ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್‌ಗೆ 79ನೇ ಇಂದು ಜನ್ಮದಿನದ ಸಂಭ್ರಮ. ಅನೇಕ ಚಿತ್ರಗಳಲ್ಲಿ ಹಾಸ್ಯದ ಮೂಲಕ ರಂಜಿಸಿರುವ ದ್ವಾರಕೀಶ್ ಅಭಿಮಾನಿಗಳ ಮನಸ್ಸಿನಲ್ಲಿ ಖಾಯಂ ಸ್ಥಾನ ಪಡೆದುಕೊಂಡಿದ್ದಾರೆ.
ನಟನೆಯ ಜೊತೆ ನಿರ್ದೇಶನ, ನಿರ್ಮಾಣವನ್ನು ಮಾಡಿರುವ ದ್ವಾರಕೀಶ್ ಸೋಲು-ಗೆಲುವು ಕಂಡವರು. 19 ಚಿತ್ರಗಳನ್ನು ನಿದೇಶಿಸಿದ್ದು ಈವರೆಗೆ 52 ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕನ್ನಡ ಅಷ್ಟೇ ಅಲ್ಲ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳದಲ್ಲೂ ಚಿತ್ರ ನಿರ್ಮಿಸಿದ್ದಾರೆ.
ಇಂದು 79ನೇ ಜನ್ಮ ದಿನದ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ದ್ವಾರಕೀಶ್ ಇನ್ನಷ್ಟು ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡುವಂತಾಗಲಿ.