ಬೆಂಗಳೂರು: ನೂರು ದಿನಕ್ಕೆ ಸೀಮಿತವಾಗಿದ್ದ ಬಿಗ್ ಬಾಸ್ ಇದೀಗ 6 ದಿನದ ಬಿಗ್ ಬಾಸ್ ಆಟ ಶುರು ಮಾಡಿದೆ ಕಲರ್ಸ್ ಕನ್ನಡ ವಾಹಿನಿ. ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ ಎಂದು ನಾಮಕರಣ ಮಾಡಿದ್ದು, ಕಲರ್ಸ್ ಕನ್ನಡ ವಾಹಿನಿಯ ಧಾರವಾಹಿಯ ನಟ-ನಟಿಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ, ಕಿರಣ್ ರಾಜ್ ನಯನ, ಅಭಿನವ್ ವಿಶ್ವನಾಥನ್, ಕೌಸ್ತುಭಮಣಿ ಸೇರಿದಂತೆ 15 ಮಂದಿ ಆರು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇರಲಿದ್ದಾರೆ.
ಅದೇ ಮನೆ ಅದೇ ಕ್ಯಾಮೆರಾ ಇದು ಹಲವು ಟಾಸ್ಕ್ ಗಳನ್ನು ನಟ-ನಟಿಯರು ಪೂರೈಸಲಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಅವರು ಇದನ್ನು ಖಚಿತಪಡಿಸಿದ್ದು, ಪ್ರೋಮೋ ಕೂಡ ರಿಲೀಸ್ ಮಾಡಿದ್ದಾರೆ.
ಇದೇ ಶನಿವಾರ ಹಾಗೂ ಭಾನುವಾರದಂದು ಸಂಜೆ 4 ಗಂಟೆಗೆ ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ ಪ್ರಸಾರವಾಗಲಿದೆ. ಕೇವಲ ತಮ್ಮ ಧಾರಾವಾಹಿಯ ನಟ-ನಟಿಯರು ಇದರಲ್ಲಿ ಭಾಗವಹಿಸಿರುವುದು ಹೊಸ ಪ್ರಯೋಗ ಎನ್ನಬಹುದು. ಸಾಮಾಜಿಕ ಜಾಲತಾಣದಲ್ಲಿ ಹೊಸ ಶೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.