ETV Bharat / sitara

ಹೊಸ ಫಾರ್ಮ್​ಹೌಸ್​​ನಲ್ಲಿ ಸದ್ದಿಲ್ಲದೆ ಮಗನ ನಾಮಕರಣ ಮಾಡಿದ ಯಶ್​ ದಂಪತಿ..!

author img

By

Published : Sep 1, 2020, 12:16 PM IST

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್​​​ ತಮ್ಮ ಮುದ್ದು ಮಗನ ನಾಮಕರಣವನ್ನು ನಿನ್ನೆ ಸರಳವಾಗಿ ಮಾಡಿ ಮುಗಿಸಿದ್ದಾರೆ. ಹಾಸನದ ಬಳಿ ಹೊಸದಾಗಿ ಖರೀದಿಸಿದ್ದ ಫಾರ್ಮ್​ಹೌಸ್ ಬಳಿ ನಿನ್ನೆ ನಾಮಕರಣ ಜರುಗಿದೆ.

Yash son Naming ceremony
ಯಶ್ ಪುತ್ರನ ನಾಮಕರಣ

ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿ ರಾಧಿಕಾ ಪಂಡಿತ್ ಹಾಗೂ ಯಶ್​​​​​​ ದಂಪತಿಗೆ ಮೊದಲ ಮಗು ಜನಿಸಿದಾಗ ಮಗು ಮುಖ ನೋಡಲು , ಮಗು ಹೆಸರು ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಯಶ್​​​ಗೆ ಮಗ ಜನಿಸಿದಾಗ ಕೂಡಾ ಅಭಿಮಾನಿಗಳು ಅದೇ ಕುತೂಹಲದಲ್ಲಿದ್ದರು.

ಯಶ್ ಪುತ್ರನ ನಾಮಕರಣ

ಕೆಲವು ದಿನಗಳ ಹಿಂದೆ ಯಶ್​, ರಾಧಿಕಾ ಮಗನ ಪೋಟೋ ರಿವೀಲ್ ಮಾಡಿದ್ದರು. ಮೊದಲ ಮಗುವಿಗೆ 'ಐರಾ' ಎಂದು ಹೆಸರಿಟ್ಟ ದಂಪತಿ ಮಗನಿಗೆ ಯಾವ ಹೆಸರಿಡಬಹುದು ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ತಮ್ಮ ಮಗನ ನಾಮಕರಣವನ್ನು ಸದ್ದಿಲ್ಲದೆ, ಬಹಳ ಸರಳವಾಗಿ ಮಾಡಿ ಮುಗಿಸಿದ್ದಾರೆ. ಅಭಿಮಾನಿಗಳಿಗೆ ಇದರಿಂದ ಸ್ವಲ್ಪ ನಿರಾಸೆ ಆದರೂ ಕೊರೊನಾ ಭಯದಿಂದ ಯಶ್​ ಈ ರೀತಿ ಮಾಡಿದ್ದಾರೆ ಎಂದು ಸುಮ್ಮನಾಗಿದ್ದಾರೆ.

Yash son Naming ceremony
ಮುದ್ದು ಮಕ್ಕಳೊಂದಿಗೆ ಯಶ್ ದಂಪತಿ

ಯಶ್ ಇತ್ತೀಚೆಗೆ ಹಾಸನದ ಬಳಿ ಖರೀದಿಸಿದ್ದ ಹೊಸ ಫಾರ್ಮ್​ಹೌಸ್​​ನಲ್ಲಿ ಮಗನ ನಾಮಕರಣವನ್ನು ಸರಳವಾಗಿ ಮಾಡಿ ಮುಗಿಸಿದ್ದಾರೆ. ಮುದ್ದು ಮಗನಿಗೆ 'ಯಥರ್ವ್ ಯಶ್' ಎಂದು ನಾಮಕರಣ ಮಾಡಿದ್ದಾರೆ. ನಿನ್ನೆ ಬೆಳಗ್ಗೆ ನಡೆದ ಸರಳ ನಾಮಕರಣ ಮಹೋತ್ಸವದಲ್ಲಿ ಯಶ್, ರಾಧಿಕಾ ಪಂಡಿತ್ ಕುಟುಂಬ ಹಾಗೂ ಕೆಲವೇ ಬಂಧು ಮಿತ್ರರು ಭಾಗಿಯಾಗಿದ್ದರು. ನಾಮಕರಣದ ನಂತರ ಯಶ್ ಪುತ್ರಿ ಐರಾ ಕೂಡಾ ತಮ್ಮನ ಹೆಸರನ್ನು ಯಥ ಎಂದು ಮುದ್ದಾಗಿ ಕರೆದಿದ್ದು ಎಲ್ಲರಿಗೂ ಸಂತೋಷವಾಗಿದ್ದಂತೂ ನಿಜ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.