ETV Bharat / sitara

ವೆಬ್​ ಸೀರಿಸ್​ನಲ್ಲಿ ನಟನೆ: ಶಾಹಿದ್​​ಗಿಂತ ದುಬಾರಿಯಾದ ವಿಜಯ್​ ಸೇತುಪತಿ - ವಿಜಯ್​ ಸೇತುಪತಿ ಲೇಟೆಸ್ಟ್ ನ್ಯೂಸ್

ಬಾಲಿವುಡ್​ ಸೂಪರ್ ಸ್ಟಾರ್​ ಶಾಹಿದ್​ ಕಪೂರ್ ಮತ್ತು ತಮಿಳಿನ ಖ್ಯಾತ ನಟ ವಿಜಯ್​ ಸೇತುಪತಿ ಒಟ್ಟಾಗಿ ವೆಬ್​ ಸೀರಿಸ್​ನಲ್ಲಿ ನಟಿಸುತ್ತಿದ್ದಾರೆ. ಈ ವೆಬ್​ ಸೀರಿಸ್​ ರಾಜ್​ ಮತ್ತು ಡಿಕೆ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ವೆಬ್​ ಸೀರಿಸ್​ನಲ್ಲಿ ನಟಿಸಲು ಇಬ್ಬರು ನಟರೂ ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ.

Vijay Sethupathi to get bigger paycheck than Shahid Kapoor for Raj & DK's web series?
ಬಾಲಿವುಡ್​ ಸೂಪರ್ ಸ್ಟಾರ್​ ಶಾಹಿದ್​ ಕಪೂರ್ ಮತ್ತು ತಮಿಳಿನ ಖ್ಯಾತ ನಟ ವಿಜಯ್​ ಸೇತುಪತಿ
author img

By

Published : Feb 3, 2021, 2:04 PM IST

Updated : Feb 3, 2021, 7:07 PM IST

ಹೈದರಾಬಾದ್: ಕಬೀರ್ ಸಿಂಗ್ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಬಾಲಿವುಡ್​ ಸೂಪರ್ ಸ್ಟಾರ್​ ಶಾಹಿದ್​ ಕಪೂರ್​ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು, ವೆಬ್​ ಸೀರಿಸ್​ನಲ್ಲಿ ನಟಿಸಲು ಮುಂದಾಗಿದ್ದಾರೆ.

Shahid  and Raashi Khanna
ಶಾಹಿದ್​ ಕಪೂರ್​ ಮತ್ತು ನಟಿ ರಾಶಿ ಖನ್ನಾ

ಈ ವೆಬ್​ ಸಿರೀಸ್​ ರಾಜ್​ ಮತ್ತು ಡಿಕೆ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಇದರಲ್ಲಿ ನಟ ಶಾಹಿದ್​​ ಹಾಗೂ ತಮಿಳಿನ ಖ್ಯಾತ ನಟ ವಿಜಯ್​ ಸೇತುಪತಿ ನಟಿಸುತ್ತಿದ್ದಾರೆ. ವಿಜಯ್ ನಟಿಸುವುದು ಬಹುತೇಕ ಖಚಿತವಾಗಿದ್ದು, ಗೋವಾದಲ್ಲಿ ಚಿತ್ರೀಕರಣ ಮಾಡಲು ತಂಡ ಪ್ಲಾನ್ ಮಾಡಿದೆ. ಆಕ್ಷನ್, ಥ್ರಿಲ್ಲರ್ ಸರಣಿಯಾಗಿದ್ದು, ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

Shahid Kapoor with film team
ಚಿತ್ರದಂಡದೊಂದಿಗೆ ನಟ ಶಾಹಿದ್​ ಕಪೂರ್​

ಇಬ್ಬರು ನಟರು ಈ ವೆಬ್ ಸೀರಿಸ್ ಗಾಗಿ ಭರ್ಜರಿ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಶಾಹಿದ್​ ಕಪೂರ್​ ಅವರು ಬರೋಬ್ಬರಿ 40 ಕೋಟಿ ರೂ. ಹಾಗೂ ವಿಜಯ್​ ಸೇತುಪತಿ 55 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಓದಿ: ಬಸ್​ನಲ್ಲಿ ಫುಲ್ ರಶ್ ಇರತ್ತೆ.. ಚಿತ್ರಮಂದಿರಕ್ಕೆ ಯಾಕೆ ನಿರ್ಬಂಧ...? ಸರ್ಕಾರಕ್ಕೆ ಧ್ರುವ ಸರ್ಜಾ ಪ್ರಶ್ನೆ

ಇನ್ನು ವೆಬ್ ಸಿರೀಸ್​ನ ಶೀರ್ಷಿಕೆ ಅಂತಿಮವಾಗಿಲ್ಲ. ಶಾಹಿದ್ ಮತ್ತು ವಿಜಯ್ ಅವರಲ್ಲದೆ ಮುಂಬರುವ ಎಪಿಸೋಡ್​ಗಳಲ್ಲಿ ನಟಿ ರಾಶಿ ಖನ್ನಾ ಕೂಡ ನಟಿಸುತ್ತಿದ್ದು, ಜ.25 ರಂದು ಗೋವಾದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸದ್ಯದಲ್ಲೇ ಟೈಟಲ್ ಫೈನಲ್ ಆಗಲಿದ್ದು, ಹೆಚ್ಚಿನ ವಿವರವನ್ನು ತಂಡ ಬಹಿರಂಗ ಪಡಿಸಲಿದೆ.

Last Updated : Feb 3, 2021, 7:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.