ಇತ್ತೀಚಿನ ದಿನಗಳಲ್ಲಿ ಸೆಲಬ್ರಿಟಿಗಳು ಹೆಚ್ಚಾಗಿ ಮಾಲ್ಡೀವ್ಸ್ಗೆ ಟ್ರಿಪ್ ಹೋಗಿ ಬರುತ್ತಿದ್ದಾರೆ. ಕೊರೊನಾ ಲಾಕ್ಡೌನ್ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು ಜನರು ಮುಂಜಾಗ್ರತಾ ಕ್ರಮ ಕೈಗೊಂಡು ಟ್ರಿಪ್ ಹೋಗಿ ಬರುತ್ತಿದ್ದಾರೆ. ಇದೀಗ ಸಿನಿಮಾ, ಕಿರುತೆರೆ ನಟ-ನಟಿಯರು ಕೂಡಾ ಹೆಚ್ಚಾಗಿ ಮಾಲ್ಡೀವ್ಸ್ಗೆ ಹೋಗಿ ಬರುತ್ತಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: ತಮಿಳು ನಟಿ ಚಿತ್ರಾ ಭಾವಿ ಪತಿ ಹೇಮನಾಥ್ ಬಂಧಿಸಿದ ಪೊಲೀಸರು
'ಜೊತೆ ಜೊತೆಯಲಿ' ಖ್ಯಾತಿಯ ನಟ ಅನಿರುದ್ಧ್ ಕೂಡಾ ಮಾಲ್ಡೀವ್ಸ್ಗೆ ತೆರಳಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಚಿತ್ರೀಕರಣದಿಂದ ಸಣ್ಣ ಬ್ರೇಕ್ ಪಡೆದಿರುವ ಅನಿರುದ್ಧ್ ತಮ್ಮ ಕುಟುಂಬಸಹಿತ ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಸದ್ಯ ಅಲ್ಲಿ ಸಂತಸದಿಂದ ಸಮಯ ಕಳೆದಿದ್ದು ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅನಿರುದ್ಧ್ ಅವರೊಂದಿಗೆ ಭಾರತಿ ವಿಷ್ಣುವರ್ಧನ್, ಪತ್ನಿ ಕೀರ್ತಿ ವಿಷ್ಣುವರ್ಧನ್, ಮಕ್ಕಳಾದ ಶ್ಲೋಕ ಹಾಗೂ ಜ್ಯೇಷ್ಠ ವರ್ಧನ್ ಸೇರಿದಂತೆ ಇನ್ನೂ ಕೆಲ ಕುಟುಂಬ ಸದಸ್ಯರು ಮಾಲ್ಡೀವ್ಸ್ನ ಪ್ರವಾಸಕ್ಕೆ ತೆರಳಿದ್ದಾರೆ. ಇದಕ್ಕೂ ಮುನ್ನ ಅನಿರುದ್ಧ್ ತಮ್ಮ ಕುಟುಂಬದೊಂದಿಗೆ ಕಾಫಿನಾಡು ಚಿಕ್ಕಮಗಳೂರಿಗೆ ಪ್ರವಾಸ ತೆರಳಿದ್ದರು. ಇದೀಗ ಮಾಲ್ಡೀವ್ಸ್ ತೆರಳಿದ್ದು ತಮ್ಮ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ.