ETV Bharat / sitara

ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಸಂಬರಗಿ: ಈ ವಾರ ಮನೆಯಲ್ಲಿ ಅಚ್ಚರಿ ಎಲಿಮಿನೇಷನ್ - ಬಿಗ್​ಬಾಸ್​

ಬಿಗ್​ಬಾಸ್ ಸೀಸನ್ 8ರ ಫಿನಾಲೆ ಹತ್ತಿರವಾಗುತ್ತಿದೆ. ಈ ವಾರ ಕಿಚ್ಚ ಸುದೀಪ್​ ಅವರು ಮನೆಯ ಸದಸ್ಯರಿಗೆ ಟ್ವಿಸ್ಟ್​ವೊಂದನ್ನು ನೀಡಿದ್ದಾರೆ.

ಬಿಗ್​ಬಾಸ್ ಸೀಸನ್ 8
ಬಿಗ್​ಬಾಸ್ ಸೀಸನ್ 8
author img

By

Published : Jul 26, 2021, 6:46 AM IST

ಬಿಗ್​ಬಾಸ್ ಸೀಸನ್ 8ರ ಎರಡನೇ ಇನ್ನಿಂಗ್ಸ್​ ಇನ್ನೆರೆಡು ವಾರಗಳ ಕಾಲ ನಡೆಯಲಿದೆ. ಫಿನಾಲೆ ಹತ್ತಿರದಲ್ಲಿರುವಾಗ ಮನೆಯಿಂದ ಜನರನ್ನು ಕಡಿಮೆ ಮಾಡಬೇಕಾದ ಜವಾಬ್ದಾರಿ ಕಿಚ್ಚನ ಹೆಗಲ ಮೇಲಿದೆ. ಆದರೆ, ಈ ವಾರ ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್​ ಎಪಿಸೋಡ್‌ನಲ್ಲಿ ಯಾವ ಸ್ಪರ್ಧಿಯೂ ಹೊರ ಬಂದಿಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಒಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಸುದೀಪ್ ಶಾಕ್​ ಕೊಟ್ಟಿದ್ದಾರೆ.

ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ
ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ

ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್​ ಎಪಿಸೋಡ್‌ನಲ್ಲಿ ಈ ವಾರ ಯಾರನ್ನೂ ಎಲಿಮಿನೇಟ್ ಮಾಡಲೇ ಇಲ್ಲ. ಬದಲಾಗಿ ಎಲಿಮಿನೇಷನ್​ಗೆ ಟ್ವಿಸ್ಟ್ ಕೊಟ್ಟಿದ್ದಾರೆ. ಒಬ್ಬರು ಮನೆಯಿಂದ ಹೊರಗೆ ಹೋಗ್ತಾರೆ. ಆದರೆ, ಇವತ್ತು ಹೋಗಲ್ಲ. ಈ ವಾರದ ಮಧ್ಯದಲ್ಲಿ ನೀವೆಲ್ಲಾ ಇದ್ದ ಹಾಗೆಯೇ ಹೋಗ್ತಾರೆ. ಮುಂದಿನ ಶನಿವಾರ ನಾನು ಈ ವೇದಿಕೆಗೆ ಬರುವ ವೇಳೆಗೆ ಆ ಒಬ್ಬ ಸ್ಪರ್ಧಿ ಮನೆಯಲ್ಲಿ ಇರುವುದಿಲ್ಲ. ಯಾರ್ ಹೋಗ್ತಾರೆ? ಯಾವಾಗ ಹೋಗ್ತಾರೆ? ಗೊತ್ತಿಲ್ಲ.

