ನವದೆಹಲಿ: ಭಾರತೀಯ ಚಲನಚಿತ್ರ ನಿರ್ಮಾಣ ಸಂಸ್ಥೆ ವಿಧು ವಿನೋದ್ ಚೋಪ್ರಾ (ವಿವಿಸಿ) ಫಿಲಮ್ಸ್ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಸಹಯೋಗದೊಂದಿಗೆ ಪ್ರಮುಖ ಚಲನಚಿತ್ರ ನಿರ್ಮಾಪಕ ವಿಧು ವಿನೋದ್ ಚೋಪ್ರಾ ಮತ್ತು ಪ್ರಶಸ್ತಿ ವಿಜೇತ ಬರಹಗಾರ ಅಭಿಜಾತ್ ಜೋಶಿ ಅವರ ಜೀವನ ಮತ್ತು ಸಿನಿಮಾ ಕುರಿತ ಸಂಭಾಷಣೆಗಳನ್ನು ಒಳಗೊಂಡಿರುವ 'ಅನ್‌ಸ್ಕ್ರಿಪ್ಟೆಡ್' (Unscripted )ಎಂಬ ಪುಸ್ತಕವನ್ನು ಪ್ರಕಟಿಸಿದೆ.
'ಅನ್‌ಸ್ಕ್ರಿಪ್ಟೆಡ್' ನಲ್ಲಿ, ವಿದು ವಿನೋದ್ ಚೋಪ್ರಾ ತಮ್ಮ ದೀರ್ಘಕಾಲದ ಜೊತೆಗಾರ ಮತ್ತು ಚಿತ್ರಕಥೆಗಾರ ಅಭಿಜತ್ ಜೋಶಿ ಅವರೊಂದಿಗೆ ತಮ್ಮ ಜೀವನ ಪ್ರಯಾಣದ ಬಗ್ಗೆ ಬರೆದಿದ್ದಾರೆ. ಈ ಪುಸ್ತಕವು ಓದುಗರಿಗೆ ಸಮಕಾಲೀನ ಹಿಂದಿ ಚಿತ್ರರಂಗದ ಅತ್ಯುತ್ತಮ ಚಲನಚಿತ್ರ ನಿರ್ಮಾಪಕರ ಮನಸ್ಸು, ವಿಧಾನ ಮತ್ತು ಹುಚ್ಚುತನದ ಬಗೆಗಿನ ಒಳನೋಟವನ್ನು ತಿಳಿಸುತ್ತದೆ.
ತಮ್ಮ ಪುಸ್ತಕ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ, "ಒಮ್ಮೆ ನಾನು ವಿನೋದ್‌ಗೆ ಸಹಾಯ ಮಾಡಿದಾಗ, ಅವನು ನನಗೆ ಶರ್ಟ್ವೊಂದನ್ನು ಉಡುಗೊರೆಯಾಗಿ ಕೊಟ್ಟು, 'quote (ಉಲ್ಲೇಖ)ಕೆ ಬದಲ್ ಶರ್ಟ್!' ಎಂದಿದ್ರು ಎಂಬುದನ್ನು ಸ್ಮರಿಸಿದರು.
1992 ರಲ್ಲಿ, ಜೋಶಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ನಾಟಕ, 'ಎ ಶಾಫ್ಟ್ ಆಫ್ ಸನ್ಲೈಟ್' (A Shaft of Sunlight,)ಅನ್ನು ಬರೆದಿದ್ದು, ಅವರ ಸಹಯೋಗದಿಂದಾಗಿ ಮಿಷನ್ ಕಾಶ್ಮೀರ, ಏಕಲವ್ಯ, ಮತ್ತು ಇತ್ತೀಚೆಗೆ ಶಿಖರ ಮುಂತಾದ ಚಿತ್ರಗಳು ಬಂದವು.
ಚೋಪ್ರಾ, "ನಾನು ಅಭಿಜಾತ್ ಜೋಶಿ ಅವರೊಂದಿಗೆ ಸಿನಿಮಾ ಮತ್ತು ಜೀವನದ ಬಗ್ಗೆ ಮಾತನಾಡುತ್ತಾ ಬಹಳ ಸಮಯ ಕಳೆದೆ. ನಾನು ಸತ್ತ ನಂತರ ಯಾರಾದರೂ ಈ ಪುಸ್ತಕವನ್ನು ಓದಬಹುದು ಮತ್ತು ಹೇಳಬಹುದು - ಕಾಶ್ಮೀರದ ಸಣ್ಣ ಮೊಹಲ್ಲಾದ ವ್ಯಕ್ತಿವೋರ್ವ ದೊಡ್ಡ ಕನಸುಗಳನ್ನು ಹೊಂದಿ ಅವುಗಳ ಪೂರೈಕೆಗಾಗಿ ತನ್ನ ಅಂತರಂಗವನ್ನು ಮಾರಿಕೊಳ್ಳದೇ ಪೂರೈಸಿಕೊಂಡ ಎಂದಮೇಲೆ ನನಗೆ ಯಾಕೆ ಸಾಧ್ಯವಿಲ್ಲ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬಹುದು ಎಂದ್ರು.
1978 ರಲ್ಲಿ ತನ್ನ ಆಸ್ಕರ್ ನಾಮನಿರ್ದೇಶಿತ ಕಿರುಚಿತ್ರದೊಂದಿಗೆ ಸಿನಿಮಾ ಜರ್ನಿ ಪ್ರಾರಂಭಿಸಿದ ಚೋಪ್ರಾ ನಿರ್ದೇಶಕ, ಚಿತ್ರಕಥೆಗಾರ ಮತ್ತು ನಿರ್ಮಾಪಕನಾಗಿ ಮಾಡಿದ ಕೆಲಸಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಬಾಲಿವುಡ್ ಹಿಟ್ ಸಿನಿಮಾಗಳಾದ ಪರಿಂದಾ, ಖಾಮೋಶ್, 1942: ಎ ಲವ್ ಸ್ಟೋರಿ, ಮುನ್ನಾ ಭಾಯ್ ಎಂ.ಬಿ.ಬಿ.ಎಸ್. ಮತ್ತು 3 ಈಡಿಯಟ್ಸ್ ಚಿತ್ರಗಳನ್ನು ನೀಡಿದ್ದಾರೆ.
ವಿವಿಸಿ ಫಿಲಮ್ಸ್ ಇತ್ತೀಚಿನ ದಿನಗಳಲ್ಲಿ ಕೆಲವು ದೊಡ್ಡ -ದೊಡ್ಡ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದೆ. ಪ್ರಸಿದ್ಧ ನಿರ್ದೇಶಕರಾದ ರಾಜ್‌ಕುಮಾರ್ ಹಿರಾನಿ, ಪ್ರದೀಪ್ ಸರ್ಕಾರ್ ಮತ್ತು ಸಂಜಯ್ ಲೀಲಾ ಭನ್ಸಾಲಿ ಸೇರಿದಂತೆ ಹಿಂದಿ ಚಿತ್ರರಂಗದ ಅನೇಕ ಪ್ರತಿಭೆಗಳನ್ನು ವಿವಿಸಿ ಫಿಲಮ್ಸ್ ಪೋಷಿಸಿ ಬೆಳೆಸಿದೆ.
ಇದನ್ನೂ ಓದಿ:ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಸಂಚಾರ ಸ್ಥಗಿತ