ETV Bharat / sitara

ತೀವ್ರ ಕುತೂಹಲ ಕೆರಳಿಸಿರುವ ಫಿಲ್ಮ್​​ ಚೇಂಬರ್​ ಚುನಾವಣೆ..ಈ ಬಾರಿ ಅಧ್ಯಕ್ಷ ಪಟ್ಟ ಯಾರಿಗೆ..?

ಜೂನ್​ನಲ್ಲಿ ನಡೆಯಬೇಕಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಲಾಗಿದ್ದು ಚುನಾವಣೆಗೆ ತಯಾರಿ ನಡೆಸಿದ್ದವರಿಗೆ ಸ್ವಲ್ಪ ನಿರಾಸೆಯಾಗಿದೆ. ರಾಕ್​​​ಲೈನ್ ವೆಂಕಟೇಶ್, ಬಾ.ಮಾ. ಹರೀಶ್, ಸಾ.ರಾ. ಗೋವಿಂದು ಮೂವರೂ ಈ ಬಾರಿ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.

author img

By

Published : Jun 2, 2020, 11:07 PM IST

Film chamber president
ರಾಕ್​ಲೈನ್ ವೆಂಕಟೇಶ್

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜೂನ್ ಎರಡನೇ ವಾರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಫಿಲಂ ಚೇಂಬರ್ ಚುನಾವಣೆಯನ್ನು ಮುಂದೂಡಿ ಆದೇಶ ನೀಡಿದೆ.

Bama harish
ಬಾ.ಮಾ. ಹರೀಶ್

ರಾಜ್ಯ ಸರ್ಕಾರದ ಈ ಆದೇಶದಿಂದ ಈಗಾಗಲೇ ಚುನಾವಣೆಗೆ ತಯಾರಿ ನಡೆಸಿದ್ದವರಲ್ಲಿ ನಿರಾಸೆ ಮೂಡಿಸಿದೆ. 2020 ವಾಣಿಜ್ಯ ಮಂಡಳಿ ಅಧ್ಯಕ್ಷರ ಕುರ್ಚಿ ಮೇಲೆ ಈ ಬಾರಿ ದಿಗ್ಗಜರು ಕಣ್ಣು ಹಾಕಿದ್ದಾರೆ. ಈ ವರ್ಷ ವಾಣಿಜ್ಯ ಮಂಡಳಿ ಅಧ್ಯಕ್ಷ ಗಾದಿ ನಿರ್ಮಾಪಕರ ವಲಯಕ್ಕೆ ಮೀಸಲಾಗಿರುವುದರಿಂದ ಈ ಬಾರಿ ಚುನಾವಣೆಗೆ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಿರ್ಮಾಪಕ ರಾಕ್​​​​​​​​​​​​​​​​​​​ಲೈನ್ ವೆಂಕಟೇಶ್, ಹಾಗೂ ಬಾ.ಮಾ. ಹರೀಶ್ ಅಧ್ಯಕ್ಷ ಚುನಾವಣೆಗೆ ನಿಲ್ಲಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೂವರೂ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದರಿಂದ ಈ ಬಾರಿಯ ವಾಣಿಜ್ಯ ಮಂಡಳಿ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿರುತ್ತದೆ. ಇದೀಗ ಸರ್ಕಾರ ಚುನಾವಣೆಯನ್ನು ಮುಂದೂಡಿರುವುದು ಅಧ್ಯಕ್ಷಗಾದಿಯ ಆಕಾಂಕ್ಷಿಗಳಲ್ಲಿ ಕೊಂಚ ನಿರಾಸೆ ಮೂಡಿಸಿದೆ.

sara govindu
ಸಾರಾ ಗೋವಿಂದು

'ಸರ್ಕಾರದ ಆದೇಶವನ್ನು ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಾವು ಪಾಲಿಸಬೇಕು, ಸರ್ಕಾರ ಚುನಾವಣೆ ನಡೆಸಲು ಗ್ರಿನ್ ಸಿಗ್ನಲ್ ನೀಡಿದಾಗ ಚುನಾವಣೆ ನಡೆಯಲಿ, ನಾನು ಈ ಬಾರಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸುವುದು ಗ್ಯಾರಂಟಿ ಎಂದು ನಿರ್ಮಾಪಕ ಬಾ.ಮಾ. ಹರೀಶ್ ತಿಳಿಸಿದ್ದಾರೆ. ಇನ್ನು ಈ ಬಾರಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ನಿರ್ಮಾಪಕ ರಾಕ್​​​​​​​ಲೈನ್ ವೆಂಕಟೇಶ್ ಹಾಗೂ ಸಾ.ರಾ. ಗೋವಿಂದು ಸರ್ಕಾರ ಹಾಗೂ ಸಂಘಸಂಸ್ಥೆಗಳ ಮೂಲಕ ಚಿತ್ರರಂಗಕ್ಕೆ ನೆರವು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತು ಕೂಡಾ ಈಗ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

Rockline venkatesh
ರಾಕ್​​ಲೈನ್ ವೆಂಕಟೇಶ್

ಒಟ್ಟಿನಲ್ಲಿಈ ಬಾರಿಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ಚುನಾವಣೆ ಜಿದ್ದಾಜಿದ್ದಿಯಿಂದ ಕೂಡಿದ್ದು ಗೆಲುವಿನ ಮಹಾಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಕಾದುನೋಡಬೇಕಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.