ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ಕಾಂಬಿನೇಷನ್ನಲ್ಲಿ ಸಲಾರ್ ಸಿನಿಮಾ ರೆಡಿಯಾಗುತ್ತಿದೆ. ಇತ್ತೀಚೆಗಷ್ಟೇ ಸೆಟ್ಟೇರಿರುವ ಈ ಸಿನಿಮಾಲ್ಲಿ ಸದ್ಯ ಪ್ರಭಾಸ್ ಪಾತ್ರ ಪರಿಚಯ ಮಾತ್ರ ಗೊತ್ತಾಗಿದೆ.
ಪ್ರಭಾಸ್ ಅಭಿನಯದ ಸಲಾರ್ನಲ್ಲಿ ವಿಜಯ್ ಸೇತುಪತಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ವಿಜಯ್ ದಳಪತಿ ನಟನೆಯ 'ಮಾಸ್ಟರ್' ಚಿತ್ರದಲ್ಲಿ ವಿಜಯ್ ಸೇತುಪತಿಯ ನಟನೆಯನ್ನು ನೋಡಿ ಮೆಚ್ಚಿರುವ ಪ್ರಶಾಂತ್ ನೀಲ್ ಸಲಾರ್ನಲ್ಲಿ ನಟಿಸುವಂತೆ ಕೇಳಿದ್ದಾರಂತೆ.
ಆದ್ರೆ ದಿನಾಂಕಗಳ ಕೊರತೆಯಿಂದ ವಿಜಯ್ ಸೇತುಪತಿ ಇನ್ನೂ ಈ ವಿಚಾರವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇತ್ತ ಪ್ರಶಾಂತ್ ನೀಲ್ ಕೂಡ ಈ ಬಗ್ಗೆ ಏನೂ ಹೇಳಿಲ್ಲ. ಆದ್ರೆ ಕೆಲವೇ ದಿನಗಳಲ್ಲಿ ಈ ಬಗ್ಗೆ ಒಂದು ದೊಡ್ಡ ಮಾಹಿತಿಯೇ ಹೊರ ಬರುತ್ತದೆ ಎಂದು ಸಿನಿ ರಂಗದ ವಿಮರ್ಶಕರ ಮಾತಾಗಿದೆ.
ಇತ್ತೀಚೆಗೆ ಸಲಾರ್ ಸಿನಿಮಾದ ಮುಹೂರ್ತವು ಹೈದ್ರಾಬಾದ್ನಲ್ಲಿ ನಡೆದಿದ್ದು ಸಿನಿಮಾ ವರ್ಗ ಸೇರಿದಂತೆ, ಕನ್ನಡದ ರಾಕಿಂಗ್ ಸ್ಟಾರ್ ಯಶ್ ಕೂಡ ಭಾಗಿಯಾಗಿದ್ರು.