ETV Bharat / sitara

'ಯಾರೇ ನೀ ಮೋಹಿನಿ' ಮುತ್ತು ಮಾವನ ಜಾಗಕ್ಕೆ ಬಂದ್ರು ಮತ್ತೊಬ್ಬ ನಟ - ಕಿರುತೆರೆ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರೇ ನೀ ಮೋಹಿನಿ' ಧಾರಾವಾಹಿ ಪ್ರಮುಖ ಪಾತ್ರಧಾರಿ ಚೇತನ್ ವಿಕ್ಕಿ ಧಾರಾವಾಹಿಯಿಂದ ಹೊರ ಹೋಗಿದ್ದು, ಇದೀಗ ಅವರ ಪಾತ್ರವನ್ನು ಕುಲವಧು ಖ್ಯಾತಿಯ ಸೂರಜ್ ನಿಭಾಯಿಸುತ್ತಿದ್ದಾರೆ.

'ಯಾರೇ ನೀ ಮೋಹಿನಿ'
author img

By

Published : Sep 19, 2019, 7:30 PM IST

ಧಾರಾವಾಹಿ ಪಾತ್ರಧಾರಿಗಳು ಬದಲಾಗುವುದು ಹೊಸದೇನಲ್ಲ. ವೈಯಕ್ತಿಕ ವಿಚಾರಗಳಿಂದಲೋ ಅಥವಾ ಮತ್ತಾವುದೋ ಕಾರಣಕ್ಕೋ ಪಾತ್ರಧಾರಿಗಳು ಅರ್ಧದಲ್ಲೇ ಧಾರಾವಾಹಿ ತಂಡದಿಂದ ಹೊರಹೋಗುತ್ತಾರೆ. ಇದೀಗ 'ಯಾರೇ ನೀ ಮೋಹಿನಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಮುತ್ತುಮಾವ ಧಾರಾವಾಹಿಯಿಂದ ಹೊರ ಹೋಗುತ್ತಿದ್ದಾರೆ.

yare nee mohini
ಸೂರಜ್​, ಚೇತನ್ ವಿಕ್ಕಿ

ಮುತ್ತುಮಾವನಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಚೇತನ್ ವಿಕ್ಕಿ ಇನ್ನು ಮುಂದೆ ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಮೋಡಿ ಮಾಡಿದ ಚೇತನ್ ವಿಕ್ಕಿ ಅವರಿಗೆ ಬಾಲ್ಯದಿಂದಲೂ ತಾವೊಬ್ಬ ನಟನಾಗಿ ಮಿಂಚಬೇಕು ಎಂಬ ಹಂಬಲ. ಪದವಿ ವಿದ್ಯಾಭ್ಯಾಸದ ಬಳಿಕ ಆಡಿಶನ್​​​​​​ಗಳಲ್ಲಿ ಭಾಗವಹಿಸಲು ಆರಂಭಿಸಿದ ಚೇತನ್, ಧಾರಾವಾಹಿಯಲ್ಲಿ ನಾಯಕನಾಗಿ ಆಯ್ಕೆ ಆಗಿಯೇ ಬಿಟ್ಟರು. ಮುತ್ತುಮಾವನಾಗಿ ಹೆಸರು ಮಾಡಿದ ಚೇತನ್ ವಿಕ್ಕಿ ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಈಗಾಗಲೇ ಧಾರಾವಾಹಿ ಯಶಸ್ವಿಯಾಗಿ 600 ಎಪಿಸೋಡ್​​​​ಗಳನ್ನು ಪೂರೈಸಿದೆ. ಇದೀಗ ಹೊಸ ಮುತ್ತುಮಾವ ಧಾರಾವಾಹಿ ತಂಡ ಸೇರಿಕೊಂಡಿದ್ದಾರೆ. ಕುಲವಧು ಧಾರಾವಾಹಿಯಲ್ಲಿ ಗೌರವ್ ಪಾತ್ರಧಾರಿಯಾಗಿ ಅಭಿನಯಿಸಿದ್ದ ಸೂರಜ್ ಇದೀಗ ಚೇತನ್ ಲಕ್ಕಿ ಸ್ಥಾನ ತುಂಬುತ್ತಿದ್ದಾರೆ. ಅವರ ಅಭಿನಯದ ಎಪಿಸೋಡ್​​​​​ಗಳು ಈಗಾಗಲೇ ಆರಂಭವಾಗಿದ್ದು ಇವರು ವೀಕ್ಷಕರನ್ನು ಹೇಗೆ ಮೋಡಿ ಮಾಡಲಿದ್ದಾರೆ ಕಾದು ನೋಡಬೇಕು.

