ ಮನೆ ಸ್ಪರ್ಧಿಗಳು ನೀಡಿದ ಉತ್ತರ ಆಧರಿಸಿ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ.
ಹೆಣ್ಮಕ್ಳೆ ಸ್ಟ್ರಾಂಗು ಗುರು! ಇದಕ್ಕೂ ಮೊದಲು, ಮನೆಯಲ್ಲಿ ಶುಭಪುಂಜಾ ಹಾಗೂ ನಿಧಿ ಸುಬ್ಬಯ್ಯ ಹೆಣ್ಣುಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಬೇಸರ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿದ ಶುಭಪುಂಜಾ, ಈ ಬಾರಿಯ ಸೀಸನ್ ಹೇಗಿರಬೇಕು ಎಂದರೆ ಫಿನಾಲೆಗೆ ಐದರಲ್ಲಿ ನಾಲ್ಕು ಜನ ಹೆಣ್ಮಕ್ಳೇ ಇರಬೇಕು. ನಾಲ್ಕು ಅಲ್ಲದಿದ್ದರೆ ಮೂರಾದರೂ ಹೆಣ್ಮಕ್ಳು ಇರಬೇಕು. ಪ್ರತಿ ಬಾರಿ ಗಂಡಸರೇ ಏಕೆ ವಿನ್ ಆಗಬೇಕು? ಶೃತಿ ಅಮ್ಮ ಒಬ್ಬರೆ ಆಟವಾಡಿದ್ದರು. ಅವರು ನಮ್ಮ ತರ ಗುಂಪಲ್ಲಿ ಗೋವಿಂದ ಆಗಿರಲಿಲ್ಲ. ಅದಕ್ಕೆ ಅವರು ವಿನ್ ಆಗಿದ್ದರು. ಪ್ರತಿಬಾರಿಯೂ ನಾವು ಗಂಡಸರ ಹೆಸರನ್ನು ತೆಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ. ಇದರಿಂದ ನಾವು ಮನೆಯಲ್ಲಿ ಎಲ್ಲಾ ಹೆಣ್ಣು ಮಕ್ಕಳನ್ನು ಕಳೆದುಕೊಳ್ಳುತ್ತೇವೆ ಎಂದು ಮಾತನಾಡಿಕೊಂಡು ಮುಂದೆ ಸರಿಯಾದ ನಿರ್ಧಾರ ತೆಗೆದುಕೊಂಡು ಆಡಬೇಕೆಂದು ನಿರ್ಧರಿಸಿದರು.
ಇದನ್ನೂ ಓದಿ: ತುಮಕೂರಿನಲ್ಲಿ ಅಪ್ಪು ಹವಾ: ಇಷ್ಟೊಂದು ಜನ್ರ ಪ್ರೀತಿ ಇದೆ, ರಾಜಕೀಯ ಯಾಕ್ರೀ ಬೇಕು ಎಂದ ಪುನೀತ್!
ಕ್ಯಾಪ್ಟನ್ಸಿಗಾಗಿ ಚದುರಂಗದಾಟ! ಈ ವಾರ ಕ್ಯಾಪ್ಟನ್ಸಿಗಾಗಿ ಬಿಗ್ಬಾಸ್ ಚಟುವಟಿಕೆವೊಂದನ್ನ ನೀಡಿದೆ. ಅದುವೇ ಚದುರಂಗ. ಕಪ್ಪು ಹಾಗೂ ಬಿಳುಪು ತಂಡಗಳಾಗಿ ವಿಂಗಡಿಸಲಾಗಿದೆ. ಬಿಳಿ ತಂಡದ ಶಂಕರ್ ಅವರು ನೀಡಿದ ಚೆಕ್ ಮೇಟ್ನಲ್ಲಿ ಕಪ್ಪು ತಂಡದ ರಘು ಆಟದಲ್ಲಿ ಸೋತು ಚದುರಂಗದ ಆಟದಿಂದಲೇ ಹೊರಬಿದ್ದಿದ್ದಾರೆ. ಹಾಗೆಯೇ ಕಪ್ಪು ತಂಡ ನೀಡಿದ ಚೆಕ್ಮೇಟ್ನಲ್ಲಿ ನಿಧಿ ಸುಬ್ಬಯ್ಯ ಆಟದಲ್ಲಿ ಸ್ಪರ್ಧೆಯಿಂದ ಹೊರಹೋಗಿದ್ದಾರೆ. ಮುಂದಿನ ಸಂಚಿಕೆಯಲ್ಲಿ ಯಾವ ಸ್ಪರ್ಧಿಗಳು ಹೊರಹೋಗುತ್ತಾರೆ ಅಥವಾ ಗೆಲ್ಲುತ್ತಾರೆ ಎಂಬುದು ಕಾದುನೋಡಬೇಕಾಗಿದೆ.