ETV Bharat / sitara

ತನ್ನ ಹೆಸರಿನ ಬದಲು 'ನಿಕ್ ಜೋನಾಸ್ ಪತ್ನಿ' ಎಂದು ಉಲ್ಲೇಖಿಸಿದ ವರದಿ ವಿರುದ್ಧ ಪ್ರಿಯಾಂಕಾ ಕಿಡಿ - ನಟಿ ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್ ಸ್ಟೋರಿ

ನನ್ನನ್ನು 'ನಿಕ್ ಜೋನಾಸ್ ಪತ್ನಿ' ಎಂದು ಬರೆಯಲಾಗಿದೆ. ಮಹಿಳೆಯರ ವಿಚಾರದಲ್ಲಿ ಇನ್ನೂ ಹೇಗೆ ಈ ರೀತಿಯಾಗುತ್ತಿದೆ? ಎಂದು ಜಾಗತಿಕ ತಾರೆ ಪ್ರಿಯಾಂಕಾ ಚೋಪ್ರಾ ಸುದ್ದಿ ವರದಿಯೊಂದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ
author img

By

Published : Dec 17, 2021, 4:28 PM IST

ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿರುವ ಬಾಲಿವುಡ್ ​ - ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ತನ್ನ ಹೆಸರಿನ ಬದಲು 'ನಿಕ್ ಜೋನಾಸ್ ಪತ್ನಿ' ಎಂದು ಉಲ್ಲೇಖಿಸಿದ ಸುದ್ದಿ ವರದಿಯೊಂದರ ವಿರುದ್ಧ ಕಿಡಿಕಾರಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ - ನಿಕ್ ಜೋನಾಸ್

ಪ್ರಿಯಾಂಕಾ ಚೋಪ್ರಾ ಕೇವಲ ನಟಿ ಮಾತ್ರವಲ್ಲ. ಅವರು ಮಾಜಿ ವಿಶ್ವ ಸುಂದರಿ, ನಿರ್ಮಾಪಕಿ, ಗಾಯಕಿ, ಲೇಖಕಿ ಹಾಗೂ ಯೂನಿಸೆಫ್​ ಗುಡ್‌ವಿಲ್ ರಾಯಭಾರಿಯಾಗಿದ್ದಾರೆ. ಅಷ್ಟೇ ಅಲ್ಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಗೂ ತಮ್ಮ ಅದ್ಭುತ ನಟನೆಗೆ ಎರಡು ರಾಷ್ಟ್ರಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. 2018ರಲ್ಲಿ ಅಮೆರಿಕದ ಗಾಯಕ ನಿಕ್ ಜೋನಾಸ್​ರನ್ನು ವಿವಾಹವಾಗುವ ಮೊದಲೇ ಇಷ್ಟೊಂದು ಖ್ಯಾತಿ ಗಳಿಸಿರುವ ಇವರನ್ನು ಜೋನಾಸ್​​​ರ ಪತ್ನಿ ಎಂದು ಮಾತ್ರ ಉಲ್ಲೇಖಿಸಿರುವುದು ಪ್ರಿಯಾಂಕಾರ ಆಕ್ರೋಶಕ್ಕೆ ಕಾರಣವಾಗಿದೆ.

Priyanka Chopra
ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಮ್ ಸ್ಟೋರಿ

ಸುದ್ದಿ ವರದಿಯ ಪೋಸ್ಟ್​ ಶೇರ್​ ಮಾಡಿ ಈ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಖಂಡಿಸಿರುವ ಪ್ರಿಯಾಂಕಾ, "ನಾನು ಸಾರ್ವಕಾಲಿಕ ಅಪ್ರತಿಮ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದನ್ನು ಪ್ರಚಾರ ಮಾಡುತ್ತಿದ್ದು, ನನ್ನನ್ನು 'ನಿಕ್ ಜೋನಾಸ್ ಪತ್ನಿ' ಎಂದು ಬರೆಯಲಾಗಿದೆ. ಮಹಿಳೆಯರ ವಿಚಾರದಲ್ಲಿ ಇನ್ನೂ ಹೇಗೆ ಈ ರೀತಿಯಾಗುತ್ತಿದೆ? ಎಂಬುದನ್ನು ದಯವಿಟ್ಟು ವಿವರಿಸಿ. ನಾನು ನನ್ನ IMDB ಲಿಂಕ್ ಅನ್ನು ನನ್ನ ಬಯೋಗೆ ಸೇರಿಸಬೇಕೇ?" ಎಂದು ಪ್ರಶ್ನಿಸಿದ್ದಾರೆ.

Priyanka Chopra
ಪ್ರಿಯಾಂಕಾ ಚೋಪ್ರಾ - ನಿಕ್ ಜೋನಾಸ್

ಸದ್ಯ ಪ್ರಿಯಾಂಕಾ ತಮ್ಮ ಹಾಲಿವುಡ್​ ಸಿನಿಮಾ 'ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್' ಬಿಡುಗಡೆಗೆ ಕಾಯುತ್ತಿದ್ದಾರೆ. ಇದೇ ಡಿಸೆಂಬರ್​ 22 ರಂದು ಚಿತ್ರ ತೆರೆ ಮೇಲೆ ಬರಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.