ಮದುವೆ ಎಂಬ ಬ್ರಹ್ಮಗಂಟು ಏಳೇಳು ಜನ್ಮದ ನಂಟು. ಸಿನಿಮಾಗಳಲ್ಲಿ ಹತ್ತಾರು ಬಾರಿ ಮದುವೆಯಾಗುವಂತೆ ನಟಿಸುವ ನಟಿಮಣಿಯರಿಗೆ ನಿಜ ಜೀವನದಲ್ಲಿ ಮದುವೆ ಅನ್ನೋ ಯೋಗ ಕೂಡಿ ಬಂದಿರುವುದಿಲ್ಲ. ಈ ಮಾತು ಎಲ್ಲ ಸಿನಿಮಾ ರಂಗದ ನಟಿಮಣಿಯರಿಗೆ ಅನ್ವಯ ಆಗುತ್ತೆ. ಹಾಗಾದ್ರೆ ಈ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಯಾರೆಲ್ಲ ಬ್ಯೂಟಿಫುಲ್ ಹೀರೋಯಿನ್ಸ್ ಇದ್ದಾರೆ ನೋಡೋಣ.
ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ಒಂದು ದಶಕಗಳ ಕಾಲ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದ ನಟಿ ಮೋಹಕ ತಾರೆ ರಮ್ಯಾ. ಸ್ಯಾಂಡಲ್ ವುಡ್ನ ಲಕ್ಕಿ ಹೀರೋಯಿನ್ ಅಂತಾ ಕರೆಯಿಸಿಕೊಂಡಿದ್ದ ರಮ್ಯಾ, ಮದುವೆ ವಿಷ್ಯದಲ್ಲಿ ಮಾತ್ರ ಅನ್ ಲಕ್ಕಿಯಾಗಿದ್ದಾರೆ.
ಹೌದು, ರೀಲ್ ಲೈಫ್ ನಲ್ಲಿ ಅದೃಷ್ಟದ ನಟಿಯಾಗಿದ್ದ ಮೋಹಕ ತಾರೆ ತಮ್ಮ ಮದುವೆ ವಿಷಯದಲ್ಲಿ ಎಡವಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದಿದ್ದಾರೆ, ರಮ್ಯಾ ಮಾಜಿ ಪ್ರಿಯಕರ ರಾಫೆಲ್ ಜೊತೆ ಮದುವೆ ಆಗಿ ಇಷ್ಟು ಹೊತ್ತಿಗೆ ಮುದ್ದಾದ ಮಕ್ಕಳು ಇರುತ್ತಿದ್ವು. ಆದರೆ, ಫಾರಿನ್ ಹುಡುಗ ರಾಫೆಲ್ ಜೊತೆ ರಮ್ಯಾ ಲವ್ ಸ್ಟೋರಿ ಜಾಸ್ತಿ ದಿನ ಉಳಿಯಲಿಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ರಮ್ಯಾ, ರಾಫೆಲ್ ಜೊತೆ ಬ್ರೇಕ್ ಆಫ್ ಮಾಡಿಕೊಂಡಿದ್ದಾರೆ ಅಂತಾ ಸ್ವತಃ ರಮ್ಯಾ ತಾಯಿ ರಂಜಿತಾ ಕೆಲವು ತಿಂಗಳುಗಳ ಹಿಂದೆ ಸ್ಪಷ್ಟನೆ ನೀಡಿದ್ರು.
ಕನ್ನಡದಲ್ಲಿ ಕೋಟ್ಯಂತರ ಅಭಿಮಾನಿಗಳ ಹೃದಯ ಕದ್ದಿರುವ ರಮ್ಯಾ ಅವರ ಮದುವೆ ಬಗ್ಗೆ, ಆಗಾಗ ಗಾಳಿ ಸುದ್ದಿಗಳು ಮಾತ್ರ ಕೇಳಿ ಬರುತ್ತಿರುತ್ತವೆ. ಆದರೆ, ವಯಸ್ಸು 37 ಆದರೂ ರಮ್ಯಾ ಮದುವೆ ಆಗದೇ ಇರೋದು ಆಶ್ಚರ್ಯವೆನಿಸಿದ್ದು, ಇದಕ್ಕೆ ಸ್ವತಃ ರಮ್ಯಾನೇ ಉತ್ತರಿಸಬೇಕಿದೆ.
