ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್, ಈಗ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ರೇಸ್ನಲ್ಲಿರುವ ಓಡುವ ಕುದುರೆ. ಕೆಜಿಎಫ್ ಚಾಪ್ಟರ್-1 ಸಕ್ಸಸ್ ಆಗುತ್ತಿದ್ದಂತೆ, ಚಾಪ್ಟರ್-2ಗೂ ಮೊದಲೇ ರಾಕಿಂಗ್ ಸ್ಟಾರ್ ಹೊಸ ಪ್ರಾಜೆಕ್ಟ್‌ಗೆ ಸಹಿ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಮತ್ತೊಂದೆಡೆ ತಮಿಳು, ತೆಲುಗು ಹಾಗೂ ಬಾಲಿವುಡ್ ನಿರ್ಮಾಣ ಸಂಸ್ಥೆಗಳು ಯಶ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಯಶ್ ಕೆಜಿಎಫ್ ಚಾಪ್ಟರ್-2 ಮುಗಿಯುವವರೆಗೂ ಯಾವ ಸಿನಿಮಾ ಮಾಡೋಲ್ಲ ಅಂದಿದ್ರು.
ಈಗ ಕೆಜಿಎಫ್ ಚಾಪ್ಟರ್-2 ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಜೊತೆಗೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಕೂಡ ರಿಲೀಸ್ ಆಗಿದ್ದು, ಟೀಸರ್ಗೆ ಭರ್ಜರಿ ರೆಸ್ಪಾನ್ಸ್ ಕೂಡ ಬಂದಿದೆ. ಇದೀಗ ಯಶ್ ಮುಂದಿನ ಸಿನಿಮಾ ಯಾವುದಿರಬಹುದೆಂದು ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಚರ್ಚೆಯಾಗುತ್ತಿದೆ. ಜೊತೆಗೆ ರಾಕಿ ಭಾಯ್ ಮುಂದಿನ ಸಿನಿಮಾ ಯಾವ ನಿರ್ದೇಶಕರ ಜೊತೆ? ಮತ್ತೆ ಯಶ್ ಫ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ ಎಂಬ ಲೆಕ್ಕಾಚಾರ ಶುರುವಾಗಿದೆ.
ಸದ್ಯ ಗಾಂಧಿನಗರದ ಸಿನಿಮಾ ಪಂಡಿತರು ಹೇಳುವ ಪ್ರಕಾರ, ಯಶ್ ಒಬ್ಬ ಕನ್ನಡದ ನಿರ್ದೇಶಕ ಹಾಗೂ ತಮಿಳಿನ ಫೇಮಸ್ ನಿರ್ದೇಶಕರ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಯಶ್ ಮುಂದಿನ ಸಿನಿಮಾ ಕೂಡ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಮಾಡಲಿದ್ದಾರಂತೆ. ಅದಕ್ಕೆ ತಕ್ಕಂತೆ ನಿರ್ದೇಶಕ ಮತ್ತು ನಿರ್ಮಾಪಕರು ರಾಕಿ ಭಾಯ್ ಜೊತೆ ಸಿನಿಮಾ ಮಾಡಲು ರೆಡಿ ಇದ್ದಾರೆ. ಆದರೆ, ಕನ್ನಡ ನಿರ್ದೇಶಕರ ಅಥವಾ ತಮಿಳು ನಿರ್ದೇಶಕರ ಎಂಬುದನ್ನು ಯಶ್ ಆಯ್ಕೆ ಮಾಡಬೇಕಿದೆ.
ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ಬಳಿಕ ಯಶ್ ಕಾಲ್ಶೀಟ್ಗಾಗಿ ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿದ್ದವು. ಇದೀಗ ಅನ್ನಿಯನ್, ಶಿವಾಜಿ, ನಾಯಕ್, ಇಂಡಿಯನ್, ರೋಬೋ ಅಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ತಮಿಳಿನ ಪ್ರಖ್ಯಾತ ನಿರ್ದೇಶಕ ಎಸ್. ಶಂಕರ್ ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯಿದೆ. ಯಶ್ ಆಪ್ತರ ಪ್ರಕಾರ, ಈಗಗಾಲೇ ನಿರ್ದೇಶಕ ಎಸ್.ಶಂಕರ್ ಜೊತೆ ಸಿನಿಮಾ ಬಗ್ಗೆ ಮಾತುಕತೆ ಮಾಡಲಾಗಿದೆ ಎನ್ನಲಾಗಿದೆ.
![Director S. Shankar](https://etvbharatimages.akamaized.net/etvbharat/prod-images/kn-bng-01-yash-next-movie-yava-ditectors-jothie7204735_09012021125808_0901f_1610177288_553.jpg)
![Director Narthan](https://etvbharatimages.akamaized.net/etvbharat/prod-images/kn-bng-01-yash-next-movie-yava-ditectors-jothie7204735_09012021125808_0901f_1610177288_280.jpg)