ಪ್ರೀತಿ,ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಎಂದು ನೀತಿ ಪಾಠ ಹೇಳಿದ್ದ ಉಪ್ಪಿಗೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಪ್ರೀತಿ ಪಾಠ ಶುರು ಮಾಡಲು ಕೆಲವೇ ದಿನಗಳಷ್ಟೇ ಬಾಕಿ ಇದೆ. ಈಗಾಗಲೇ ಬೆಂಗಳೂರಲ್ಲಿ 'ಐ ಲವ್ ಯು' ಫೀವರ್ ಹೆಚ್ಚಾಗಿದ್ದು ಜೂನ್ 14 ರಂದು ಸಿನಿಮಾ ತೆರೆ ಕಾಣುತ್ತಿದೆ.
ಸಿನಿಮಾ ಬಿಡುಗಡೆಯಾಗಲು 6 ದಿನಗಳಷ್ಟೇ ಬಾಕಿ ಇದ್ದು ಉಪ್ಪಿ ಅಭಿಮಾನಿಗಳು ಚಿತ್ರವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ. ಬೆಂಗಳೂರಿನ ಉಪ್ಪಿ ಅಭಿಮಾನಿಗಳು ಇಂದು ಚಿತ್ರದ ಪೋಸ್ಟರ್ ಮುಂದೆ ಖುಷಿ ಸೆಲಬ್ರೇಟ್ ಮಾಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಆರ್. ಚಂದ್ರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವುದಲ್ಲದೇ, ನಿರ್ಮಾಣ ಕೂಡಾ ಮಾಡಿದ್ದಾರೆ. ಇನ್ನು ವಿತರಕರಾದ ಮೊಹನ್ ಎಂಟರ್ಪ್ರೈಸಸ್ ಹಾಗೂ ಧೀರಜ್ ಎಂಟರ್ಪ್ರೈಸಸ್ ಸಂಸ್ಥೆ ಚಿತ್ರದ ವಿತರಣೆ ಹಕ್ಕನ್ನು ಪಡೆದಿದ್ದಾರೆ. ಭಾರೀ ಮೊತ್ತಕ್ಕೆ ವಿತರಣೆ ಹಕ್ಕು ಮಾರಾಟವಾಗಿದೆ ಎಂದು ತಿಳಿದುಬಂದಿದೆ.