ETV Bharat / sitara

ನಟ ಆಯುಷ್ಮಾನ್ ಜೋಡಿಯಾಗಲು  ಥ್ರಿಲ್​​ ಆಗಿದ್ದಾರಂತೆ ವಾಣಿ ಕಪೂರ್​...!! - ಬೆಲ್‌ಬಾಟಮ್ ಚಿತ್ರದ ಚಿತ್ರೀಕರಣ

ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಆಯುಷ್ಮಾನ್ ಖುರಾನರೊಂದಿಗೆ ನಟಿಸಲು ಚಂಡೀಗಢಕ್ಕೆ ಹೊರಟಿರುವ ವಾಣಿ ಕಪೂರ್​, ನಮ್ಮ ಪೀಳಿಗೆಯ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಖುರಾನಾರೊಂದಿಗೆ ನಟಿಸಲು ನಾನು ರೋಮಾಂಚನಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Vaani heads to Chandigarh, 'thrilled' to be working with Ayushmann
ನಟ ಆಯುಷ್ಮಾನ್ ಜೋಡಿಯಾಗಲು ತ್ರಿಲ್​ ಆಗಿದ್ದಾರಂತೆ ವಾಣಿ ಕಪೂರ್​...!!
author img

By

Published : Oct 10, 2020, 2:45 PM IST

ಮುಂಬೈ: ನಿರ್ದೇಶಕ ಅಭಿಷೇಕ್ ಕಪೂರ್ ಅವರ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣಕ್ಕಾಗಿ ವಾಣಿ ಕಪೂರ್ ಚಂಡೀಗಡಕ್ಕೆ ತೆರಳಿದ್ದಾರೆ. ಈ ಸಿನಿಮಾದಲ್ಲಿ ಅವರು ಆಯುಷ್ಮಾನ್ ಖುರಾನಾಗೆ ಜೋಡಿಯಾಗಿದ್ದಾರೆ.

ಅಕ್ಷಯ್ ಕುಮಾರ್ ಅಭಿನಯದ ಬೆಲ್‌ಬಾಟಮ್ ಚಿತ್ರದ ಚಿತ್ರೀಕರಣವನ್ನು ಈಗಷ್ಟೇ ಮುಗಿಸಿರುವ ವಾಣಿ, ರಾಕ್ ಆನ್, ಕೈ ಪೊ ಚೆ ಮತ್ತು ಕೇದಾರನಾಥ್ ನಂತಹ ಚಲನಚಿತ್ರಗಳ ಜನಪ್ರಿಯ ನಿರ್ದೇಶಕ ಅಭಿಷೇಕ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ.

"ಇದು ಸುಂದರವಾದ ಹಾರ್ಟ್​ ರೆಂಡರಿಂಗ್ ಚಿತ್ರ ಎಂದಿರುವ ವಾಣಿ, ಅಭಿಷೇಕ್ ಕಪೂರ್ ಅವರ ಚಿತ್ರಗಳಿಂದ ಪ್ರೇರಿತಳಾಗಿದ್ದ ನಾನು ಅವರೊಂದಿಗೆ ಕೆಲಸ ಮಾಡಲು ಯಾವಾಗಲೂ ಬಯಸುತ್ತಿದ್ದೆ. ಸದ್ಯ ಅವರ ದೃಷ್ಟಿಯ ಭಾಗವಾಗಲು ಇದು ಒಂದು ಅದ್ಭುತ ಅವಕಾಶ ಎಂದು ಭಾವಿಸುತ್ತೇನೆ" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಆಯುಷ್ಮಾನ್ ನಮ್ಮ ಪೀಳಿಗೆಯ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು ಮತ್ತು ಈ ಸಿನಿಮಾ ಸುಂದರವಾದ ಪ್ರೇಮಕಥೆಯಾಗಿದ್ದು, ನಮ್ಮಿಬ್ಬರ ಜೋಡಿಯ ಮೊದಲ ಚಿತ್ರದ ಬಗ್ಗೆ ನಾನು ರೋಮಾಂಚನಗೊಂಡಿದ್ದೇನೆ" ಎಂದು ವಾಣಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.