ETV Bharat / sitara

ಕೊರೊನಾದಿಂದ ದೂರವಿರಲು ವಿಜಯ್ ದೇವರಕೊಂಡ ನೀಡಿದ ಟಿಪ್ಸ್ ಏನು...?

ಕೊರೊನಾದಿಂದ ದೂರ ಇರಲು ಮೆಡಿಕಲ್ ಮಾಸ್ಕ್​​​​​​​​ಗಳನ್ನು ಬಿಟ್ಟು ಆದಷ್ಟು ಮನೆಯಲ್ಲೇ ತಯಾರಿಸಿದ ಮಾಸ್ಕ್ ಬಳಸಿ, ಹ್ಯಾಂಡ್​ ಕರ್ಚೀಫ್, ಸ್ಕಾರ್ಫ್​ ಅಥವಾ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರ ಚುನ್ನಿ ಬಳಸಿ ಎಂದು ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

author img

By

Published : Apr 7, 2020, 9:02 PM IST

Vijay Deverakonda
ವಿಜಯ್ ದೇವರಕೊಂಡ

ಮನೆಯಿಂದ ಹೊರ ಬಾರದಂತೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೆಲಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ಲಾಕ್​ ಡೌನ್ ಉಲ್ಲಂಘಿಸಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಇದೀಗ ಟಾಲಿವುಡ್​​​​​ನ ವಿಜಯ್ ದೇವರಕೊಂಡ ಕೂಡಾ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್​​ಟಾಗ್ರಾಮ್​​​ನಲ್ಲಿ ಪೋಸ್ಟ್ ಹಾಕಿರುವ ವಿಜಯ್ ದೇವರಕೊಂಡ, 'ನೀವೆಲ್ಲಾ ಸೇಫ್ ಎಂದು ಭಾವಿಸಿದ್ದೇನೆ, ಕೊರೊನಾದಿಂದ ಪಾರಾಗಲು ನೀವು ಆದಷ್ಟು ಮನೆಯಲ್ಲಿ ತಯಾರಿಸಿದ ಮಾಸ್ಕ್​ ಧರಿಸಿ, ಹ್ಯಾಂಡ್​ ಕರ್ಚೀಫ್, ಸ್ಕಾರ್ಫ್​, ನಿಮ್ಮ ತಾಯಿಯ ಚುನ್ನಿಯಿಂದ ಮುಖವನ್ನು ಕವರ್ ಮಾಡಿಕೊಂಡು ಸೇಫ್ ಆಗಿ ಇರಿ, #MaskIndia'ಎಂದು ಪೋಸ್ಟ್ ಹಾಕಿದ್ಧಾರೆ. ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಪಿಪಿಇ ಕಿಟ್ ಕೊರತೆ ಇರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಸಮಯದಲ್ಲಿ ವಿಜಯ್ ದೇವರಕೊಂಡ ಜನರಿಗೆ ಈ ರೀತಿ ಮನವಿ ಮಾಡಿದ್ದಾರೆ.

ದೇವರಕೊಂಡ ಮಾತ್ರವಲ್ಲ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು ಸೇರಿ ಬಹುತೇಕ ಟಾಲಿವುಡ್​​​​​​​ ಸ್ಟಾರ್​​​​​​ಗಳು ಅಭಿಮಾನಿಗಳಿಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇನ್ನು ಸೆಂಚುರಿ ಸ್ಟಾರ್ ಶಿವರಾಜ್​​ಕುಮಾರ್, ಅಮಿತಾಬ್ ಬಚ್ಚನ್, ರಣಬೀರ್ ಕಪೂರ್, ಚಿರಂಜೀವಿ, ಮೋಹನ್ ಲಾಲ್ , ಮುಮ್ಮುಟಿ. ಪ್ರಿಯಾಂಕ ಚೋಪ್ರಾ, ಆಲಿಯಾ ಭಟ್ ಎಲ್ಲರೂ 'ಫ್ಯಾಮಿಲಿ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದು ಈ ಕಿರುಚಿತ್ರ ಈಗಾಗಲೇ ವೈರಲ್ ಆಗುತ್ತಿದೆ. ಆದರೆ ಇವರೆಲ್ಲಾ ತಮ್ಮ ತಮ್ಮ ಮನೆಯಲ್ಲಿದ್ದುಕೊಂಡೇ ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಈ ಕಿರುಚಿತ್ರದಲ್ಲಿ ಸಂದೇಶ ನೀಡಲಾಗಿದೆ.

ವಿಜಯ್ ದೇವರಕೊಂಡ ಸಿನಿಮಾ ವಿಚಾರಕ್ಕೆ ಬರುವುದಾದರೆ ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಬಾಲಿವುಡ್​​ ಚಿತ್ರದಲ್ಲಿ ಅನನ್ಯ ಪಾಂಡೆ ಜೊತೆ ನಟಿಸುತ್ತಿದ್ದಾರೆ. ಸದ್ಯಕ್ಕೆ ಲಾಕ್​​​ ಡೌನ್​​​ನಿಂದ ಚಿತ್ರೀಕರಣಕ್ಕೆ ಬ್ರೇಕ್ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.