suraj
ಮುತ್ತುಮಾವ ಪಾತ್ರಧಾರಿ ಸೂರಜ್​​

Intro:Body:ಮುತ್ತು ಮಾವ ಬದಲಾಗಿದ್ದಾರೆ! ಅಯ್ಯೋ ಗಾಬರಿಯಾಗಬೇಡಿ. ನಾವೀಗ ಹೇಳಹೊರಟಿರುವುದು ಝೀ ಕನ್ನಡದ ಮುತ್ತು ಮಾಮನ ಬಗ್ಗೆ! ಅರ್ಥಾತ್ ಯಾರೇ ನೀ ಮೋಹಿನಿ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಮುತ್ತು ಮಾಮ ಬದಲಾಗಿದ್ದಾರೆ.

ಮುತ್ತು ಮಾಮನಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡುತ್ತಿದ್ದ ಚೇತನ್ ವಿಕ್ಕಿ ಇನ್ನು ಮುಂದೆ ತೆರೆಯ ಮೇಲೆ ಬರುತ್ತಿಲ್ಲ. ಮುತ್ತು ಮಾಮ ಎಂದೇ ಜನಪ್ರಿಯತೆ ಪಡೆದರುವ ಈ ನಟನಾ ಹೆಸರು ಚೇತನ್ ವಿಕ್ಕಿ.

ಮೊದಲ ಧಾರಾವಾಹಿಯಲ್ಲೇ ಸಾಕಷ್ಟು ಮೋಡಿ ಮಾಡಿದ ಚೇತನ್ ವಿಕ್ಕಿ ಅವರಿಗೆ ಬಾಲ್ಯದಿಂದಲೂ ತಾವೊಬ್ಬ ನಟನಾಗಿ ಮಿಂಚಬೇಕು ಎಂಬ ಹಂಬಲ. ಪದವಿ ವಿದ್ಯಾಭ್ಯಾಸದ ಬಳಿಕ ಆಡಿಶನ್ ಗಳಲ್ಲಿ ಭಾಗವಹಿಸಲಾರಂಭಿಸಿದ ಚೇತನ್ ನಾಯಕನಾಗಿ ಆಯ್ಕೆ ಆಗಿಯೇ ಬಿಟ್ಟರು.

ಮುಂದೆ ಮುತ್ತು ಮಾಮನಾಗಿ ಬದಲಾದ ಚೇತನ್ ವಿಕ್ಕಿ ಇದೀಗ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಈಗಾಗಲೇ ಯಶಸ್ವಿಯಾಗಿ 600 ಎಪಿಸೋಡ್ ಗಳನ್ನು ಪೂರೈಸಿರಿವ ಯಾರೇ ನೀ ಮೋಹಿನಿ ಧಾರಾವಾಹಿಯಿಂದ ಚೇತನ್ ವಿಕ್ಕಿ ಹೊರ ಬಂದಿದ್ದಾಗಿದೆ.

ಚೇತನ್ ಅವರ ಬದಲಿಗೆ ಹೊಸ ಮುತ್ತು ಮಾಮ ಬಂದಾಗಿದೆ. ಇವರು ಧಾರಾವಾಹಿಗೆ ಹೊಸಬರು ಹೊರತು ಕಿರುತೆರೆ ವೀಕ್ಷಕರಿಗೆ ಪರಿಚಯ ಇರುವವರೇ! ಅಂದರೆ ಈ ಮೊದಲು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕುಲವಧು ಧಾರಾವಾಹಿಯಲ್ಲಿ ಗೌರವ್ ಪಾತ್ರಧಾರಿಯಾಗಿ ಅಭಿನಯಿಸಿದ್ದ ಸೂರಜ್ ಅವರು ಇದೀಗ ಮುತ್ತು ಮಾಮ ನಾಗಿ ನಿಮ್ಮ ಮುಂದೆ ಬರಲಿದ್ದಾರೆ. ಅವರ ಅಭಿನಯದ ಎಪಿಸೋಡ್ ಈಗಾಗಲೇ ಶುರುವಾಗಿದ್ದು ಇವರು ಕೂಡಾ ತಮ್ಮ ನಟನೆಯ ಮೂಲಕ ನಿಮ್ಮನ್ನು ಮೋಡಿ ಮಾಡುವುದಂತೂ ನಿಜ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.