ETV Bharat / sitara

ತಮಿಳಿನಲ್ಲಿ ಐಶ್ವರ್ಯಾ ಕಮಾಲ್​: ಅನಂತಿಯಾಗಿ ತೆರೆಮೇಲೆ ಮಿಂಚಿಂಗ್​ - ಅಗ್ನಿಸಾಕ್ಷಿ ಧಾರವಾಹಿ

ತಮಿಳಿನ ಉಯಿರೆ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಐಶ್ವರ್ಯಾ ಸಾಲಿಮಠ್ ಇದೀಗ ಮಗದೊಂದು ತಮಿಳು ಧಾರಾವಾಹಿಯಲ್ಲಿ ನಾಯಕಿಯಾಗಿ ಕಮಾಲ್ ಮಾಡುತ್ತಿದ್ದಾರೆ.

Tamil Industry
ತಮಿಳಿನಲ್ಲಿ ಐಶ್ವರ್ಯಾ ಕಮಾಲ್
author img

By

Published : May 9, 2021, 2:00 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಅಗ್ನಿಸಾಕ್ಷಿಯಲ್ಲಿ ನಾಯಕಿ ಸನ್ನಿಧಿ ತಂಗಿ ತನು ಆಗಿ ನಟಿಸಿ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಐಶ್ವರ್ಯಾ ಸಾಲಿಮಠ್ ಈಗಾಗಲೇ ಪರಭಾಷೆಯ ಕಿರುತೆರೆಗೆ ಕಾಲಿಟ್ಟಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.

ತಮಿಳಿನ ಉಯಿರೆ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಐಶ್ವರ್ಯಾ, ಇದೀಗ ಮಗದೊಂದು ತಮಿಳು ಧಾರಾವಾಹಿಯಲ್ಲಿ ನಾಯಕಿಯಾಗಿ ಕಮಾಲ್ ಮಾಡುತ್ತಿದ್ದಾರೆ.

Tamil Industry
ತಮಿಳಿನಲ್ಲಿ ಐಶ್ವರ್ಯಾ ಕಮಾಲ್

ಹೌದು, ರಾಜ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅನಂತಿ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಐಶ್ವರ್ಯಾ ಸಾಲಿಮಠ್ ಅವರು ಕನ್ನಡ ಕಿರುತೆರೆ ಮಾತ್ರವಲ್ಲದೇ ಪರಭಾಷೆಯ ಕಿರುತೆರೆಯಲ್ಲಿಯೂ ಒಂದಾದ ಮೇಲೆ ಒಂದರಂತೆ ಅವಕಾಶ ಪಡೆಯುತ್ತಿದ್ದಾರೆ.

ಅಗ್ನಿಸಾಕ್ಷಿಯ ತನು ಎಂದೇ ಇಂದಿಗೂ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಐಶ್ವರ್ಯಾ, ಪ್ರಸ್ತುತ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ಖಳನಾಯಕಿ ಪ್ರಿಯಾಳಾಗಿ ಮೋಡಿ ಮಾಡುತ್ತಿದ್ದಾರೆ. ಮಹಾಸತಿ ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದ್ದ ಐಶ್ವರ್ಯಾ ಸಾಲಿಮಠ್ ತಮ್ಮ ಸ್ವಂತ ಶ್ರಮದಿಂದಲೇ ಇಂದು ಬಣ್ಣದ ಲೋಕದಲ್ಲಿ ಛಾಪು ಮೂಡಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.