'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರ ಮಾಡುತ್ತಿದ್ದ ನಟಿ ಮೇಘಾ ಶೆಟ್ಟಿ ಸೀರಿಯಲ್‌ನಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಸ್ವತಃ ನಟಿ ಮೇಘಾ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದಾರೆ.
ಒಂದು ಕುಟುಂಬ ಅಂದ ಮೇಲೆ ಗೊಂದಲಗಳು ಇರುತ್ತವೆ. ಆ ಗೊಂದಲಗಳನ್ನು ಬಗೆಹರಿಸಿಕೊಂಡಿದ್ದೇವೆ. 'ಜೊತೆ ಜೊತೆಯಲಿ' ಧಾರಾವಾಹಿ ನನಗೆ ಎಲ್ಲವನ್ನೂ ನೀಡಿದೆ. ಧಾರಾವಾಹಿ ಮುಗಿಯುವ ತನಕ ಅನು ಸಿರಿಮನೆ ಪಾತ್ರವನ್ನು ನಾನೇ ನಿರ್ವಹಿಸುತ್ತೇನೆ. 'ಜೊತೆ ಜೊತೆಯಲಿ ಜೊತೆಯಾಗಿರುತ್ತೇನೆ' ಎಂದು ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಮೇಘಾ ಶೆಟ್ಟಿ ಖುಷಿಯ ವಿಚಾರವನ್ನು ತಿಳಿಸಿದ್ದಾರೆ.
ಧಾರಾವಾಹಿಯಿಂದ ಹೊರ ಬರುತ್ತಿರುವುದಕ್ಕೆ ಅಭಿಮಾನಿಗಳಿಗೆ ಉಂಟಾಗಿದ್ದ ಬೇಜಾರಿಗೆ ಕ್ಷಮೆ ಕೇಳುತ್ತೇನೆ. ಅಲ್ಲದೆ ತಮ್ಮ ಬಗ್ಗೆ ಬರುವ ಗೊಂದಲಗಳು ಅಥವಾ ಸಂದೇಹಗಳಿಗೆ ಅಭಿಮಾನಿಗಳು ಕಿವಿಗೊಡಬೇಡಿ. ಮುಂದೆ ಇಂತಹ ಯಾವುದೇ ಮಾತುಗಳು ಕೇಳಿ ಬಂದರೂ ತಾವೇ ಸ್ಪಷ್ಟನೆ ನೀಡುವುದಾಗಿ ಅವರು ಹೇಳಿದ್ದಾರೆ.
ನನ್ನ ಗುರುಗಳಾದ ಆರೂರು ಜಗದೀಶ್ ಹಾಗೂ ವಾಹಿನಿಯ ಮುಖ್ಯಸ್ಥರಿಗೆ ಈ ಮೂಲಕ ಚಿರ ಋಣಿಯಾಗಿದ್ದು, ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: 'ಜೊತೆ ಜೊತೆಯಲಿ' ಧಾರಾವಾಹಿಯಿಂದ ಹೊರಬಂದ ನಟಿ ಮೇಘಾ ಶೆಟ್ಟಿ.. ಕಾರಣ?