ETV Bharat / sitara

'ಜಾಗ್ವಾರ್'​ ನಂತರ ಮತ್ತೊಂದು ಕನ್ನಡ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರಾ ವಿಜಯೇಂದ್ರ ಪ್ರಸಾದ್​​...?

author img

By

Published : Nov 24, 2020, 12:01 PM IST

ಅಪ್ಪಾಜಿ, ಕುರುಬನ ರಾಣಿ, ಜಾಗ್ವಾರ್​ ಚಿತ್ರಗಳಿಗೆ ಕಥೆ ಬರೆದಿದ್ದ ವಿಜಯೇಂದ್ರ ಪ್ರಸಾದ್ ಇದೀಗ ಮತ್ತೊಂದು ಹೊಸ ಕನ್ನಡ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ ಎನ್ನಲಾಗಿದೆ. ನವೆಂಬರ್ 23 ರಂದು ನಡೆದ 'ಅಗ್ನಿಪ್ರವಾ' ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಜಯೇಂದ್ರ ಪ್ರಸಾದ್ ಬೆಂಗಳೂರಿಗೆ ಬಂದಿದ್ದರು.

Vijayendra Prasad
ವಿಜಯೇಂದ್ರ ಪ್ರಸಾದ್

ಖ್ಯಾತ ನಿರ್ದೇಶಕ ಎಸ್​​​.ಎಸ್. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ ಸೋಮವಾರವಷ್ಟೇ ಬೆಂಗಳೂರಿಗೆ ಬಂದು ಹೋಗಿದ್ದಾರೆ. ತಮ್ಮ ಬಳಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸುರೇಶ್ ಆರ್ಯ ಎಂಬ ಪ್ರತಿಭೆ ನಿರ್ದೇಶಿಸುತ್ತಿರುವ ಮೊದಲ ಚಿತ್ರ 'ಅಗ್ನಿಪ್ರವಾ' ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಲು ಹೈದರಾಬಾದ್​​ನಿಂದ ಬಂದಿದ್ದರು.

ಬಾಹುಬಲಿ, ಭಜರಂಗಿ ಭಾಯಿಜಾನ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್, ಮತ್ತೊಂದು ಕನ್ನಡ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ವಿಜಯೇಂದ್ರ ಪ್ರಸಾದ್ ಅವರಿಗೆ ಕನ್ನಡ ಚಿತ್ರರಂಗ ಹೊಸದೇನಲ್ಲ. ಡಾ. ವಿಷ್ಣುವರ್ಧನ್ ಅಭಿನಯದ 'ಅಪ್ಪಾಜಿ', ಶಿವರಾಜ್​​​​​​​​​​​ಕುಮಾರ್ ಅಭಿನಯದ 'ಕುರುಬನ ರಾಣಿ' ಮುಂತಾದ ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದರು. 2016 ರಲ್ಲಿ ಬಿಡುಗಡೆಯಾದ ಮಾಜಿ ಮುಖ್ಯಮಂತ್ರಿ ಹೆಚ್​​​​​​​​​.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಮೊದಲ ಚಿತ್ರ 'ಜಾಗ್ವಾರ್'ಗೆ ಅವರೇ ಕಥೆ ಚಿತ್ರಕಥೆ ರಚಿಸಿದ್ದರು.

ಇದೀಗ ವಿಜಯೇಂದ್ರ ಪ್ರಸಾದ್ಅವತಾರ್ ಎಂಬುವವರ ಸಿನಿಮಾಗೆ ಕಥೆ ಬರೆಯುತ್ತಿದ್ದಾರಂತೆ.ಈ ಅವತಾರ್ ಮೂಲ ಹೆಸರು ಮನೋಜ್ ಪುತ್ತೂರು. 4 ಕನ್ನಡ, 2 ತುಳು ಹಾಗೂ ಒಂದು ತೆಲುಗು ಚಿತ್ರದಲ್ಲಿ ಮನೋಜ್ ನೆಗೆಟಿವ್ ಪಾತ್ರಗಳಲ್ಲೇ ಹೆಚ್ಚು ನಟಿಸಿದ್ದಾರೆ. ಇದೀಗ ಅವರು ತಮ್ಮ ಹೆಸರನ್ನು ಅವತಾರ್ ಎಂದು ಬದಲಾಯಿಸಿಕೊಂಡಿದ್ದು, ಹೀರೋ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಮನೋಜ್ ಹೀರೋ ಆಗುತ್ತಿರುವ ಮೊದಲ ಚಿತ್ರಕ್ಕೆ ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಿದ್ದಾರೆ ಎನ್ನುವುದು ವಿಶೇಷ.

ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು, ಮೂರು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆಯಂತೆ. ಸದ್ಯ ಮೊದಲ ಭಾಗದ ಚಿತ್ರಕ್ಕೆ ತಯಾರಿ ನಡೆಯುತ್ತಿದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಸದ್ಯಕ್ಕೆ ಈ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬೀಳಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.