ಟೊವಿನೊ ಥಾಮಸ್ ಅಭಿನಯದ ಮಲಯಾಳಂ ಭಾಷೆಯಲ್ಲಿ ತಯಾರಾದ ಪ್ಯಾನ್ ಇಂಡಿಯಾ ಸಿನಿಮಾ 'ಮಿನ್ನಲ್ ಮುರಳಿ' ಇದೀಗ ಕನ್ನಡದಲ್ಲಿ 'ಮಿಂಚು ಮುರಳಿ' ಹೆಸರಿನಲ್ಲಿ ಡಬ್ಬಿಂಗ್ ಆಗಿದ್ದು ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಇಂದು ಸಂಜೆ 6.15ಕ್ಕೆ 'ಮಿಂಚು ಮುರಳಿ' ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಚಿತ್ರವನ್ನು ಬಸಿಲ್ ಜೋಸೆಫ್ ನಿರ್ದೇಶಿಸಿದ್ದು ಬೆಂಗಳೂರು ಡೇಸ್ ಚಿತ್ರದ ನಿರ್ಮಾಪಕ ಸೋಫಿಯಾ ಪೌಲ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.
![Minchu murali teaser](https://etvbharatimages.akamaized.net/etvbharat/prod-images/minchu-murali-trailer-release-by-yash1598839178865-60_3108email_1598839190_943.jpg)
ಈ ಸಿನಿಮಾ ಮಲಯಾಳಂ ಹಾಗೂ ತಮಿಳಿನಲ್ಲಿ ಮಿನ್ನಲ್ ಮುರಳಿ, ತೆಲುಗು ಭಾಷೆಯಲ್ಲಿ ಮೇರುಪು ಮುರಳಿ, ಹಿಂದಿಯಲ್ಲಿ ಮಿಸ್ಟರ್ ಮುರಳಿ ಹಾಗೂ ಕನ್ನಡದಲ್ಲಿ ಮಿಂಚು ಮುರಳಿ ಆಗಿ ಬಿಡುಗಡೆ ಆಗುತ್ತಿದೆ. ಗುರು ಸೋಮಸುಂದರಂ, ಅಜು ವರ್ಗೀಸ್, ಬೈಜು, ಹರಿಶ್ರೀ ಅಶೋಕನ್, ಫೆಮಿನಾ ಜಾರ್ಜ್ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ಚಿತ್ರಕ್ಕೆ ಸಮೀರ್ ತಾಹಿರ್ ಛಾಯಾಗ್ರಹಣ, ಶಾನ್ ರೆಹಮಾನ್ ಸಂಗೀತ, ಬಾಹುಬಲಿ, ದಿ ಫೆಟ್ ಆಫ್ ದಿ ಫ್ಯೂರಿಯಸ್ ಖ್ಯಾತಿಯ ವಿಲಾಡ್ ರಿಂಬರ್ಗ್ ಸಾಹಸ ನಿರ್ದೇಶನ ಮಾಡಿದ್ದಾರೆ. ಆಂಡ್ರೂ ದಿ ಕ್ರೂಜ್ ವಿಷುವಲ್ ಎಫೆಕ್ಟ್ ಕೆಲಸ ಮಾಡಿದ್ದಾರೆ.