ETV Bharat / sitara

ಕತ್ರಿನಾ ಮದುವೆಗೆ ಮಾಜಿ ಪ್ರಿಯಕರ ಸಲ್ಮಾನ್​ ಖಾನ್​​​ ಸಹೋದರಿಯರು.. ಸಲ್ಲು ಬರೋದು ಡೌಟ್​! - ಕತ್ರಿನಾ ಮದುವೆಗೆ ಸಲ್ಮಾನ್​​​ ಗೈರು

ಡಿಸೆಂಬರ್​​ 9ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್​​ ಮದುವೆ ಸಮಾರಂಭದಲ್ಲಿ ಬಾಲಿವುಡ್​​ನ ಸೂಪರ್​ ಸ್ಟಾರ್​ ಸಲ್ಮಾನ್ ಖಾನ್​​​ ಭಾಗಿಯಾಗುವುದು ಬಹುತೇಕ ಡೌಟ್​​ ಆಗಿದೆ.

Vicky-Katrina wedding
Vicky-Katrina wedding
author img

By

Published : Dec 7, 2021, 5:02 PM IST

ಮುಂಬೈ: ಬಾಲಿವುಡ್​ ಸೂಪರ್​ ಸ್ಟಾರ್​​ ಸಲ್ಮಾನ್ ಖಾನ್​ ಇಬ್ಬರು ಸಹೋದರಿಯರು ​ಇದೀಗ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​​​ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಖಚಿತಗೊಂಡಿದೆ. ಆದರೆ, ಈ ಸಮಾರಂಭದಲ್ಲಿ ನಟ ಸಲ್ಲು ಭಾಗಿಯಾಗುವುದು ಮಾತ್ರ ಬಹುತೇಕ ಡೌಟ್​​ ಎನ್ನಲಾಗ್ತಿದೆ.

Salman's sisters
ಕತ್ರಿನಾ ಕೈಫ್ ಜೊತೆ ಸಲ್ಮಾನ್ ಸಹೋದರಿಯರು

ಡಿಸೆಂಬರ್​​ 9ರಂದು ಬಾಲಿವುಡ್​ನ ಕ್ಯೂಟ್​​ ಜೋಡಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್​ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈ ವೇಳೆ ಅನೇಕರು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಮಾಜಿ ಪ್ರಿಯಕರ ಸಲ್ಮಾನ್​ ಖಾನ್​ ಭಾಗಿಯಾಗುವುದು ಬಹುತೇಕ ಡೌಟ್​​ ಆಗಿದೆ.

ಸಲ್ಮಾನ್​​ ಖಾನ್​ ಕುಟುಂಬಕ್ಕೆ ಈಗಾಗಲೇ ಮದುವೆ ಆಮಂತ್ರಣ ನೀಡಲಾಗಿದೆ. ಹೀಗಾಗಿ ಅವರ ಸಹೋದರಿಯರಾದ ಅಲ್ವಿರಾ ಖಾನ್​ ಹಾಗೂ ಅರ್ಪಿತಾ ತಮ್ಮ ಪತಿಯರೊಂದಿಗೆ ತೆರಳುತ್ತಿದ್ದಾರೆ ಎಂಬುದು ಕುಟುಂಬದ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ವಿಕ್ಕಿ- ಕತ್ರಿನಾ ಕೈಫ್​ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ದಿನವೇ ಸಲ್ಮಾನ್ ಖಾನ್​​ ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ಕಾರಣ ಮದುವೆ ಸಮಾರಂಭದಿಂದ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

Salman's sisters
ಕತ್ರಿನಾ ಮದುವೆಗೆ ಮಾಜಿ ಪ್ರಿಯಕರ ಸಲ್ಮಾನ್​ ಸಹೋದರಿಯರು

ಇದನ್ನೂ ಓದಿರಿ: 'ನನ್ನ ತಂದೆಗೆ ಹೊಡಿಬೇಡಿ'... ನಡುರಸ್ತೆಯಲ್ಲೇ ಕಣ್ಣೀರು ಹಾಕಿದ ಮಗಳು!

ಇನ್ನು ಸಲ್ಮಾನ್ ಖಾನ್​ ಹಾಗೂ ಕತ್ರಿನಾ ಕೈಫ್​ ಒಂದು ಕಾಲದಲ್ಲಿ ಪರಸ್ಪರ ಪ್ರೀತಿಸುತ್ತಿದ್ದರು. ಅನೇಕ ಕಡೆ ಈ ಜೋಡಿ ಸುತ್ತಾಟ ನಡೆಸಿತ್ತು. ಆದರೆ ಇದನ್ನ ಗುಟ್ಟಾಗಿ ಇಟ್ಟಿದ್ದರು. ಈ ಸಂಬಂಧ ಹೆಚ್ಚು ಕಾಲ ಉಳಿದುಕೊಳ್ಳದ ಕಾರಣ ಬ್ರೇಕ್ ​​ಅಪ್​ ಆಗಿತ್ತು. ಇದರ ಹೊರತಾಗಿ ಕೂಡ ಇಬ್ಬರ ನಡುವೆ ಒಳ್ಳೆಯ ಗೆಳೆತನವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.