ಕಲಾ ನಿರ್ದೇಶಕ ಅರುಣ್ ಸಾಗರ್ ರಂಗ ನಿರ್ದೇಶಕ , ನಿರೂಪಕ, ನಿರ್ದೇಶಕ ಆಗಿ ಹೆಸರಾದವರು. ಇವರ ಹಾಸ್ಯಕ್ಕೇನೂ ಕಡಿಮೆ ಇಲ್ಲ. ಬಿಗ್ ಬಾಸ್ನಲ್ಲಿ ಇದ್ದಾಗ ಅರುಣ್ ಸಾಗರ್ ವೀಕ್ಷಕರನ್ನು ಹೇಗೆ ನಕ್ಕು ನಲಿಸುತ್ತಿದ್ದರು ಎಂಬುದನ್ನು ನೀವೇ ನೋಡಿದ್ದೀರಿ. ಅರುಣ್ ತಮ್ಮದೇ ಆದ ಕಲಾ ನಿರ್ದೇಶನ ಶಾಲೆ ಕೂಡಾ ನಡೆಸುತ್ತಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ಅರುಣ್ ಸಾಗರ್ ಕೊರೊನಾ ಬಗ್ಗೆ ಒಂದು ಹಾಡು ರಚಿಸಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದರು. ಮೈಮ್ ಪ್ರದರ್ಶನದಲ್ಲೂ ಅರುಣ್ ಸಾಗರ್ ಎತ್ತಿದ ಕೈ. ಇದೀಗ ಅರುಣ್ ಸಾಗರ್ ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ 3:37 ನಿಮಿಷ ಅವಧಿಯ ಪುಟ್ಟ ಕಿರುಚಿತ್ರ ಮಾಡಿ ಬಿಡುಗಡೆ ಮಾಡಿದ್ದಾರೆ.
- " class="align-text-top noRightClick twitterSection" data="">
'ಸಮಾಜವನ್ನ ಕಾಯುವ ಮುನ್ನ ನಾವು ಜಾಗೃತರಾದರೆ ಚೆನ್ನ' ಎಂಬ ಈ ಕಿರುಚಿತ್ರದಲ್ಲಿ ಡೈಲಾಗ್ಗಳಿಲ್ಲ. ಕಾನ್ಸ್ಟೇಬಲ್ ಒಬ್ಬರು ಮನೆಯಿಂದ ಹೊರಟಾಗಿನಿಂದ ಮತ್ತೆ ಮನೆಗೆ ವಾಪಸ್ ಬರುವವರೆಗೆ ಏನೆಲ್ಲಾ ಕೆಲಸ ಮಾಡುತ್ತಾರೆ ಹಾಗೂ ಆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಜರ್ ಬಳಸುವ ಮೂಲಕ ಜಾಗೃತರಾಗಿರುವಂತೆ ಎಚ್ಚರಿಸಲು ಮೈಮ್ ಪಾತ್ರಧಾರಿ ಅರುಣ್ ಕಾನ್ಸ್ಟೇಬಲ್ ಜೊತೆಗೆ ಇರುತ್ತಾರೆ.
ಕಿರುಚಿತ್ರದಲ್ಲಿ ಅರುಣ್ ಸಾಗರ್, ಕಾನ್ಸ್ಟೇಬಲ್ ನಾಗರಾಜು, ಬಾಲನಟಿ ಅಮ್ಮುಲು ಹಾಗೂ ಇನ್ನಿತರರು ನಟಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಡಿಸಿಪಿ ಇಶಾ ಪಂತ್, ಸಮಾಜ ಸೇವಕ ವಾಸು ಅವರು ಅರುಣ್ ಸಾಗರ್ ಅವರ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.