ಇನ್ನು ಸ್ಯಾಂಡಲ್ ವುಡ್ ನಲ್ಲಿ ರಮ್ಯಾ ತರನೇ ಲಕ್ಕಿ ಹೀರೋಯಿನ್ ಅಂತಾ ಫ್ರೂವ್ ಮಾಡಿರುವ ನಟಿ ರಚಿತಾ ರಾಮ್. ಕನ್ನಡದ ಸ್ಟಾರ್ ನಟರ ಜೊತೆ ರೋಮ್ಯಾನ್ಸ್ ಮಾಡಿರುವ ಡಿಂಪಲ್ ಕ್ವೀನ್ ಮದುವೆ ವಿಷ್ಯ ಒಂದು ಟೈಮಲ್ಲಿ ತುಂಬಾನೇ ಸುದ್ದಿಯಾಗಿತ್ತು. ಕನ್ನಡ ಬುಲ್ ಬುಲ್ ಹುಡ್ಗಿ ಅಂತಾ ಕರೆಸಿಕೊಂಡಿರುವ ರಚಿತಾ ರಾಮ್ ವಯಸ್ಸು ಕೂಡ 30ರ ಹೊಸ್ತಿನಲ್ಲಿದೆ. ಆದರೆ, ಡಿಂಪಲ್ ಸುಂದರಿಗೆ ಇನ್ನು ಕಂಕಣ ಭಾಗ್ಯ ಮಾತ್ರ ಕೂಡಿ ಬಂದಿಲ್ಲ. ಕೆಲವು ವರ್ಷಗಳ ಹಿಂದೆ ರಚಿತಾ ರಾಮ್ ಮದುವೆ ಯಾವಾಗ ಅಂತಾ ಕೇಳಿದಾಗ ಗೌಡ್ರ ಹುಡುಗನನ್ನೇ ಮದುವೆ ಆಗ್ತೀನಿ ಅಂತಾ ಮದುವೆ ಬಗ್ಗೆ ಸುಳಿವು ನೀಡಿದ್ರು. ರಚಿತಾ ರಾಮ್ ಈ ಮಾತು ಹೇಳಿ ಎರಡು ವರ್ಷ ಆಗ್ತಾ ಬಂದ್ರೂ ಮದುವೆ ಯೋಗ ಮಾತ್ರ ಇನ್ನು ಕೂಡಿ ಬಂದಿಲ್ಲ.
ಇನ್ನೂ, ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ತನ್ನ ಟ್ಯಾಲೆಂಟ್ ಏನು ಅನ್ನೋದನ್ನ ಪ್ರೂವ್ ಮಾಡಿರುವ ನಟಿ ಹರಿಪ್ರಿಯಾ. ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹರಿಪ್ರಿಯಾ ಕೂಡ ತಮ್ಮ ಮದುವೆ ಬಗ್ಗೆ ಶಾಕ್ ಕೊಡ್ತಾನೆ ಇರ್ತಾರೆ. ಈ ಬ್ಯೂಟಿ ಕ್ವೀನ್ ವಯಸ್ಸು ಕೂಡ 30ರ ಹೊಸ್ತಿನಲ್ಲಿದ್ರು ತಮ್ಮ ಮ್ಯಾರೇಜ್ ಬಗ್ಗೆ ತಲೆಕಡೆಸಿಕೊಂಡಿಲ್ಲ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿ ಸಿನಿಮಾಗಳನ್ನ ಮಾಡ್ತಾ ಇರೋ ಹರಿಪ್ರಿಯಾಗೆ, ಮದುವೆ ಯಾವಾಗ ಅಂತಾ ಕೇಳಿದ್ರೆ ಕಾಲ ಕೂಡಿ ಬಂದಾಗ ಅಂತ ಜಾಣ್ಮೆಯ ಉತ್ತರ ಕೊಟ್ಟು ಜಾರಿ ಕೊಳ್ಳುತ್ತಾರೆ. ಆದರೆ, ಅಮ್ಮನ ಮುದ್ದಿನ ಮಗಳು ಹರಿಪ್ರಿಯಾ, ಲವ್ ಮ್ಯಾರೇಜ್ ಗಿಂತ ಆರೆಂಜ್ಡ್ ಮ್ಯಾರೇಜ್ ಆಗೋದು ಪಕ್ಕಾ ಅಂತಿದ್ದಾರೆ ಹರಿಪ್ರಿಯಾ ಆಪ್ತರು.
ಬೋಲ್ಡ್ ಹಾಗೂ ಗ್ಲ್ಯಾಮರ್ ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟಿ ಅಂತಾ ಕರೆಯಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ. ಸಿನಿಮಾಗಳಲ್ಲಿನ ಮದುವೆ ಫೋಟೋಗಳನ್ನ ಹಾಕಿ ಗಮನ ಸೆಳೆಯುವ ಈ ತುಪ್ಪದ ಹುಡಗಿ ರಿಯಲ್ ಲೈಫ್ ನಲ್ಲಿ ಮದುವೆ ಆಗೋ ಮನಸ್ಸು ಮಾಡಿಲ್ಲ. ವಯಸ್ಸು 30 ಆದ್ರೂ ಕೂಡ ರಾಗಿಣಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಆದರೆ, ನಿಮ್ಮ ಮದುವೆ ಯಾವಾಗ ಅಂತಾ ಕೇಳಿದ್ರೆ ಹುಡ್ಗನ ಹುಡುಕಿ ಕೋಡಿ ಅಂತಾ ರಾಗಿಣಿ ನಮ್ಮನ್ನೇ ಕೇಳ್ತಾರೆ. ಆದರೆ, ರಾಗಿಣಿ ದ್ವಿವೇದಿಗೆ ಬಾಯ್ ಫ್ರೆಂಡ್ ಇದ್ದಾನೆ ಎಂಬ ಮಾತುಗಳು ಕೂಡ ಕೇಳಿ ಬಂದಿವೆ.
ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದ ನಟಿ ಪೂಜಾ ಗಾಂಧಿ. ಕನ್ನಡದಲ್ಲಿ ಹಲವಾರು ಹಿಟ್ ಚಿತ್ರಗಳನ್ನ ಮಾಡಿರುವ ಪೂಜಾಗಾಂಧಿ ತಮ್ಮ, ಮದುವೆ ವಿಷ್ಯದಲ್ಲಿ ನೊಂದಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಪೂಜಾಗಾಂಧಿ ಇಷ್ಟು ಹೊತ್ತಿಗೆ ಮುದ್ದಾದ ಮಕ್ಕಳು ಗಂಡನ ಜೊತೆ ಇರಬಹುದಿತ್ತು. 2012ರಲ್ಲಿ ಉದ್ಯಮಿ ಆನಂದ್ ಗೌಡ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಪೂಜಾಗಾಂಧಿ, ಕೆಲವು ತಿಂಗಳುಗಳ ನಂತ್ರ ನಿಶ್ಚಿತಾರ್ಥ ಮುರಿದುಕೊಂಡ್ರು. ಅಲ್ಲಿಂದ ಪೂಜಾಗಾಂಧಿ ಮದುವೆ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿಲ್ವಂತೆ. ವಯಸ್ಸು 36 ಆದರೂ ಕೂಡ ಪೂಜಾ ಗಾಂಧಿ ಮಾತ್ರ ಯೋಚನೆ ಮಾಡ್ತಿಲ್ಲ ಅನ್ನೋದು ಅಭಿಮಾನಿಗಳ ಬೇಸರ.
ಇನ್ನೂ, ಚಾರ್ ಮಿನಾರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ ನಟಿ ಮೇಘನಾ ಗಾಂವ್ಕರ್. ಇತ್ತೀಚೆಗೆ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಜಗ್ಗೇಶ್ ಜೊತೆ ರೊಮ್ಯಾನ್ಸ್ ಮಾಡಿದ್ದರು. ಮೇಘಾನಾ ಗಾಂವ್ಕರ್ ಗೂ ಸಪ್ತಪದಿ ತುಳಿಯುವ ಕಾಲ ಕೂಡಿ ಬಂದಿಲ್ಲ. ವಯಸ್ಸು 34 ಆದ್ರೂ ಮೇಘಾನಾ ಗಾಂವ್ಕರ್ ಟ್ರಾವಲಿಂಗ್ ಮಾಡ್ತಾ ಲೈಫ್ ನ್ನ ಎಂಜಾಯ್ ಮಾಡ್ತಾ ಇದ್ದಾರೆ.
ಬೋಲ್ಡ್ ನಟನೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿರೋ ನಟಿ ಶುಭಾ ಪೂಂಜಾ. ಸದ್ಯ ಖಾಲಿ ದೋಸೆ ಕಲ್ಪನಾ ಅಂತಾ ಮಹಿಳಾ ಪ್ರಧಾನ ಸಿನಿಮಾ ಮಾಡ್ತಿರೋ ಶುಭಾಪೂಂಜಾ ಕೂಡ ಮದುವೆ ವಿಚಾರದಲ್ಲಿ ಆನ್ ಲಕ್ಕಿನೇ. ವಯಸ್ಸು 36 ಆಗಿದ್ದರೂ ಕೂಡ ಶುಭಾಪೂಂಜಾ ಕಂಕಣ ಭಾಗ್ಯ ಕೂಡಿ ಬಂದಿಲ್ಲ. ಆದರೆ ಶುಭಾಪೂಂಜಾ ಸ್ನೇಹಿತರ ಪ್ರಕಾರ ಈಕೆ ಉದ್ಯಮಿಯೊಬ್ಬರನ್ನ ಕೈ ಹಿಡಿಯಲಿದ್ದಾರಂತೆ. ಆದರೆ, ಶುಭಾಪೂಂಜಾ ಮಾತ್ರ ಈ ವಿಷ್ಯವನ್ನ ಎಲ್ಲೂ ಹೇಳಿಕೊಂಡಿಲ್ಲ.