ನಟ ಚಂದನ್ ಕುಮಾರ್ ಮುಂದಿನ 'ಮರಳಿ ಮನಸ್ಸಾಗಿದೆ' ಎಂಬ ಧಾರಾವಾಹಿಯಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು, ದಿವ್ಯಾ ವಗುಕರ್ ಹಾಗೂ ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಈ ಧಾರಾವಾಹಿ ಹಿಂದಿಯ 'ಘುಮ್ ಹೈ ಕಿಸೀಕೆ ಪ್ಯಾರ್ ಮೈ' ಧಾರಾವಾಹಿಯ ರಿಮೇಕ್ ಆಗಿದೆ.
ಈ ಬಗ್ಗೆ ಮಾತನಾಡಿರುವ ಚಂದನ್ "ಈ ವರ್ಷದ ಆರಂಭದಲ್ಲಿ ನಾನು ಒಪ್ಪಿಕೊಂಡಿರುವ ಮೊದಲ ಧಾರಾವಾಹಿ ಇದು. ತುಂಬಾ ಉತ್ಸುಕನಾಗಿದ್ದೇನೆ. ನಾನು ಇಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಇದರಲ್ಲಿ ಪ್ರೇಮಕಥೆಯು ಇದ್ದು, ಕಥೆ ಕುತೂಹಲ ಮೂಡಿಸುತ್ತದೆ" ಎಂದಿದ್ದಾರೆ.
ಈ ಪಾತ್ರ ಮಾಡುವ ಮೊದಲು ಚಂದನ್ ವರ್ಕೌಟ್ ಮಾಡಿ ಫಿಟ್ ಆಗಿದ್ದಾರೆ. "ನಾನು ಪೊಲೀಸ್ ಆಗಿ ಕಾಣಿಸಿಕೊಳ್ಳಲು ಫಿಟ್ ಆಗಬೇಕಿತ್ತು. ತೂಕ ಇಳಿಸಿಕೊಳ್ಳಬೇಕಿತ್ತು. ಹೀಗಾಗಿ 100 ಕಿ.ಮೀ ಟ್ರೆಡ್ ಮಿಲ್ ಸವಾಲು ತೆಗೆದುಕೊಂಡೆ" ಎಂದಿದ್ದಾರೆ.
ಕುಕ್ಕು ವಿತ್ ಕಿರಿಕ್ಕು ಶೋನಲ್ಲಿ ಪಾಲ್ಗೊಳ್ಳುತ್ತಿರುವ ನಟ ಲಾಕ್ಡೌನ್ ಮೊದಲು ಸಿನಿಮಾ ಶೂಟಿಂಗ್ನಲ್ಲಿಯೂ ಭಾಗವಹಿಸಿದ್ದರು.