ಬೆಂಗಳೂರು: ನಟ ಚಂದನ್ ಕುಮಾರ್ ಮತ್ತು ನಟಿ ಕವಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್ಡೌನ್ ನಡುವೆಯೇ ಕೋವಿಡ್ ನಿಯಮ ಪಾಲಿಸಿ ಇಂದು ಹಸೆಮಣೆ ಏರಿದ್ದಾರೆ. ಮದುವೆಯಲ್ಲಿ ಕೇವಲ 40 ಮಂದಿ ಮಾತ್ರ ಇರಬೇಕೆಂಬ ಆದೇಶವಿದ್ದು, ಅದರಂತೆ ಇಬ್ಬರ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.
ಏಪ್ರಿಲ್ 1 ರಂದು ಈ ಜೋಡಿ ಎಂಗೇಜ್‌ಮೆಂಟ್ ಕೂಡ ಮಾಡಿಕೊಂಡಿತ್ತು. ಇದೀಗ ಸರಳವಾಗಿ ಚಂದನ್ ಮತ್ತು ಕವಿತಾ ಸಪ್ತಪದಿ ತುಳಿದು, ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಚಂದನ್ ಮತ್ತು ಕವಿತಾ ಮಾಸ್ಕ್ ಧರಿಸಿಯೇ ಮದುವೆಯಾಗಿದ್ದು ಮತ್ತೊಂದು ವಿಶೇಷ.
ನವಜೋಡಿಗಳ ಫೋಟೋಗಳು ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ: ರಕ್ತದಾನದ ಮೂಲಕ ನಟಿ ರಾಗಿಣಿ ಜಾಗೃತಿ.. ಹಸಿದವರಿಗೆ ಅನ್ನ ನೀಡಿಯೂ ತುಪ್ಪದ ಬೆಡಗಿ ಸೇವೆ..
ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಚಂದನ್ ಕುಮಾರ್ ಮತ್ತು ಕವಿತಾ ಜೋಡಿಯಾಗಿ ನಟಿಸಿ ಜನಮನ ಗೆದ್ದಿದ್ದರು.