ಯಶ್ ಮತ್ತು ರಾಧಿಕಾರ ಮುದ್ದಾದ ಮಗಳು ಹುಟ್ಟಿದಾಗಿನಿಂದ ಇಲ್ಲಿಯವರೆ ಸದ್ದು ಮಾಡುತ್ತಲೇ ಬಂದಿದ್ದಾಳೆ. ಕೆಲವು ತಿಂಗಳ ಹಿಂದೆ ಈಕೆಗೆ ಐರಾ ಎಂದು ನಾಮಕರಣವನ್ನೂ ಮಾಡಲಾಗಿದ್ದು, ಆ ಸಂದರ್ಭದಲ್ಲಿಯೂ ಸುದ್ದಿ ಆಗಿತ್ತು.
ಅಪ್ಪ ಅಮ್ಮನಂತೇ ಸಖತ್ ಕ್ಯೂಟಾಗಿರುವ ಈ ಐರಾ ಇದೀಗ ಮತ್ತೆ ಸುದ್ದಿಯಲ್ಲಿದ್ದಾಳೆ. ಆದ್ರೆ ಇದಕ್ಕೆ ನೇರ ಕಾರಣ ಅವರ ತಾತ. ಅಂದ್ರೆ ರಾಧಿಕಾ ಅಪ್ಪ. ಹೌದು ಸದ್ಯ ರಾಧಿಕಾ ಪಂಡಿತ್, ತಮ್ಮ ಅಪ್ಪ ತನ್ನ ಮೊಮ್ಮಗಳನ್ನು ಮಲಗಿಸುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ.
- " class="align-text-top noRightClick twitterSection" data="
">
ರಾಧಿಕಾ ಪಂಡಿತ್ ತಂದೆ ಐರಾಳನ್ನು ಮಲಗಿಸಲು ಕರುಣಿಸೋ ರಂಗ ಕರುಣಿಸೋ ಎಂಬ ಹಾಡನ್ನು ಹಾಡುತ್ತಿದ್ದಾರೆ. ಈ ವಿಡಿಯೋವನ್ನು ಐರಾ ಒಂದು ತಿಂಗಳ ಮಗುವಾಗಿದ್ದಾಗ ಶೂಟ್ ಮಾಡಲಾಗಿತ್ತು ಎಂದು ಸ್ವತಃ ರಾಧಿಕಾ ಪಂಡಿತ್ ಹೇಳಿಕೊಂಡಿದ್ದಾರೆ.
ಇನ್ನು ವಿಡಿಯೋ ಹಾಕಿ ಅದರ ಬಗ್ಗೆ ಬರೆದುಕೊಂಡಿರುವ ರಾಧಿಕಾ, ನಮ್ಮ ತಂದೆ ಮೊಮ್ಮಗಳನ್ನು ಮಲಗಿಸುವ ರೀತಿ ಇದು. ಈಗಲೂ ಇದೇ ರೀತಿ ಮಲಗಿಸುತ್ತಾರೆ. ಭೀಮಸೇನ್ ಜೋಶಿಯವರ ಹಾಡನ್ನು ಹಾಡುತ್ತ ಮೊಮ್ಮಗಳನ್ನು ಮಲಗಿಸುತ್ತಾರೆ. ಐರಾ ಮಲಗಲು ಕರುಣಿಸೋ ರಂಗ ಕರುಣಿಸೋ ಎಂದು ಅಪ್ಪ ಹಾಡಬೇಕು ಅಂತ ಬರೆದಿದ್ದಾರೆ.