ಅವರು ಹೋಗುವ ಕ್ಷಣ ಯಾವಾಗ ಬೇಕಾದರೂ ಬರಬಹುದು. ಎಲಿಮಿನೇಟ್ ಆಗುವ ಸ್ಪರ್ಧಿಗೆ ನಾನು ವೇದಿಕೆ ಮೇಲೆ ಸಿಗುವುದಿಲ್ಲ ಅನ್ನುವ ಬೇಜಾರು ನನಗೆ ಇದೆ. ಹೊರಗೆ ಹೋಗುವ ಸ್ಪರ್ಧಿಯ ಕ್ಷಣಗಣನೆ ಈಗ ಶುರುವಾಗಿದೆ ಎಂದು ಕಹಾನಿ ಮೆ ಟ್ವಿಸ್ಟ್ ಎಂದು ಎಲ್ಲರ ತಲೆಗೂ ಕೆಲಸ ನೀಡಿದ್ದಾರೆ. ಇನ್ನು ಈ ವಾರ ಪ್ರಶಾಂತ್ ಸಂಬರಗಿ, ಶಮಂತ್ ಬ್ರೊ ಗೌಡ, ಶುಭಾ ಪೂಂಜಾ, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್‌ ನಾಮಿನೇಟ್ ಆಗಿದ್ದರು.

ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಸಂಬರಗಿ:

ಈ ವಾರ ಬಿಗ್​ಬಾಸ್​ ಮನೆಯ ಸದಸ್ಯರು ಕಳಪೆ ನೀಡಿ ಜೈಲಿಗೆ ಕಳುಹಿಸಿದ್ದರೂ ಪ್ರಶಾಂತ್ ಸಂಬರಗಿ ತಮ್ಮ ಆಟದ ಶೈಲಿಯೇ ಇದು ಎಂದು ಸಾಬೀತುಪಡಿಸಿ ಕಿಚ್ಚನ ಚಪ್ಪಾಳೆಯನ್ನು ಗಿಟ್ಟಿಕೊಂಡಿದ್ದಾರೆ.

ಪ್ರಶಾಂತ್ ಸಂಬರಗಿ
ಪ್ರಶಾಂತ್ ಸಂಬರಗಿ

ವಾರಾಂತ್ಯ ಬಂತೆಂದರೆ ಕಿಚ್ಚ ಸುದೀಪ್​ ಸಾರಥ್ಯದಲ್ಲಿ ಇಡೀ ವಾರ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಯಾರು ಏನು ಮಾಡಿದರು, ಯಾವುದು ತಪ್ಪು, ಯಾರಿಗೆ ಬೇಸರವಾಯಿತು ಹಾಗೂ ನಡೆದ ಕಾಮಿಡಿ ಘಟನೆಗಳು ಎಲ್ಲವನ್ನೂ ಮತ್ತೊಮ್ಮೆ ನೆನೆಪಿಸಲಾಗುತ್ತದೆ.

ಈ ವಾರ ಇತರ ಸ್ಪರ್ಧಿಗಳ ಜೊತೆ ನಡೆದುಕೊಂಡ ರೀತಿ, ಟಾಸ್ಕ್​ಗಳಲ್ಲಿ ನೀಡಿದ ಪ್ರದರ್ಶನ, ವಿಭಿನ್ನ ದೃಷ್ಟಿಕೋನ, ಆಟದಲ್ಲಿ ಬದಲಾದ ಶೈಲಿ ಸೇರಿದಂತೆ ಈ ವಾರ ನೀಡಿದ ಅತ್ಯುತ್ತಮ ಆಟಕ್ಕಾಗಿ ಪ್ರಶಾಂತ್ ಸಂಬರಗಿಗೆ ಸುದೀಪ್, ಕಿಚ್ಚನ ಚಪ್ಪಾಳೆ ಕೊಟ್ಟರು. ನಂತರ ಭಾವುಕರಾದ ಪ್ರಶಾಂತ್ ಅವರನ್ನು ಸುದೀಪ್ ಏಕೆ ದುಃಖ ಎಂದು ಕೇಳಿದಾಗ, ನಾನು ನಾಮಿನೇಟ್ ಆಗಿದ್ದೆ. ಆದರೆ ಈ ಅವಾರ್ಡ್​ನಿಂದ ನನಗೆ ಮತ್ತೆ ಗೌರವ ಸಿಕ್ಕಾಂತಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.