ಬಿಗ್ಬಾಸ್ ಸೀಸನ್ - 7 ಆರಂಭವಾಗಿ ಮೂರು ವಾರಗಳು ಕಳೆದಿದೆ. ಪ್ರತಿ ವಾರದಂತೆ ಈ ವಾರವೂ ಎಲಿಮಿನೇಷನ್ ನಡೆದಿದ್ದು ದುನಿಯಾ ರಶ್ಮಿ ದೊಡ್ಮನೆಯಿಂದ ಹೊರಬಂದಿದ್ದಾರೆ. ಇದೇ ವೇಳೆ ಬಿಗ್ಬಾಸ್ ಮನೆಯ ಸದಸ್ಯರಿಗೆ ಅಚ್ಚರಿಯೊಂದು ಕಾದಿತ್ತು.
ಬಿಗ್ಬಾಸ್ನಲ್ಲಿ ಮೂರನೇ ವಾರಕ್ಕೆ ವೈಲ್ಡ್ಕಾರ್ಡ್ ಎಂಟ್ರಿಯಾಗಿದ್ದು, ಮನೆಯ ಸದಸ್ಯರಿಗೆ ಮಾತ್ರವಲ್ಲದೆ ವೀಕ್ಷಕರೂ ಅಚ್ಚರಿಗೊಂಡಿದ್ದಾರೆ.
ಭಾನುವಾರದ ಸಂಚಿಕೆಯಲ್ಲಿ ವೈಲ್ಡ್ಕಾರ್ಡ್ ಮೂಲಕ ಆರ್ ಜೆ ಪೃಥ್ವಿ ದೊಡ್ಮನೆ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಇಂದು ಈ ವಾರ ಎಲಿಮಿನೇಟ್ ಆದವರ ಹೆಸರನ್ನು ಕಿಚ್ಚ ಸುದೀಪ್ ಘೋಷಿಸಲಿಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಬಂದ ಆರ್ ಜೆ ಪೃಥ್ವಿ ತಾವು ಮನೆಯೊಳಕ್ಕೆ ಪ್ರವೇಶಿಸಿ, ಜೊತೆಗೆ ತಂದಿದ್ದ ಕವರ್ ತೆರೆದು ಎಲಿಮಿನೇಟ್ ಆದವರ ಹೆಸರನ್ನು ಹೇಳಿದ್ದಾರೆ. ಕವರ್ನಲ್ಲಿ ದುನಿಯಾ ರಶ್ಮಿ ಹೆಸರಿತ್ತು. ಈ ಮೂಲಕ ರಶ್ಮಿ ಮೂರೇ ವಾರಕ್ಕೆ ಬಿಗ್ಬಾಸ್ ಪಯಣ ಮುಗಿಸಿದ್ದಾರೆ.
-
ಬಿಗ್ಬಾಸ್ ದುನಿಯಾದಿಂದ ಮೂರನೇ ವಾರ ಔಟ್ ಆಗ್ತಿರೋರು ದುನಿಯಾ ರಶ್ಮಿ!
— Colors Kannada (@ColorsKannada) 3 November 2019 " class="align-text-top noRightClick twitterSection" data="
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/7ITznbj6Nb
">ಬಿಗ್ಬಾಸ್ ದುನಿಯಾದಿಂದ ಮೂರನೇ ವಾರ ಔಟ್ ಆಗ್ತಿರೋರು ದುನಿಯಾ ರಶ್ಮಿ!
— Colors Kannada (@ColorsKannada) 3 November 2019
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/7ITznbj6Nbಬಿಗ್ಬಾಸ್ ದುನಿಯಾದಿಂದ ಮೂರನೇ ವಾರ ಔಟ್ ಆಗ್ತಿರೋರು ದುನಿಯಾ ರಶ್ಮಿ!
— Colors Kannada (@ColorsKannada) 3 November 2019
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/7ITznbj6Nb
ಫೀವರ್ 104ನಲ್ಲಿ ಆರ್ ಜೆ ಆಗಿ ಕೆಲಸ ನಿರ್ವಹಿಸುತ್ತಿರುವ ಪೃಥ್ವಿ ಕಳೆದ ಹದಿನೈದು ವರುಷಗಳಿಂದ ಈ ವೃತ್ತಿಯಲ್ಲಿದ್ದಾರೆ. ಆರ್ ಜೆ ಆಗಿ ಮೋಡಿ ಮಾಡಿರುವ ಪೃಥ್ವಿಯ ಹೊಸ ಪಯಣ ಅವರ ಕೇಳುಗರಿಗೆ ಮಾತ್ರವಲ್ಲದೆ ದೊಡ್ಮನೆ ಮಂದಿಗೂ ಕುತೂಹಲ ಮೂಡಿಸಿದೆ.