ETV Bharat / sitara

Corona ಸಂಕಷ್ಟಕ್ಕೆ ಮಿಡಿದ ನಿರ್ಮಾಪಕ: ಕನ್ನಡ ಚಿತ್ರರಂಗದ ಕಾರ್ಮಿಕರ ಒಕ್ಕೂಟಕ್ಕೆ 32 ಲಕ್ಷ ನೀಡಿದ ಕಿರಗಂದೂರ್

ಹೊಂಬಾಳೆ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರರಂಗದ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟಕ್ಕೆ 32 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

author img

By

Published : Jun 8, 2021, 5:34 PM IST

 ನಿರ್ಮಾಪಕ ವಿಜಯ ಕಿರಗಂದೂರ್
ನಿರ್ಮಾಪಕ ವಿಜಯ ಕಿರಗಂದೂರ್

ಕೊರೊನಾ ಹೆಮ್ಮಾರಿಯಿಂದ ಕಳೆದ ಎರಡು ವರ್ಷದಿಂದ ಇಡೀ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಚಿತ್ರರಂಗವನ್ನೇ ನಂಬಿ ಸಾವಿರಾರು ಸಿನಿಮಾ ಕಾರ್ಮಿಕರು ಜೀವನ ನಡೆಸುತ್ತಿದ್ದರು. ಕೋವಿಡ್ ಎರಡನೇ ಅಲೆ ಮತ್ತು ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೇ, ಚಿತ್ರರಂಗವನ್ನೇ ನಂಬಿರುವ ಸಾವಿರಾರು ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದರು. ಇಂತಂಹ ಪರಿಸ್ಥಿಯಲ್ಲಿ ಉಪೇಂದ್ರ, ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಯಶ್ ಸಿನಿಮಾ, ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ.

ಇದೀಗ ಹೊಂಬಾಳೆ ಸಂಸ್ಥೆಯ ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರರಂಗದ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ತಮ್ಮ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಕೆಲಸಗಾರನಿಗೆ ಹಾಗೂ ತಮ್ಮ ಹುಟ್ಟೂರು ಮಂಡ್ಯ ಜಿಲ್ಲೆಯ ಆಸ್ಪತ್ರೆಗೆ ಆಕ್ಸಿಜನ್ ವ್ಯವಸ್ಥೆಯನ್ನ ಮಾಡುವ ಮೂಲಕ ಸಹಾಯ ಮಾಡಿದರು.

ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು 32 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ನಿನ್ನಂದಲೇ, ರಾಜಕುಮಾರ, ಯುವರತ್ನ, ಕೆಜಿಎಫ್, ಹಾಗೂ ಸಲಾರ್ ಅಂತಹ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟಕ್ಕೆ 32 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಕಾರ್ಮಿಕರ ಒಕ್ಕೂಟದಲ್ಲಿ, ಸಹ ಕಲಾವಿದರ ಸಂಘ, ನಿರ್ಮಾಣ ನಿರ್ವಾಹಕರ ಸಂಘ, ಲೈಟ್ ಮ್ಯಾನ್ ಸಂಘ ಸೇರಿದಂತೆ 21ರಿಂದ 22 ಸಂಘಗಳಿವೆ. ಈ ಎಲ್ಲಾ ಸಂಘಗಳಲ್ಲಿ ಸದಸ್ಯರಾಗಿರುವ ಪ್ರತಿಯೊಬ್ಬರಿಗೂ ತಲಾ 1 ಸಾವಿರ ನಿರ್ಮಾಪಕ ವಿಜಯ್ ಕಿರಗಂದೂರು ನೀಡಿದ್ದಾರೆ.

ಒಕ್ಕೂಟದ ಪ್ರತಿ ಕಾರ್ಮಿಕರಿಗೆ 1 ಸಾವಿರ ರೂಪಾಯಿ ಅಂತೆ 3219 ಕಾರ್ಮಿಕರಿಗೆ, 32,19,000 ರೂಪಾಯಿಗಳನ್ನು ವಿಜಯ್ ಕಿರಗಂದೂರು ಕೊಟ್ಟಿದ್ದಾರೆ ಅಂತಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.