ತೆಲುಗು ನಟ ವಿಜಯ್ ದೇವರಕೊಂಡ ಬಾಲಿವುಡ್ ನಟಿ ಅನನ್ಯ ಪಾಂಡೆಯನ್ನು ಹಾಡಿ ಹೊಗಳಿದ್ದಾರೆ. ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಫೈಟರ್ ಚಿತ್ರದಲ್ಲಿ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಪೂರಿ ಜಗನ್ನಾಥ್ ಆ್ಯಕ್ಷನ್- ಕಟ್ ಹೇಳುತ್ತಿದ್ದು, ಇದೇ ಮೊದಲ ಬಾರಿಗೆ ಸೌಥ್ ನಟ, ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದಾರೆ.
ಇನ್ನು, ಇತ್ತೀಚಿನ ಸಂದರ್ಶನ ಒಂದರಲ್ಲಿ ನಟ ವಿಜಯ್ ದೇವರಕೊಂಡ ಅನನ್ಯ ಪಾಂಡೆಯನ್ನು ಹೊಗಳಿದ್ದಾರೆ. ಅನನ್ಯ ಪಾಂಡೆ ಸಹೃದಯಿ. ಒಳ್ಳೆಯ ಹುಡುಗಿ. ತೆಲುಗು ಜನರು ಮತ್ತು ದಕ್ಷಿಣ ಭಾರತದ ಜನರು ಅನನ್ಯರನ್ನು ನೋಡುವುದಕ್ಕೆ ಖುಷಿ ಪಡ್ತಾರೆ. ಫೈಟರ್ ಚಿತ್ರವನ್ನು ಶೇ.50ರಷ್ಟು ಮುಗಿಸಿದ್ದೇವೆ, ನಿಜಕ್ಕೂ ಅನನ್ಯ ಗ್ರೇಟ್ ಎಂದಿದ್ದಾರೆ.
ಅನನ್ಯ ಪಾಂಡೆ 2019ರಲ್ಲಿ ತೆರೆ ಕಂಡ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಅನನ್ಯ ಪಾಂಡೆ ಇದುವರೆಗೂ ಕೇವಲ ನಾಲ್ಕು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ.