ETV Bharat / sitara

ನನ್ನ ಅಪ್ಪ-ಅಮ್ಮನ ಬೈಯ್ಯಬೇಡಿ ಅಂದ್ರು ಆರ್​ಜಿವಿ; ಕಾರಣ ಏನು?

author img

By

Published : Jul 17, 2019, 9:44 AM IST

ನಿರ್ದೇಶಕ ರಾಮ್​​ಗೋಪಾಲ್ ವರ್ಮಾ ತಮ್ಮ ಶಾಲಾ ದಿನಗಳ ಪೋಟೋವೊಂದನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಈ ಪೋಟೋ ನೋಡಿ ಯಾರೂ ನನ್ನ ತಂದೆ-ತಾಯಿಯನ್ನು ಬೈಯ್ಯಬೇಡಿ ಎಂದು ಹೇಳಿದ್ದಾರೆ.

ಆರ್​ಜಿವಿ

ಈ ಫೋಟೋ ನೋಡಿ ನನ್ನ ಅಪ್ಪ ಅಮ್ಮನನ್ನು ಬೈಯ್ಯಬೇಡಿ ಎಂದು ನಿರ್ದೇಶಕ ರಾಮ್​​​ಗೋಪಾಲ್ ವರ್ಮಾ ಹೇಳಿದ್ದಾರೆ. ಇದೇನು? ಆರ್​ಜಿವಿ ತಂದೆ-ತಾಯಿ ಇಬ್ಬರನ್ನೂ ಬೈಯ್ಯುವಂತ ತಪ್ಪು ಏನು ಮಾಡಿದರು ಎಂದು ಕನ್ಫ್ಯೂಸ್ ಆಗಬೇಡಿ.

ಆರ್​ಜಿವಿ ನಿನ್ನೆ ತಮ್ಮ ಟ್ವಿಟರ್​​​ನಲ್ಲಿ ತಾವು ಹೈಸ್ಕೂಲ್ ಓದುವಾಗ ತೆಗೆದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶರ್ಟ್, ಬೆಲ್​ ಬಾಟಮ್ ಪ್ಯಾಂಟ್ ಧರಿಸಿ ಉದ್ದ ಕೂದಲು ಬಿಟ್ಟು ಸ್ನೇಹಿತರೊಂದಿಗೆ ಇರುವ ಫೋಟೋ ಅದು. ಈ ಫೋಟೋ ಜೊತೆ 'ಶಾಲೆಯಲ್ಲಿ ಓದುವಾಗ ತೆಗೆದ ಪೋಟೋ ಇದು. ನೀವು ನನ್ನ ಅಪ್ಪ-ಅಮ್ಮನನ್ನು ಬೈಯ್ಯಬೇಡಿ. ಆ ಬಟ್ಟೆಯನ್ನು ನಾನೇ ಆರಿಸಿ ಧರಿಸಿಕೊಂಡೆ' ಎಂದು ಹೇಳಿದ್ದಾರೆ. ಇದಕ್ಕೆ ನೆಟಿಜನ್​​ಗಳು ವಿಧವಿಧವಾಗಿ ಕಮೆಂಟ್ ಮಾಡಿದ್ದಾರೆ. 'ನಿಮ್ಮ ಅಭಿರುಚಿಯೇ ಅಂಥಾದ್ದು ಅದಕ್ಕೆ ನೀವು ಚಿತ್ರರಂಗಕ್ಕೆ ಬಂದಿದ್ದೀರಿ' ಎಂದು ಒಬ್ಬರು ಕಮೆಂಟ್ ಮಾಡಿದರೆ, ಕೆಲವರು ಆರ್​​ಜಿವಿ ಹೇರ್​​ಸ್ಟೈಲ್ ಬಗ್ಗೆ ಕಮೆಂಟ್ ಮಾಡಿದ್ದಾರೆ.

ಈ ತಿಂಗಳ 18 ರಂದು ರಾಮ್ ಪೋತಿನೇನಿ ಅಭಿನಯದ 'ಇಸ್ಮಾರ್ಟ್ ಶಂಕರ್​' ಸಿನಿಮಾ ಬಿಡುಗಡೆಯಾಗುತ್ತಿದ್ದು ತಮ್ಮ ಸ್ನೇಹಿತ ಪೂರಿ ಜಗನ್ನಾಥ್​ಗೆ ರಾಮ್​ಗೋಪಾಲ್ ವರ್ಮಾ ಚಿತ್ರ ಸಕ್ಸಸ್​ ಆಗಲೆಂದು ಶುಭ ಕೋರಿದ್ದಾರೆ.

Intro:Body:

RGV

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.