ETV Bharat / sitara

ನೋಡಿ: ಗೋವಾದಲ್ಲಿ ವಿಜಯ್‌ ದೇವರಕೊಂಡ ಜೊತೆ ರಶ್ಮಿಕಾ ನ್ಯೂ ಇಯರ್ ಪಾರ್ಟಿ - ಗೋವಾದಲ್ಲಿ ರಶ್ಮಿಕಾ ಮಂದಣ್ಣ

ಟಾಲಿವುಡ್​ನ ಕ್ಯೂಟ್ ಜೋಡಿ ರಶ್ಮಿಕಾ ಹಾಗು ವಿಜಯ್​ ದೇವರಕೊಂಡ ಇದೀಗ ಗೋವಾದಲ್ಲಿ ಹೊಸ ವರ್ಷವನ್ನು ಸಂಭ್ರಮಿಸಿದ್ದು, ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿವೆ.

Rashmika Mandanna Vijay Deverakonda Goa vacation

author img

By

Published : Jan 10, 2022, 3:30 PM IST

ಹೈದರಾಬಾದ್​: 'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಗಪ್‌ ಚುಪ್​ ಆಗಿ ಪ್ರೀತಿಯ ಬಲೆಯಲ್ಲಿ ಬಿದ್ದಿವೆ ಎಂಬ ಗುಸುಗುಸು ಈ ಹಿಂದಿನಿಂದಲೂ ಕೇಳಿ ಬರುತ್ತಿದೆ.

ಇದಕ್ಕೆ ಪುಷ್ಠಿ ನೀಡುವ ರೀತಿಯಲ್ಲಿ ಕಳೆದ ಕೆಲವು ವಾರಗಳ ಹಿಂದೆ ಇಬ್ಬರು ಮುಂಬೈನ ರೆಸ್ಟೋರೆಂಟ್​​ವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಗೋವಾದಲ್ಲಿ ಮತ್ತೊಮ್ಮೆ ಜೊತೆಯಾಗಿ ಹೊಸ ವರ್ಷ ಸಂಭ್ರಮಾಚರಣೆ ಮಾಡಿದ್ದಾರೆ. ಈ ಮೂಲಕ ಇಬ್ಬರ ಲವ್​ ಕಹಾನಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿದೆ.

ಗೋವಾದ ರೆಸಾರ್ಟ್​​ವೊಂದರಲ್ಲಿ ಇವರು ಕಾಣಿಸಿಕೊಂಡಿದ್ದು, ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಈ ವೇಳೆ ವಿಜಯ್​-ರಶ್ಮಿಕಾ ಕುಟುಂಬ ಸದಸ್ಯರು ಹಾಗೂ ಕೆಲ ಆಪ್ತರು ಜೊತೆಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಮುಂಬೈನ ರೆಸ್ಟೋರೆಂಟ್​ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ

ವಿಜಯ್​ ದೇವರಕೊಂಡ ಇದೀಗ 'ಲೈಗರ್' ಚಿತ್ರದಲ್ಲಿ ನಟಿಸಿದ್ದು, ರಶ್ಮಿಕಾ 'ಮಿಷನ್​ ಮಜ್ನು' ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.