ಇದೇ ಜನವರಿ 8ರಂದು ಯಶ್ ಹುಟ್ಟುಹಬ್ಬವಿದ್ದು ರಾಕಿಂಗ್ ಸ್ಟಾರ್ ಅಭಿಮಾನಿಗಳು ತಂಬಾನೆ ಕಾತರದಿಂದ ಕಾಯುತ್ತಿದ್ದಾರೆ. ಅಲ್ಲದೆ ಅವತ್ತೇ ಕೆಜಿಎಫ್-2 ಚಿತ್ರದ ಟೀಸರ್ ಕೂಡ ರಿಲೀಸ್ ಆಗುತ್ತಿದ್ದು, ಡಬಲ್ ಖುಷಿಯಲ್ಲಿ ಅಭಿಮಾನಿಗಳಿದ್ದಾರೆ. ಹಾಗಾಗಿ ನಟ ಯಶ್ ತಮ್ಮ ಅಭಿಮಾನಿಗಳಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ಒಂದನ್ನು ಹಾಕಿರುವ ಯಶ್, ನನ್ನ ಹುಟ್ಟುಹಬ್ಬದ ದಿನದಂದು ಯಾರೂ ಕೂಡ ಮನೆ ಬಳಿ ಬಾರದೆ ಸಾಮಾಜಿಕ ಜಾಲತಾಣದಲ್ಲಿಯೇ ನನಗೆ ವಿಶ್ ಮಾಡಿ. ನೀವು ಅನವಶ್ಯಕವಾಗಿ ಎಲ್ಲರೂ ಒಟ್ಟಿಗೆ ಸೇರುವುದರಿಂದ ಯಾರಿಗಾದ್ರು ತೊಂದರೆ ಆದ್ರೆ ನನಗೆ ತುಂಬಾ ನೋವಾಗುತ್ತದೆ.
-
A birthday request with the special announcement.
— Yash (@TheNameIsYash) January 5, 2021 " class="align-text-top noRightClick twitterSection" data="
♥️ or RT this to get a personal reminder for the teaser premiere.#KGFChapter2TeaserOnJan8 at 10:18am on @hombalefilms YT: https://t.co/ySf0l66zTS@VKiragandur @prashanth_neel @duttsanjay @TandonRaveena @SrinidhiShetty7 pic.twitter.com/p1yGIXSrPy
">A birthday request with the special announcement.
— Yash (@TheNameIsYash) January 5, 2021
♥️ or RT this to get a personal reminder for the teaser premiere.#KGFChapter2TeaserOnJan8 at 10:18am on @hombalefilms YT: https://t.co/ySf0l66zTS@VKiragandur @prashanth_neel @duttsanjay @TandonRaveena @SrinidhiShetty7 pic.twitter.com/p1yGIXSrPyA birthday request with the special announcement.
— Yash (@TheNameIsYash) January 5, 2021
♥️ or RT this to get a personal reminder for the teaser premiere.#KGFChapter2TeaserOnJan8 at 10:18am on @hombalefilms YT: https://t.co/ySf0l66zTS@VKiragandur @prashanth_neel @duttsanjay @TandonRaveena @SrinidhiShetty7 pic.twitter.com/p1yGIXSrPy
ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನದಂದು ನಿಮಗಿಂತ ಹೆಚ್ಚು ಖುಷಿಯಲ್ಲಿ ಇರ್ತೀನಿ. ಯಾಕಂದ್ರೆ ನಿಮ್ಮನ್ನೆಲ್ಲಾ ಹತ್ತಿರದಿಂದ ನೋಡಬಹುದು ಎಂದು. ಆದ್ರೆ ಈ ವರ್ಷ ಕೊರೊನಾ ಇರುವುದರಿಂದ ನೀವು ಎಲ್ಲೆಲ್ಲಿ ಇರ್ತಿರೋ ಅಲ್ಲಿಂದಲೇ ಶುಭಾಶಯ ತಿಳಿಸಿ ಎಂದಿದ್ದಾರೆ.
ಮತ್ತೊಂದು ಮಾಹಿತಿ ಹೇಳಿದ ಯಶ್, ಜನವರಿ 8ರ 10 ಗಂಟೆ 18 ನಿಮಿಷಕ್ಕೆ ಹೊಂಬಾಳೆ ಯೂಟ್ಯೂಬ್ನಲ್ಲಿ ಕೆಜಿಎಫ್-2 ಟೀಸರ್ ರಿಲೀಸ್ ಆಗುತ್ತಿದೆ. ಅದನ್ನು ನೋಡಿ ಎಂಜಾಯ್ ಮಾಡಿ ಆಶೀರ್ವದಿಸಿ ಎಂದಿದ್ದಾರೆ.