ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಾಡಿನಷ್ಟೇ, ಅದ್ಧೂರಿಯಾಗಿ ಆಲ್ಬಂ ಹಾಡುಗಳ ನಿರ್ಮಾಣದ ಟ್ರೆಂಡ್ ಶುರುವಾಗಿದೆ. ಇದೇ ಸಾಲಿನಲ್ಲಿ ಆರಾಮ್ಸೆ ಎಂಬ ಆಲ್ಬಂ ಹಾಡು ಕೂಡ ಸೇರ್ಪಡೆ ಆಗಿತ್ತು. ವಿಶೇಷ ಎಂದರೆ ಬಹುಭಾಷಾ ಗಾಯಕನಾಗಿರೋ ಜೈ ಹೋ ಖ್ಯಾತಿಯ ಗಾಯಕ ವಿಜಯ್ ಪ್ರಕಾಶ್ ಆಲ್ಬಂ ಸಾಂಗ್ ಹಾಡಿದ್ದಾರೆ.
- " class="align-text-top noRightClick twitterSection" data="">
ವಿಜಯ್ ಪ್ರಕಾಶ್ ಸಾಮಾನ್ಯವಾಗಿ ಆಲ್ಬಂ ಹಾಡುಗಳಲ್ಲಿ ಹಾಡುವುದು ತುಂಬಾನೇ ಕಡಿಮೆ. ಆದರೀಗ ಅವರು ಆರಾಮ್ಸೆ ಆಲ್ಬಂ ಸಾಂಗ್ಗೆ ಧ್ವನಿ ನೀಡಿದ್ದಾರೆ. ಆರಾಮ್ಸೆ ಅನ್ನೇ ಶೀರ್ಷಿಕೆಯನ್ನಾಗಿಸಿ ಈ ಹಾಡನ್ನು ರಚಿಸಿದ್ದಾರೆ ಯುವ ಪ್ರತಿಭೆ ಅಭಿಷೇಕ ಮಠದ್.
ಜೀವನದಲ್ಲಿ ಎಷ್ಟೋ ತಿರಸ್ಕಾರಗಳು ಬರುತ್ತವೆ. ಅಂದ ಮಾತ್ರಕ್ಕೆ ಬದುಕನ್ನು ಕೈಬಿಡಬಾರದು. ಇಲ್ಲಿಯೇ ಮುಂದುವರಿಯಬೇಕು ಎನ್ನುವ ಅಂಶ ಹಾಡಿನಲ್ಲಿದೆ. ಈ ಅಂಶ ವಿಜಯ್ ಪ್ರಕಾಶ್ ಅವರಿಗೆ ಇಷ್ಟವಾಗಿ, ಅವರು ಖುಷಿಯಿಂದ ಹಾಡಿದರು. ನಂತರ ಈ ಹಾಡನ್ನು ಚಿತ್ರೀಕರಣ ಮಾಡಿದ ರೀತಿಗೆ ಅವರು ಸಂತಸ ವ್ಯಕ್ತಪಡಿಸಿದರು. ಗಾಯಕ ವಿಜಯ್ ಪ್ರಕಾಶ್ ನಮಗೆ ಬಹಳ ಬೆಂಬಲ ನೀಡಿದರು ಎನ್ನುತ್ತಾರೆ ಅಭಿಷೇಕ ಮಠದ್.
ಇದು ಒಬ್ಬ ಕಲಾವಿದನ ಸ್ಫೂರ್ತಿದಾಯಕ ಪ್ರಯಾಣದ ಬಗ್ಗೆ ಇರುವಂತಹ ಹಾಡಾಗಿದೆ. ಇದಕ್ಕೆ ನಾವು ಆರಾಮ್ಸೆ ಎಂದು ಟೈಟಲ್ ನೀಡಿದ್ದೇವೆ. ಕಲಾವಿದನೊಬ್ಬನ ವೃತ್ತಿ ಜೀವನದ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳನ್ನು ಈ ಹಾಡು ವಿವರಿಸುತ್ತದೆ. ನಟನೆಯ ವೃತ್ತಿ ಜೀವನದಲ್ಲಿ ಹಲವಾರು ನಿರಾಕರಣೆಗಳು ಮತ್ತು ನಿರಾಸೆಗಳ ನಂತರ ಅವರು ಹತಾಸೆಯಿಂದ ತಮ್ಮ ಜೀವನವನ್ನು ತ್ಯಜಿಸಲು ನಿರ್ಧರಿಸುತ್ತಾರೆ.
ಆದರೆ, ಮತ್ತೆ ತಮ್ಮ ಜೀವನದಲ್ಲಿ ಗೆಲ್ಲುವುದಕ್ಕೆ ಮುಂದುವರಿಯುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಆ ಹೋರಾಟ ಮತ್ತು ನೋವುಗಳನ್ನು ವಿಡಿಯೋದಲ್ಲಿ ತೋರಿಸಲಾಗಿದೆ ಅಂತಾರೆ ಅಭಿಷೇಕ ಮಠದ್.
ಇದನ್ನೂ ಓದಿ: ತೂಕ ಹೆಚ್ಚಿಸಿಕೊಂಡ ಪ್ರಿಯಾಂಕಾ ತಿಮ್ಮೇಶ್… ಯಾಕೆ ಗೊತ್ತಾ?
ಈ ಹಾಡಿಗೆ ರಿಷಿಕೇಶ್ ಛಾಯಾಗ್ರಹಣ ಮಾಡಿದ್ದಾರೆ. ಹಾಡಿನ ಕಾನ್ಸೆಪ್ಟ್, ನೃತ್ಯ ನಿರ್ದೇಶನ, ನಿರ್ದೇಶನ, ನಿರ್ಮಾಣ ಮಾಡಿರುವ ಅಭಿಷೇಕ್ ಮಠದ್ ಅವರೇ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಅಭಿಷೇಕ್ ಈ ಹಿಂದೆ ದಿಗಂತ್ ಜೊತೆಗೆ ಒಂದು ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅದಕ್ಕೆ ಅವರೇ ನೃತ್ಯ ನಿರ್ದೇಶನ ಮಾಡಿದ್ದರು. ನಂತರ ಚಂದನ್ ಶೆಟ್ಟಿ ಜೊತೆಗೆ ಟಕಿಲಾ, ಬಡಪಾಯಿ ಕುಡುಕ ಸಾಂಗ್‌ಗಳನ್ನು ಮಾಡಿದ್ದಾರೆ. ಈಚೆಗೆ ಅದಿತಿ ಪ್ರಭುದೇವ ಅವರೊಂದಿಗೆ ಪರ್ಫೆಕ್ಟ್ ಗರ್ಲ್ ಎಂಬ ಸಾಂಗ್ ಮಾಡಿದ್ದರು ಅಭಿಷೇಕ್. ಸದ್ಯ ಬಳೆಪೇಟೆ ಮತ್ತು ಸಮುದ್ರಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.